Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

1111 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಜಗದ್ಗುರು ಕೊಟ್ಟೂರು ಬಸವಲಿಂಗ ಶ್ರೀಗಳು 

ಬಳ್ಳಾರಿ. ಅ. 05 :   ಮಠಗಳನ್ನು ನಿರ್ಮಾಣ ಮಾಡಿ ಪ್ರವಚನ ಮಾಡುವ ಉದ್ದೇಶ ಭಕ್ತರಲ್ಲಿ ಸನ್ಮಾರ್ಗ ದಾರಿಯಲ್ಲಿ ನಡೆಯಲಿಕ್ಕೆ,   ಮಾನವನಿಗೆ ತನ್ನ ದೇಹ ಬುದ್ಧಿ ಮತ್ತು  ಪ್ರಕೃತಿ  ನಿಜವಾದ ಸಂಪತ್ತುಗಳಾಗಿವೆ.  ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯರಿಗೆ   ಶಾಂತಿ ನೆಮ್ಮದಿ ಸಮಾಧಾನಗಳೇ  ಮುಖ್ಯವಾಗಿ ನಮ್ಮ ಹೃದಯದಲ್ಲಿ ಸಮಾಧಾನವಿರಬೇಕು, ಮತ್ತು ಪ್ರಕೃತಿ ಮಾತೆಗೆ ಸಮನಾಗಿರುವ  ತಾಯಿಯ ಋಣ ದೊಡ್ಡದು ಅದೊಂದು ವ್ಯಕ್ತಿತ್ವ. ತಾಯಿ ಋಣ ಎಷ್ಟು ಕೊಟ್ಟರು 
ತೀರಿಸಲಾಗದಂತ ಬಹುದೊಡ್ಡ ತಾಯಿತನ ತಾಯಿಯನ್ನು ಗೌರವಿಸಬೇಕು ತಾಯ್ತನವನ್ನು ಹೆಚ್ಚಿಸಬೇಕು ಅಂತ ಮಹತ್ಕಾರ್ಯವೇ ಈ ಉಡಿ ತುಂಬುva ಕಾರ್ಯಕ್ರಮವಾಗಿದೆ ಎಂದು ಜಗದ್ಗುರು ಕೊಟ್ಟೂರು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
 ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಶ್ರೀ ಮಠದಿಂದ ಹಮ್ಮಿಕೊಳ್ಳಲಾಗಿದ್ದ 1111 ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ತಮ್ಮ ಆಶೀರ್ವಚನದಲ್ಲಿ ಕೊಟ್ಟೂರು ಶ್ರೀ ಬಸವಲಿಂಗ ಪ್ರಭು ಸ್ವಾಮಿಗಳು ತಿಳಿಸುತ್ತಾ  ಇಂದಿನ ದಿನಮಾನಗಳಲ್ಲಿ ಮನೆಯ ಹಿರಿಯರು ಮಕ್ಕಳಿಗೆ ಸಂಬಂಧಗಳ ಬೆಲೆ ತಿಳಿಸಬೇಕಾದ ಅಗತ್ಯವಿದೆ  ತಂದೆಯ ತಾಯಿ ಅಜ್ಜಿ ಅಜ್ಜ ಎನ್ನುವ ಸಂಸ್ಕಾರ ಸನ್ಮಾರ್ಗಗಳಲ್ಲಿ ನಡೆಯಲು ಮನೆಯ ಹಿರಿಯರ ಜವಾಬ್ದಾರಿ ಬಹುದೊಡ್ಡದಾಗಿದೆ. ಎಂದು ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಶ್ರೀ ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿ, ಆಶೀರ್ವಚನ ನೀಡಿದರು. 
ಬಳ್ಳಾರಿ ನಗರದ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಆವರಣದಲ್ಲಿ ನಡೆದ ಎರಡು ದಿನದ ಕಾರ್ಯಕ್ರಮಗಳಾಗಿರುವ ಪೂಜಾ ಹಾನಗಲ್ ಕುಮಾರ ಶಿವಯೋಗಿಗಳ 109ನೇ ಹಾಗೂ ಪೂಜ್ಯ ಜಗದ್ಗುರು ಡಾಕ್ಟರ್ ಸಂಗನಬಸವ ಮಹಾಸ್ವಾಮಿಗಳ 88ನೇ ಜಯಂತೋತ್ಸವದ ಅಂಗವಾಗಿ ಪ್ರವಚನ ಮಂಗಳ ಮಹೋತ್ಸವ. ಮತ್ತು ಸೋಮಸಮುದ್ರದಿಂದ ಶ್ರೀಧರ ಗಡ್ಡೆ ಮತ್ತು ಬಳ್ಳಾರಿಯ ಶ್ರೀಮಠದವರಿಗೆ ಪಾದಯಾತ್ರೆ. ಶ್ರೀ ಜಗದ್ಗುರು ಕೊಟ್ಟೂರೇಶ್ವರ ರಥೋತ್ಸವ. ಜೊತೆಗೆ 1111 ಮುತ್ತೈದೆಯರಿಗೆ ಉಡಿತುಂಬುವ ಸಮಾರಂಭ ಪೂಜ್ಯರ ಭಾವಚಿತ್ರ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಎರಡನೇ ದಿನದ ಕಾರ್ಯಕ್ರಮದ ತಾಯಿಯ ಋಣ ಉಪನ್ಯಾಸವನ್ನು  ದ್ರಾಕ್ಷಾಯಿಣಿ ಜಿ. ಮಠದ ಗಂಗಾವತಿ ಇವರು ಉಪನ್ಯಾಸ ನೀಡಿ ನಮ್ಮ ಕಾಯಕವೇ ಕೈಲಾಸ ಸತ್ಯ ಶುದ್ಧ ಕೆಲಸಗಳೇ ಕೈಲಾಸವಾಗಬೇಕು. ಸಮಾಜದಲ್ಲಿ ಅನ್ನದಾಸೋಹ ಜ್ಞಾನ ದಾಸೋಹ ಕಾಯಕ ನಮ್ಮಲ್ಲಿರಬೇಕು.ಅದಕ್ಕೆ ತಕ್ಕಂತೆ ನಮ್ಮ ಬದುಕನ್ನು ಆದರ್ಶ ಮಾಡಿಕೊಳ್ಳಬೇಕು. ತಂದೆ ತಾಯಿಯನ್ನು ಪ್ರೀತಿಸಬೇಕು. ಗೌರವಿಸಬೇಕು ತಾಯಿಯ ಋಣ ಜಗಕ್ಕೆ ವಿಗಿಲಾದ ಋಣ. ಅದಕ್ಕೆ ಸಾಕ್ಷಿಯಂತೆ ಇಂದು ನಡೆಯುವ ಹರ ಗುರುಚರ ಮೂರ್ತಿಗಳಿಂದ ಮುತ್ತೈದೆಯರಿಗೆ ಉಡಿಅಕ್ಕಿ ಕಾರ್ಯಕ್ರಮ ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
 ವೇದಿಕೆಯಲ್ಲಿ ಕಂಬರಚೇಡು ಕಲ್ಯಾಣ  ಸ್ವಾಮಿ, ಮಾಜಿ ನಗರ ಶಾಸಕ ಜಿ ಸೋಮಶೇಖರ ರೆಡ್ಡಿ,  ದರೂರು, ಸೋಮಸಮುದ್ರ, ಕುರುಗೋಡು, ಶ್ರೀಧರ ಗಡ್ಡೆ, ಬೂದುಗುಪ್ಪ,  ಶಾಖಾ ಮಠದ ಪೂಜ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಶ್ರೀ ಮಠದ ಶರಣಯ್ಯ ಸ್ವಾಮಿ ಮಾತನಾಡಿದರು. ನಿರೂಪಣೆಯನ್ನು ಭುವನಶ್ರೀ ನೆರವೇರಿಸಿದರು. 
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಗೊಗ್ಗ ಚೆನ್ನಬಸವರಾಜ ಹೊಸಪೇಟೆ.   ಪಲ್ಲೆದ  ಪಂಪಾಪತಿ,  ಡಾ. ಕೆ. ಎಂ .ಮಹೇಶ್ವರ ಸ್ವಾಮಿ, ಶ್ರೀ ಡಾ. ಎಸ್. ಜೆ .ವಿ. ಮಹಿಪಾಲ್, ಎಚ್. ಎಮ್. ಗುರುಸಿದ್ಧ ಸ್ವಾಮಿ,  ಮಸೀದಿಪುರ ಸಿದ್ದರಾಮನಗೌಡ, ಎಸ್. ಮಲ್ಲನಗೌಡ, ‌ಡಾ. ಎಸ್ ಉಮಾಮಹೇಶ್ವರಿ, ಡಾ ರೇಣುಕಾ ಮಂಜುನಾಥ,  ಎಸ್. ಸುರೇಖಾ ಮಲ್ಲನಗೌಡ,  ಬಿಕೆ ಅನ್ನಪೂರ್ಣಮ್ಮ,  ಡಾ. ಭಾಗ್ಯಲಕ್ಷ್ಮಿ,  ಪಲ್ಲೆದ್ ಮೈತ್ರಿ,  ಸಿದ್ದರಾಮ ಕಲ್ಮಠ, ಎಸ್. ಗುರುಲಿಂಗನಗೌಡ,  ನಂದೀಶ್ ಮಠಂ, ಬಿ.ಮೃತ್ಯುಂಜಯ ಸ್ವಾಮಿ, ಕೋಳೂರು ಚಂದ್ರಶೇಖರಗೌಡ, ದೇವೇಂದ್ರ ಸ್ವಾಮಿ, ವೀರಶೈವ ವಿದ್ಯಾವರ್ಧಕ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ, ಅಕ್ಕನ ಬಳಗ, ಸಕ್ಕರೆ ಕರಡೇಶ ವಿದ್ಯಾರ್ಥಿ ಬಳಗ, ಪೂಜ್ಯರ ಜಯಂತಿ ಮಹೋತ್ಸವ ಸಮಿತಿ, ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠ ಬಳ್ಳಾರಿ ಸಿಬ್ಬಂದಿ ವರ್ಗ,ಹಾಗೂ ಬಳ್ಳಾರಿ ಸೋಮಸಮುದ್ರ ಶ್ರೀಧರ ಗಡ್ಡೆ, ಶಿರವಾರ, ಕಪ್ಗಲ್ಲು, ಕೋಳೂರು, ಮದಿರೆ, ಕುರುಗೋಡು, ಬೂದುಗುಪ್ಪ, ದರೂರು, ಸಿರಿಗೇರಿ, ಹಾಗೂ ಎಲ್ಲಾ ಗ್ರಾಮಗಳ ಗುರುಹಿರಿಯರು ಮತ್ತು ಸಮಸ್ತ ಸದ್ಭಕ್ತರು ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸಂಗೀತ ಬಳಗ ಕಲಾವಿದರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಮಠದಿಂದ ಸಕಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ನೆರವೇರಿಸಲಾಯಿತು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ