ಬಳ್ಳಾರಿ. ಅ. 06: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಪರ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಸೋಮವಾರ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಭರ್ಜರಿ ಮತಯಾಚನೆ ಮಾಡಿದರು. ನಗರದ ಫಸ್ಟ್ ಗೇಟ್ ಗಾಲಿ ರುಕ್ಮಿಣಿಮ್ಮ ಚಂಗಾ ರೆಡ್ಡಿ ಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಸತ್ಯನಾರಾಯಣ ಪೇಟೆ ಪ್ರದೇಶದ ಸರಳಾದೇವಿ ಕಾಲೇಜು ಸೇರಿದಂತೆ ನಗರದ ನಾನಾ ಶಾಲಾ ಕಾಲೇಜುಗಳಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಮತಯಾಚಿಸಿ, ಮೈತ್ರಿ ಅಭ್ಯರ್ಥಿ ಶಶಿಲ್ ಜಿ. ನಮೋಶಿ ಅವರಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ, ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಿ ಆಶೀರ್ವಾದಿಸಬೇಕು ಎಂದು ಮನವಿ ಮಾಡಿದರು.
ಸರಳಾದೇವಿ ಕಾಲೇಜಿನಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಮಾತನಾಡಿ, ಮುoಬರುವ ತಾ. ಪಂ., ಜಿ. ಪಂ. ಸೇರಿ ಎಲ್ಲ ಚುನಾವನೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಎದುರಿಸುವ ಕುರಿತು ಪಕ್ಷದ ವರಿಷ್ಟರ ತೀರ್ಮಾನವಾಗಿದೆ. ಬಳ್ಳಾಯಲ್ಲೂ ಈ ಕುರಿತು ಸಭೆ ನಡೆಸಿ ಚರ್ಚಿಸಲಾಗಿದೆ. ಪ್ರತಿಯೊಬ್ಬ ಮತದಾರರು ನಮ್ಮ ಜೆಡಿಎಸ್ ಹಾಗೂ
ಬಿಜೆಪಿ ಮೈತ್ರಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರನ್ನು ಬೆಂಬಲಿಸಿ ಆಶೀರ್ವಾದಿಸಬೇಕು ಎಂದು ಮನವಿ ಮಾಡಿದರು.
ಹಿಂದೆ ರಾಜ್ಯದಲ್ಲಿ ಕೇವಲ 210 ಕಾಲೇಜುಗಳಿದ್ದವು. ಕುಮಾರಣ್ಣ ಅವರು ಮುಖ್ಯಮಂತ್ರಿಯಾದ ಬಳಿಕ 440ಕ್ಕೆ ಹೆಚ್ಚಳವಾದವು. ಉನ್ನತ ಶಿಕ್ಷಣ ಕಾಲೇಜುಗಳನ್ನು ಪ್ರಾರಂಭಿಸಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸುವಲ್ಲಿ ನಮ್ಮ ಕುಮಾರಣ್ಣ ಅವರು ಶ್ರಮಿಸಿದ್ದಾರೆ. ಎಲ್ಲವನ್ನು ಶಿಕ್ಷಕರು, ಮತದಾರ ಬಾಂಧವರು ಗಮನದಲ್ಲಿಟ್ಟುಕೊಂಡು, ಇದೆ ಅ. 23 ರಂದು ನಡೆಯಲಿರುವ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ,ಗೆಲ್ಲಿಸಿ ಆಶೀರ್ವಾದಿಸಬೇಕು. 2028ಕ್ಕೆ ನಮ್ಮ ಕುಮಾರಣ್ಣ ಸಿ. ಎಂ. ಆಗುವುದು ಖಚಿತ, ಇದರಲ್ಲಿ ಅನುಮಾನವೇ ಬೇಡ, ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಟಿ. ದುರಗಪ್ಪ ಹನುಮೇಶ್, ಮಾರೆಪ್ಪ ಎ. ಕೆ., ರಫೀಕ್, ಗುರುರಾಜ್, ಡಾ. ಬಸಪ್ಪ ಸೇರಿದಂತೆ ಪಕ್ಷದ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಅದ್ದಿಗೇರಿ ರಾಮಣ್ಣ, ನಗರ ಅಧ್ಯಕ್ಷ ಹೊನ್ನೂರು ಸ್ವಾಮಿ, ಎಸ್ಸಿ ಅಧ್ಯಕ್ಷ ವಸಂತ ಕುಮಾರ್, ಭಾಷಾ, ಜಯಲಕ್ಷ್ಮಿ, ಸ್ವಾತಿ, ಶಬಾನಾ ಇತರರಿದ್ದರು.