LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಂಇಐ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಕೇಂದ್ರಗಳಿಗೆ ಜಮೀನು ಲಭ್ಯ: ಎಂ ಬಿ ಪಾಟೀಲ

ಬೆಂಗಳೂರು: ಸರಕಾರಿ ಸ್ವಾಮ್ಯದ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಎಂಇಐ) ಸಂಸ್ಥೆಯು ರಾಜ್ಯದ ಹಲವು ಭಾಗಗಳಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಕೇಂದ್ರಗಳನ್ನು ತೆರೆಯಲು ತಲಾ ಒಂದು ಎಕರೆ ಜಮೀನು ಒದಗಿಸುವಂತೆ ಕೋರಿದ್ದು, ಅದನ್ನು ಈಡೇರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಎಂಇಐ ಅಧ್ಯಕ್ಷ ಎಸ್‌.ಮನೋಹರ್‌ ಈ ಸಂಬಂಧ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ʻವಿಜಯಪುರ, ಮೈಸೂರು, ಚಿತ್ರದುರ್ಗ, ಮಂಗಳೂರು, ರಾಯಚೂರು, ಬಳ್ಳಾರಿ ಮತ್ತು ಇತರ ಮುಖ್ಯ ಸ್ಥಳಗಳಲ್ಲಿ ಇರುವ ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯತೆ ನೋಡಿಕೊಂಡು ಜಮೀನು ನೀಡಲಾಗುವುದು. ಇದರಿಂದ ಅಡೆತಡೆ ಇಲ್ಲದ ಮತ್ತು ಗುಣಮಟ್ಟದ ವಿದ್ಯುತ್‌ ವಿತರಣೆಗೆ ಸಹಾಯವಾಗಲಿದೆʼ ಎಂದಿದ್ದಾರೆ.

ಸರಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್‌ ಕಾರ್ಖಾನೆ ಈಗಾಗಲೇ ಗುಣಮಟ್ಟದ ಟ್ರಾನ್ಸ್‌ಫಾರ್ಮರ್‌ಗಳನ್ನು ತಯಾರಿಸುತ್ತಿದೆ. ಹಾಗೆಯೇ, ಎಂಇಐ ಉತ್ಕೃಷ್ಟ ದರ್ಜೆಯ 11 ಕೆ.ವಿ. ಸ್ವಿಚ್‌ಗೇರುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಆದರೆ, ನಮ್ಮಲ್ಲಿ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿಗೆ ವ್ಯವಸ್ಥಿತವಾದ ಜಾಲವಿಲ್ಲ. ಸರಕಾರವು ತನ್ನ ಅಧೀನದ ಉದ್ಯಮ ಸಂಸ್ಥೆಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದರಂತೆ ಎಂಇಐಗೆ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ.ಎಂಇಐ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ ಈ ಸಂದರ್ಭದಲ್ಲಿ ಇದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾನೂನು ಸುವ್ಯವಸ್ಥೆಗೂ ಜಿಡಿಪಿಗೂ ನೇರ ಸಂಬಂಧವಿದೆ: ಸಿ.ಎಂ.ಸಿದ್ದರಾಮಯ್ಯನಾನು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ: ಬಿಜೆಪಿಗೆ ಸಿಎಂ ತರುಗೇಟುKSRTC ಗೆ ಪ್ರತಿಷ್ಠಿತ ' world HRd ಕಾಂಗ್ರೆಸ್ ಪ್ರಶಸ್ತಿ-2026' ಗರಿಹಿಂದಿ ಭಾಷೆ ವಿಚಾರದಲ್ಲಿ ಬಿಜೆಪಿಯವರಿಂದ ಕಮೆಂಟಿಗೆ ವಿರೋಧಸುಧರ್ಮ ಸಾಂಸ್ಕೃತಿಕ ಸಂಘ ದಿಂದ ಮಹಿಳಾ ದಿನಾಚರಣೆಜೈನರಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿದೆ : ಹಂಪಾ ನಾಗರಾಜಯ್ಯ ಬೇಸರವಿದ್ಯಾರ್ಥಿಗಳು SPRINTFEST 2026 ನಲ್ಲಿ ₹40 ಲಕ್ಷ ಸಂಗ್ರಹಿಸುವ ಗುರಿಸಂಧ್ಯಾ ಜನ ಸಂಸ್ಕೃತಿ ಟ್ರಸ್ಟ್ ನಿಂದ 8ನೇ ವರ್ಷದ ವಾರ್ಷಿಕೋತ್ಸವ ಮಹಿಳಾ ದಿನಾಚರಣೆ ಪ್ರಯುಕ್ತ ಮಾಜಿ ಪ್ರಧಾನಿ ಸ್ಮರಣೆಯಲ್ಲಿ ಇಂದಿರಾ ಕ್ರೀಡೋತ್ಸವ-2026ಆಸ್ತಿ ತೆರಿಗೆ ಬಾಕಿ: ಸುಸ್ತಿದಾರರ ಆಸ್ತಿಗಳನ್ನು ನಗರ ಪಾಲಿಕೆಯ ಹೆಸರಿಗೆ ಬದಲಾಯಿಸಿಕೊಳ್ಳಲು ಕ್ರಮ