ತಾಳಿಕೋಟೆ, ತಾಲೂಕಾಡಳಿತ ವತಿಯಿಂದ ಇದೇ ಅಕ್ಟೋಬರ್ ೨೩ರಂದು ವೀರರಾಣಿ ಕಿತ್ತೂರು ಚೆನ್ನಮ್ಮಾಜಿ ಜಯಂತಿ ಹಾಗೂ ನವಂಬರ್ ೧ರಂದು ಆಚರಿಸಲ್ಪಡುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಾಗೂ ಅರ್ಥಪೂರ್ಣ ಆಚರಿಸಲು ನಿರ್ಧರಿಸಲಾಯಿತು.
ಸೋಮವಾರರಂದು ತಹಶಿಲ್ದಾರ ಕಚೇರಿಯ ಸಭಾಂಗಣದಲ್ಲಿ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ತಾಲೂಕ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ಹಾಗೂ ತಹಸಿಲ್ದಾರ ಮಲ್ಲಿಕಾರ್ಜುನ ಅರಕೇರಿ ಅವರು ಮಾತನಾಡಿ ಚೆನ್ನಮ್ಮಾಜಿ ಜಯಂತಿ ಅಂಗವಾಗಿ ಅಕ್ಟೋಬರ್ ೨೩ರಂದು ಬೆಳಿಗ್ಗೆ ೦೯:೦೦ ಘಂಟೆಗೆ ಪಟ್ಟಣದ ಕಿತ್ತೂರಾಣಿ ಚೆನ್ನಮ್ಮ ವೃತ್ತದಲ್ಲಿ ಹಾಗೂ ಬೆಳಿಗ್ಗೆ ೧೦:೦೦ ಘಂಟೆಗೆ ತಹಸಿಲ್ದಾರ್ ಕಾರ್ಯಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ಇದರ ಜೊತೆಗೆ ಬೆಳಿಗ್ಗೆ ೮:೦೦ ಗಂಟೆಗೆ ಎಲ್ಲಾ ಸರ್ಕಾರಿ ಕಚೇರಿ, ಶಾಲೆ-ಕಾಲೇಜುಗಳಲ್ಲಿ ಕಿತ್ತೂರು ಚೆನ್ನಮ್ಮಾಜೀಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿತವಾಗಿ ಆಚರಿಸಲಾಗುವುದು. ಸಮುದಾಯದ ಅಧ್ಯಕ್ಷರು, ಮುಖಂಡರು ಹಾಗೂ ಎಲ್ಲಾ ಸಮಾಜದ ಗಣ್ಯರು ತಪ್ಪದೆ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಕೋರಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಗುವುದು ಎಂದು ತಿಳಿಸಿದ ಅವರು ಕಳೆದ ವರ್ಷ ತೆಗೆದುಕೊಂಡ ಎಲ್ಲ ಕಾರ್ಯಕ್ರಮಗಳ ಜೊತೆಗೆ ಈ ಬಾರಿ ವಿಶೇಷ ರೀತಿಯಲ್ಲಿ ಆಚರಿಸಲಿಕ್ಕಾಗಿ ಕಾರ್ಯಕ್ರಮದ ರೂಪ ರೇಷೆಗಳನ್ನು ಸಿದ್ಧಪಡಿಸಲು ಅಕ್ಟೋಬರ್ ೨೩ ರಂದು ಮಧ್ಯಾಹ್ನ ೩-೦೦ ಘಂಟೆಗೆ ಪಟ್ಟಣದ ಎಲ್ಲಾ ಸಮಾಜಗಳ ಪ್ರಮುಖರ, ಸಂಘ ಸಂಸ್ಥೆಗಳ ಮುಖ್ಯಸ್ಥರ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ ಇನ್ನೊಂದು ಸಿದ್ಧತಾ ಸಭೆ ನಡೆಸಲಾಗುವುದು ಇದರಲ್ಲಿ ಎಲ್ಲಾ ಇಲಾಖೆಗಳ ತಾಲೂಕ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವರು ಎಂದರು.
ಸಿ ಆರ್ ಸಿ ರಾಜು ವಿಜಾಪುರ ಅವರು ಕಾರ್ಯಕ್ರಮದ ರೂಪ ರೇಷೆಗಳ ಬಗ್ಗೆ ಸಭೆಗೆ ತಿಳಿಸಿದರು.
ಈ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತ ಸಮಾಜದ ಮುಖಂಡರು ಕಾರ್ಯಕ್ರಮದ ಯಶಸ್ವಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿ ಆರ್ ಬಿ ದಮ್ಮೂರಮಠ, ಪಂಚಮಸಾಲಿ ಸಮಾಜದ ಅಧ್ಯಕ್ಷ ಡಾ. ವಿ. ಎಸ್.ಕಾರ್ಚಿ, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಎ.ಬಿ.ಬಿರಾದಾರ, ಶಿಕ್ಷಕ ಚೌದ್ರಿ, ಕಸಾಪ ಅಧ್ಯಕ್ಷ ಆರ್ ಎಲ್ ಕೊಪ್ಪದ, ಮಾಜಿ ಉಪ ತಹಶೀಲ್ದಾರ ಜಿ.ಜಿ.ಮದರಕಲ್ಲ, ಕಾಶಿನಾಥ ಮುರಾಳ, ವೀರೇಶಗೌಡ ಬಾಗೇವಾಡಿ, ಮಡುಸೌಕಾರ ಬಿರಾದಾರ, ಡಿ.ಕೆ.ಪಾಟೀಲ, ಪ್ರಭು ಬಿಳೇಭಾವಿ, ಶರಣಗೌಡ ಗೊಟಗುಣಕಿ, ಜಗದೀಶ ಬಿಳೇಭಾವಿ, ಪ್ರಕಾಶ ಸಾಸಾಬಾಳ, ಅಬೂಬಕರ್ ಲಾಹೋರಿ, ಅಪ್ಪು ಪಾಟೀಲ, ನಿಂಗಣ್ಣ ಕುಂಟೋಜಿ, ಮಲ್ಲಿಕಾರ್ಜುನ ಹಿಪ್ಪರಗಿ, ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.