ತಾಳಿಕೋಟೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮುದ್ದೇಬಿಹಾಳ/ತಾಳಿಕೋಟೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಗಣೇಶ ನಗರ, ಶ್ರೀ ಖಾಸ್ಗತೇಶ್ವರ ಮಠ, ಎ.ಪಿ.ಎಂ.ಸಿ., ದಿ ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಗಣೇಶ ನಗರ ವಲಯದ ಸಂಯುಕ್ತ ಆಶ್ರಯದಲ್ಲಿ ಅ.೧೩ರಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ ೭.೩೦ಕ್ಕೆ ಎ.ಪಿ.ಎಂ.ಸಿ. ಸಭಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪೂಜೆ ಹಾಗೂ ವೃತಧಾರಿಗಳ ಸಂಕಲ್ಪ ಆರಂಭವಾಗಲಿದ್ದು, ೧೦.೩೦ಕ್ಕೆ ಶ್ರೀ ಸತ್ಯನಾರಾಯಣ ಮಹಾಮಂಗಳಾರತಿ ನೆರವೇರಲಿದೆ. ಬೆಳಿಗ್ಗೆ ೧೧ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಮಧ್ಯಾಹ್ನ ೧೨.೩೦ಕ್ಕೆ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ೧ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ದೇವರು ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀಮತಿ ಜ್ಯೋತಿ ಖೋತ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶ್ರೀಮತಿ ಸುವರ್ಣಾ ಬಿರಾದಾರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ, ತಾಳಿಕೋಟೆ ಪುರಸಭೆಯ ಮುಖ್ಯಾಧಿಕಾರಿ ಸುನಿಲ ಪಾಟೀಲ, ಜ.ಜಾ. ವೇದಿಕೆಯ ಉಪಾಧ್ಯಕ್ಷ ವಾಸುದೇವ ಹೆಬಸೂರ, ಬಸನಗೌಡ ಯಡಿಯಾಪುರ, ರಾಜು ಹಂಚಾಟೆ ಹಾಗೂ ಜಿಲ್ಲಾ ನಿರ್ದೇಶಕ ಮೋಹನ ನಾಯ್ಕ, ಅಡತ್ ಮರ್ಚಂಟ್ ಅಧ್ಯಕ್ಷ ಅಶೋಕ ಶೆಟ್ಟಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಕಾಶಿನಾಥ ಸಜ್ಜನ, ಹಿರಿಯ ಪತ್ರಕರ್ತರಾದ ಜಿ.ಟಿ.ಘೋರ್ಪಡೆ, ಮಾಸುಮಸಾ ಕೇಂಭಾವಿ, ಎಂ.ಎಸ್.ಸರಶೆಟ್ಟಿ, ಮೋಹನ್ ಬಡಿಗೇರ, ರಾಜಣ್ಣ ಸೊಂಡೂರ, ಯೋಜನಾಧಿಕಾರಿ ಶಿವಾನಂದ ಪಿ, ಭಾಗವಹಿಸಲಿದ್ದಾರೆ.
ಪೂಜಾ ಸಾಮಗ್ರಿ ತರಲು ಮನವಿ
ಪೂಜಾ ಸಂಕಲ್ಪದಲ್ಲಿ ಭಾಗವಹಿಸುವ ಭಕ್ತಾದಿಗಳು ಬೆಳಿಗ್ಗೆ ೭ ಗಂಟೆಗೆ ಪೂಜಾ ಸ್ಥಳದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಸಂಘಟಕರು ತಿಳಿಸಿದ್ದಾರೆ. ಪೂಜೆಗೆ ಆಗಮಿಸುವಾಗ ಒಂದು ಸೇರು ಅಕ್ಕಿ, ಎರಡು ತೆಂಗಿನಕಾಯಿ, ಐದು ಕುಡಿಬಾಳೆ ಎಲೆ, ವೀಳ್ಯದೆಲೆ, ಅಡಿಕೆ, ಬಿಡಿ ಹೂ, ಅರಿಶಿನ-ಕುಂಕುಮ, ಒಂದು ಸ್ಟೀಲ್ ಲೋಟ, ಒಂದು ಚಮಚ, ಐದು ಬಾಳೆಹಣ್ಣು ಹಾಗೂ ಉದ್ದಿನಕಡ್ಡಿ ತರಬೇಕು ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.