ಚ. ಕಿತ್ತೂರು., ರಾಜ್ಯದ ಗಮನ ಸೆಳೆದಿರುವ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಚನ್ನಮ್ಮ ಉತ್ಸವ ಪ್ರಥಮ ದಿನವಾದ ಶುಕ್ರವಾರದಂದು ಮದ್ಯಾಹ್ನ 2 ಘಂಟೆಯಿಂದ ಸಣ್ಣದಾಗಿ ಪ್ರಾರಂಭವಾದ ಮಳೆ ಹಂತ ಹಂತವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿದ್ದು, ಈ ಮಳೆಯಿಂದ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ತೊಂದರೆ ಆಗವ ಸಂಭವ ಇದ್ದು, ಆದರೂ ಈ ಭಾಗದ ರೈತರಿಗೆ ಮಳೆಯ ಅವಶ್ಯಕತೆ ಇದ್ದು, ಮಳೆಯೂ ಚನ್ನಾಗಿ ಆಗಲಿ, ಉತ್ಸವವವು ಚನ್ನಾಗಿ ನಡೆಯಲ್ಲಿ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ 2025 ನೇ ವರ್ಷದ ಕಿತ್ತೂರು ಚನ್ನಮ್ಮ ಉತ್ಸವದಲ್ಲಿ ಸತತವಾಗಿ ಎರಡು ದಿನ ಮಳೆಯಾಗಿ ಮೂರನೇ ದಿನ ಮಳೆ ಸ್ಥಗಿತಗೊಂಡಿತು. ಮುಖ್ಯ ವೇದಿಕೆ ಉತ್ತಮವಾಗಿ ನಿರ್ಮಾಣ ಮಾಡಿರುವದರಿಂದ ವೇದಿಕೆ ಆವರಣದಲ್ಲಿ ಒಳಗೆ ಮಳೆಯ ತೊಂದರೆ ಆಗುವದಿಲ್ಲ, ಹೋಗಿ ಬರುವ ಜನರಿಗೆ ತೊಂದರೆ ಆಗಲಿದೆ.