ಯರಗಟ್ಟಿ: ಪಟ್ಟಣಕ್ಕೆ ಆಗಮಿಸಿದ ಕಿತ್ತೂರು ರಾಣಿ ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಯ ರಥಕ್ಕೆ ತಹಶೀಲ್ದಾರ ಎಂ ವ್ಹಿ ಗುಂಡಪ್ಪಗೋಳ ಪೂಜೆ ಸಲ್ಲಿಸಿ, ಕಿತ್ತೂರ ರಾಣಿ ಚನ್ನಮ್ಮ ಪ್ರತಿಮೆಗೆ ಪು?ರ್ಚನೆ ನೆರವೇರಿಸಿದರು. ವೀರ ರಾಣಿ ಚೆನ್ನಮ್ಮ ಅವರ ಧೈರ್ಯ, ಶೌರ್ಯ ಹಾಗೂ ಬ್ರಿಟಿ?ರ ವಿರುದ್ಧದ ಹೋರಾಟದ ಸ್ಫೂರ್ತಿಯನ್ನು ವಿಜಯ ಜ್ಯೋತಿ ಯಾತ್ರೆಯ ಮೂಲಕ ಜನರಿಗೆ ತಿಳಿಸಿಕೊಡುವುದಾಗಿದೆ ಎಂದು ತಹಶೀಲ್ದಾರ ಹೇಳಿದರು.ವಿಜಯ ಜ್ಯೋತಿ ಯಾತ್ರೆಯ ಮೆರವಣಿಗೆಯು ವಿವಿಧ ಜಾನಪದ ಕಲಾ ತಂಡಗಳಿಂದ ರಾಜರಾಜೇಶ್ವರಿ ಆಶ್ರಮದಿಂದ ಆರಂಭಗೊಂಡು, ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತ, ಗಾಂಧೀಜಿ ವೃತ್ತ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಗೋಕಾಕ ತಾಲೂಕಿನಿಂದ ಯರಗಟ್ಟಿ ತಾಲೂಕಗೆ ಆಗಮಿಸಿದ ವಿಜಯ ಜ್ಯೋತಿ ಯಾತ್ರೆಯು ಕಟಕೋಳ ರಾಮದುರ್ಗ ತಾಲೂಕಿಗೆ ಬೀಳ್ಕೊಡಲಾಯಿತು.ಈ ವೇಳೆ ಪೂಜ್ಯ ಗಣಪತಿ ಮಹಾರಾಜರು, ತಾ. ಪಂ ಇಓ ಬಸವರಾಜ ಅಯ್ಯನಗೌಡರ, ಪ.ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಸವದತ್ತಿ ನಗರ ಸಭೆ ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿನಮಠ, ತಾಲೂಕಾ ಪಶು ವೈದ್ಯಾಧಿಕಾರಿ ಎಮ್ ವ್ಹಿ ಪಾಟೀಲ, ಹೇಸ್ಕಾಂ ಅಧಿಕಾರಿ ಮಹಾಂತೇಶ ಯರಗಟ್ಟಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪ. ಪಂ. ಇಂಜಿನಿಯರ ವೆಂಕಟೇಶ ಕಾಮಣ್ಣವರ, ಕಂದಾಯ ನಿರೀಕ್ಷಕ ವಾಯ್ ಎಫ್ ಮುರ್ತೇನವರ, ಗ್ರಾಮ ಆಡಳಿತಾಧಿಕಾರಿ ಎಲ್ ಬಿ ದಳವಾಯಿ, ಪ. ಪಂ. ಸದಸ್ಯರಾದ ನಿಖಿಲ ಪಾಟೀಲ, ಹನಮಂತ ಹಾರುಗೋಪ್ಪ, ಪ್ರಕಾಶ ವಾಲಿ, ಶಿವಾನಂದ ಕರಿಗೊಣ್ಣವರ, ಬಾಸ್ಕರ ಹಿರೇಮೆತ್ರಿ, ಉಮೇಶ ಪಾಟೀಲ, ಪಂಚಮಸಾಲಿ ಸಮಾಜದ ಮುಖಂಡರಾದ ಚಂದ್ರಶೇಖರ ಸವದತ್ತಿ, ಶಿವಾನಂದ ಬಳಿಗಾರ, ರವಿ ಅಣ್ಣಿಗೇರಿ, ಈರಣ್ಣಾ ಹೂಲ್ಲೂರ, ನಿರ್ಮಲ ಕೊಚಿಂಗ ಸೆಂಟರ ವಿದ್ಯಾರ್ಥಿಗಳು, ಅಂಗನವಾಡಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.