ಘಟಪ್ರಭಾ.,ನಗರದ ವಾಲ್ಮೀಕಿ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಸಪ್ಟೆಂಬರ್ 25ರಿಂದ ಪ್ರಾರಂಭವಾಗಿರುವ ಮಧ್ಯ ವರ್ಜನ ಶಿಬಿರದ ಉದ್ಘಾಟನಾ ಸಮಾರಂಭವು
ಶುಕ್ರವಾರದಂದು ನಡೆಯಿತು.
ಸಾನಿಧ್ಯ ವಹಿಸಿ ಘಟಪ್ರಭಾ ಹೊಸಮಠದ ಪೂಜ್ಯ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ ಸಾರ್ವಜನಿಕರು ಜೀವನದಲ್ಲಿ ಅಂಟಿಸಿಕೊಂಡ ನಾನಾ ಚಟ ಹಾಗೂ ವ್ಯಾಸನಗಳನ್ನು ತೊರೆದು ಜೀವನದಲ್ಲಿ ಮುಂದೆ ಬಂದು ತಮ್ಮ ಸಂಸಾರ ಸುಖವಾಗಿರಲು ಮುಂದೆ ಬಂದು ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಸಂಘದ ಪ್ರಯೋಜನ ಪಡೆಯಿರಿ ಎಂದರು.
ಜೆ ಜಿ ಸಹಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಬಿ ಕೆ ಎಚ್ ಪಾಟೀಲ ಮಾತನಾಡಿ ಶ್ರೀ ಧರ್ಮಸ್ಥಳ ಸಂಘ ಸಾರ್ವಜನಿಕರಿಗೆ ಹಾಗೂ ಮಹಿಳೆಯರಿಗೆ ಅಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ಮಾಡುತ್ತಿದ್ದು ಇದರ ಸದುಪಯೋಗ ಪಡೆಯಿರಿ ಎಂದರು.
ಅಧ್ಯಕ್ಷತೆಯನ್ನು ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಸವರಾಜ ಬೆಳ್ಳಣ್ಣವರ ವಹಿಸಿದ್ದರು.
ಬೆಳಗಾವಿ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿ ಲವಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘವು ಇಂತಹ ನೂರಾರು ಮಧ್ಯವರ್ಜನ ಶಿಭೀರ ಏರ್ಪಡಿಸಿ ಯಶಸ್ವಿ ಅಗಿದು, ಇದರ ಉಪಯೋಗ ಈ ಭಾಗದ ಜನರು ಪಡೆಯಬೇಕೆಂದು ಮನವಿ ಮಾಡಿದರು.
ಹಿರಿಯರಾದ ಸುರೇಶ್ ಪಾಟೀಲ,
ಸೋಮಶೇಖರ್ ಮಗದುಮ, ಕೆ ಆರ್ ಎಚ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಹುಕ್ಕೇರಿ, ಸುಧೀರ ಜೋಡಟ್ಟಿ, ಮಾಜಿ ಜಿ ಪಂ ಸದಸ್ಯರಾದ ವಂದನಾ ಕತ್ತಿ ಮುಂತಾದವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೋಕಾಕ ತಾಲೂಕು ಅಧ್ಯಕ್ಷರಾದ ಶ್ರೀಮತಿ ಭಾರತಿ ಮದಭಾವಿ
ಹಿರಿಯರಾದ ಗಂಗಾಧರ ಬಡಕುಂದ್ರಿ, ಪುಟ್ಟು ಖಾನಾಪುರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಶ್ರೀಕಾಂತ ಮಹಾಜನ,ಈರಣ್ಣ ಕಲಕುಟಗಿ, ಕಾಡಪ್ಪಾ ಕರೋಶಿ, ಶ್ರೀಕಾಂತ ಕುಲಕರ್ಣಿ, ಪತ್ರಕರ್ತ ಗಣೇಶ ಗಾಣಿಗ, ಸುಭಾಸ ಗಾಯಕವಾಡ,
ಈಶ್ವರ ಚೌಗಲಾ,ಕರವೇ ರಾಜಾಧ್ಯಕ್ಷ ಕೆಂಪಣ್ಣಾ ಚೌಕಶಿ, ಡಾ, ವಿರೇಂದ್ರ ಹೊಸಮಠ, ಅಶೋಕ ನಾಯಿಕ, ಅರ್ಜುನ ಗಾಡಿವಢ್ಡರ ಮುಂತಾದವರು ಇದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ಸಮಿತಿಯ ಮೋಟಯ್ಯ, ಜ್ಯೋತಿ ವಾಘ ಮತ್ತು ಪದಾಧಿಕಾರಿಗಳು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.