Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಶ್ರೀವಾಸವಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಶಾಂತಿಧಾಮದಲ್ಲಿ ಅರ್ಥಪೂರ್ಣ ರಕ್ಷಾ ಬಂಧನ

ಬಳ್ಳಾರಿ:  29:..ಸಹೋದರತ್ವ, ಪ್ರೀತಿ, ಕಾಳಜಿ ಹಾಗೂ ಮಾನವೀಯತೆಯ ಪವಿತ್ರ ಸಂದೇಶ ಸಾರುವ ರಕ್ಷಾ ಬಂಧನವನ್ನು ಶ್ರೀವಾಸವಿ ವಿದ್ಯಾಲಯದ 10ನೇತರಗತಿಯ ವಿದ್ಯಾರ್ಥಿಗಳು ಕಂಟೋನ್ಮೆಂಟ್ ಸಮೀಪದ ಶಾಂತಿಧಾಮದಲ್ಲಿ ಅರ್ಥಪೊರ್ಣವಾಗಿ ಆಚರಿಸಿದರು.
ಕಳೆದ 5 ವರ್ಷಗಳಿಂದ ಶ್ರೀವಾಸವಿ ವಿದ್ಯಾಲಯವು ಶಾಂತಿಧಾಮದಲ್ಲಿ ರಕ್ಷಾ ಬಂಧನವನ್ನು ಆಚರಿಸುವ ಸಂಪ್ರದಾಯವನ್ನು ಮುಂದಿವರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ಶಾಂತಿಧಾಮದ ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ರಕ್ಷಾ ಬಂಧನ ಆಚರಿಸಿ, ಪ್ರೀತಿ ಮತ್ತು ಸಹೋದರತ್ವವದ ಭಾವನೆಯನ್ನು ಹಂಚಿಕೊಂಡರು.
ಮಕ್ಕಳ ಮನಸ್ಸು ಮೃದುವಾದ ಮಣ್ಣಿನಂತೆ: ಬಾಲ್ಯದಲ್ಲೇ ಬಿತ್ತಿದ ಮೌಲ್ಯಗಳೇ ಅವರ ವ್ಯಕ್ತಿತ್ವದ ಬುನಾದಿಯಾಗುತ್ತವೆ.” ಎಂಬ ಆಶಯದೊಂದಿಗೆ ಶ್ರೀ ವಾಸವಿ ಕಿಂಡರ್ಗಾರ್ಟನ್ ಪುಟಾಣಿ ವಿದ್ಯಾರ್ಥಿಗಳು ರಕ್ಷಾ ಬಧನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು. ಪುಟ್ಟ ಮಕ್ಕಳ ವಯಸ್ಸಿಗೆ ತಕ್ಕಂತೆ ರಾಖಿ ಕಟ್ಟೆ ಸಿಹಿ ಹಂಚಿಕೆ ಹಾಗೂ ಪರಸ್ಪರ  ಶುಭಾಶಯ ವಿನಿಮಯದ ಮೂಲಕ ಹಬ್ಬದ ಸಂಭ್ರಮವನ್ನು ಅನುಭವಿಸಿದರು.
ಬಣ್ಣಬಣ್ಣದ ರಾಖಿಗಳೊಂದಿದೆ  ಕಂಗೊಳಿಸಿದ ಪುಟಾಣಿ ಮಕ್ಕಳು ಪರಸ್ಪರ ರಾಖಿ ಕಟ್ಟಿಕೊಂಡು, ನಗು-ಸಂತಸ ಹಂಚಿಕೊಂಡರು. ಅವರ ಮುಗ್ಧ ನಗು ಮತ್ತು ಉತ್ಸಾಹವು ಹಬ್ಬಕ್ಕೆ ವಿಶೇಷ ಮೆರಗು ತಂದಿತು. ಹಬ್ಬಗಳ ಮೂಲಕ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಪರಿಚಸುವದರ ಜೊತೆಗೆ, ಉತ್ತಮ ಮೌಲ್ಯಗಳನ್ನು ಅವರ ಮನಸ್ಸಿನಲ್ಲಿ ಬಾಲ್ಯದಲ್ಲೇ ಬಿತ್ತುವುದು ಅತ್ಯಂತ ಅಗತ್ಯ ಎಂಬ ಸಂದೇಶವನ್ನು ಈ ಆಚರಣೆ ಸಾರಿತು.
ಪ್ರತಿವರ್ಷದಂತೆ ಈ ವರ್ಷವು ರಕ್ಷಾ ಬಂಧನ ಅಚರಿಸುವ ಮೂಲಕ ಶ್ರೀವಾಸವಿ ವಿದ್ಯಾಲಯವು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನೂ ವಿದ್ಯಾರ್ಥಿಗಳ ಬದುಕಿನಲ್ಲಿ ಬಿತ್ತುವ ತನ್ನ ಬದ್ದತೆಯನ್ನು ಮತ್ತೊಮ್ಮೆ ಸಾರಿತು.
ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾರು, ಶಿಕ್ಷಕರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ರಕ್ಷಾ ಬಂಧನದ ಶುಭಾಶಯಗಳನ್ನು ತಿಳಿಸಿ, ಭಾರತೀಯ ಸಂಸ್ಕೃತಿ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ