ಕಾರವಾರ: ಷೇರು ಮಾರುಕಟ್ಟೆಯಲ್ಲಿ (Stock Market) ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ನಷ್ಟ ಅನುಭವಿಸಿದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ (Uttarakannada) ಜಿಲ್ಲೆಯ ಸಿದ್ದಾಪುರದಲ್ಲಿ (Siddapura) ನಡೆದಿದೆ.
ನಗರದ ನಿವಾಸಿ ಹರ್ಷವರ್ಧನ್ (22) ಮೃತ ಯುವಕ. ಈತ ಮೊಬೈಲ್ ಮೂಲಕ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಟ್ರೇಡಿಂಗ್ ಮಾಡುತ್ತಿದ್ದು, ನಿರಂತರ ಹೂಡಿಕೆಯಿಂದ ಲಕ್ಷಾಂತರ ರೂಪಾಯಿ ನಷ್ಟಕ್ಕೊಳಗಾಗಿದ್ದಾನೆ. ಆರ್ಥಿಕ ಒತ್ತಡದಿಂದ ಬೇಸತ್ತ ಆತ ಮನೆಯಲ್ಲೇ ಫ್ಯಾನಿಗೆ ನೇಣುಬಿಗಿದುಕೊಂಡು ಜೀವಾಂತ್ಯ ಮಾಡಿಕೊಂಡಿದ್ದಾನೆ.
ಘಟನೆಯ ಕುರಿತು ಹರ್ಷವರ್ಧನ್ ತಂದೆ ಚಂದ್ರಶೇಖರ್ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.