Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಸಹಕಾರವಿಲ್ಲದೆ ಜೀವನ ಸಾಗಿಸುವುದು ಕಷ್ಟ - ಉಪನ್ಯಾಸಕ ಗುರವ

 

 ಬೀಳಗಿ- ಸಹಕಾರ ಎನ್ನುವುದು ಜೀವರಾಶಿಗಳ ಉದಯದೊಂದಿಗೆ ಆರಂಭಗೊಂಡಿದೆ, ಆರ್ಥಿಕಾಭಿವೃದ್ಧಿಯಲ್ಲಿ ಸಹಕಾರ ಬಹಳ ಮುಖ್ಯ, ರಾಜ್ಯದಲ್ಲಿ ೮.೪೮ ಲಕ್ಷ ಸಹಕಾರ ಸಂಘಗಳಿಗೆ.ಅದರಲ್ಲಿ ೬.೨೧ ಲಕ್ಷ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ, ಜೊತೆಗುಡಿ ನಿರ್ದಿಷ್ಟ ಗುರಿಯೊಂದಿಗೆ ಕೆಲಸ ಮಾಡುವುದೇ ಸಹಕಾರ, ಆರ್ಥಿಕ ಮತ್ತು ಸಾಮಾಜಿಕ ಬದ್ದತೆಗಾಗಿ, ಪ್ರತಿಯೊಬ್ಬರಿಗಾಗಿ ಎಲ್ಲರು ಎನ್ನುವ ಧ್ಯೇಯವೇ ಸಹಕಾರ ಎಂದು ಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ವಿ ಕೆ ಗುರವ ತಿಳಿಸಿದರು.

     ಇಲ್ಲಿನ ಕಾಳಿಕಾಕಮಠೇಶ್ವರ ದೇವಸ್ಥಾನದ ಸಭಾಭವನದಲ್ಲಿ  ಹಮ್ಮಿಕೊಂಡಿದ್ದ  ಬೀಳಗಿ ಸ್ನೇಹಿತರ ಅಭಿವೃದ್ಧಿ ಸಂಘದ ೮ ನೇ ವಾರ್ಷಿಕೋತ್ಸವ ಹಾಗು ಬೀಳಗಿ ಸ್ನೇಹಿತರ ಅಭಿವೃದ್ಧಿ ಸಂಘದ ೫ ನೇ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸಂಘವು ಕಳೆದ ಎಂಟು ವರ್ಷಗಳಲ್ಲಿ ವಿಶ್ವ ಪರಿಸರ ದಿನಾಚರಣೆ, ಮಹಿಳಾ ದಿನಾಚರಣೆ,  ವ್ರದ್ದಾಶ್ರಮ ಬೇಟಿ ನೀಡಿ ಸಹಾಯ ಮಾಡುವುದು, ರಕ್ತದಾನ ಶಿಬಿರ , ಹೀಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ, ಸ್ನೇಹದಿಂದ ಸಹಕಾರ ಸಂಘ ನೆಡೆದರೆ  ಬೆಳವಣಿಗೆ ಸಾಧ್ಯ, ಸ್ವಾರ್ಥ ವಿಲ್ಲದ ಪ್ರೀತಿಯಿಂದ ಜೀವನ ಸಮ್ರದ್ದಿ ಜೊತೆಗೆ ಜಾತಿ ಧರ್ಮ, ರಾಜಕಾರಣ ಯಾವುದು ಇಲ್ಲದೆ ಎಲ್ಲರಲ್ಲೂ ಏಕತೆ ಕಾಣುವ ಗೆಳೆಯರು ಬಳಗವೇ ನಿಜವಾದ ಸಹಕಾರ ಎಂದರು,

   ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಚಂದ್ರಶೇಖರ ಕಟಗೇರಿ ಕಳೆದ ಐದು ವರ್ಷಗಳಲ್ಲಿ ೯೬ ಮಾಸಿಕ ಸಭೆ ಮಾಡಲಾಗಿದೆ, ಹಾಜರಾತಿ,ಸಾಲ ವಸೂಲಾತಿ, ಉಳಿತಾಯ, ಪ್ರಾಮಾಣಿಕತೆ ಇದ್ದಲ್ಲಿ ಸಂಘದ ಅಭಿವೃದ್ಧಿ ಆಗಲು ಸಾಧ್ಯ,೨೦೧೮ ರಲ್ಲಿ ಸ್ಥಾಪನೆಯಾದ ಸಂಘವು,ಬರುವ ದಿನಗಳಲ್ಲಿ ಬೀಳಗಿ ಮಹಿಳಾ ಅಭಿವೃದ್ಧಿ ಸಹಕಾರಿ ಬ್ಯಾಂಕ್ ಆರಂಭ ಮಾಡುವ ಗುರಿ ಹೊಂದಲಾಗಿದೆ ಎಂದ ಅವರು ಸದ್ಯ ೨೨.೧೨ಲಕ್ಷ ರೂ ದುಡಿಯುವ ಬಂಡವಾಳ ಹೊಂದಿದೆ ಸಂಘವು ಪ್ರಸಕ್ತ ಸಾಲಿನಲ್ಲಿ ೧.೯೦ ಲಕ್ಷ ರೂ ನಿವ್ವಳ ಲಾಭಗಳಿಸಿದೆ ಎಂದರು.

       ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷರಾದ ವಿಶ್ರಾಂತ ಪ್ರಾಂಶುಪಾಲರಾದ ಎಚ್ ಬಿ ಧರ್ಮಣ್ಣವರ,ವಚನ ಪಿತಾಮಹ ಫ ಗು ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ತಾಲೂಕಾ ಅಧ್ಯಕ್ಷೆ ಪ್ರಮೀಳಾ ಘೋರ್ಪಡೆ,ರೇಣುಕಾ ನಾಗನಗೌಡರ, ಶಂಕರ್ ಬಡಿಗೇರ, ನ್ಯಾಯವಾದಿ ರವೀಂದ್ರ ಜೈನಾಪುರ, ಮುದ್ದು ಡಂಗಿ, ಶಿಕ್ಷಕರಾದ ಶ್ರೀಶೈಲ ದೊಡಮನಿ,ಯಾಸೀನ್ ದರ್ಗಾ ಸೇರಿದಂತೆ ಇತರರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ