ಮುಗಳಖೋಡ [೧೭] ನುಡಿದಂತೆ ನಡೆದ ನಿಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಯಿಂದ ನಿಮ್ಮೆಲ್ಲರ ಬದುಕು ಹಸನಾಗಿಸುವದರ ಜೋತೆ ನಿಮ್ಮ ಮನೆ ಬಾಗಿಲಿಗೆ ಬಂದು ಬೇಡಿಕೆ ಪೂರೈಸಲು ಪ್ರಜಾ ಸೇವಾ ಆಂದೋಲನ ಜಾರಿಗೆ ತಂದಿದೆ ಅದರ ಸದುಪಯೋಗ ಪಡೆದು ಕೊಂಡು ನೆಮ್ಮದಿ ಜೀವನ ನಿಮ್ಮದಾಗಲಿ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಅವರು ಶನಿವಾರ ಸಮೀಪದ ಹಂದಿಗುಂದ ಗ್ರಾಮದಲ್ಲಿ ಪ್ರಜಾ ಸೇವಾ ಆಂದೋಲನ ಉದ್ಘಾಟಿಸಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ತಾವು ಯಾವುದೇ ಕಾರಣಕ್ಕೂ ದೂರದ ತಾಲೂಕಾ ಕಛೇರಿಗಳಿಗೆ ಅಲಿಯದೆ ಇಡಿ ತಾಲೂಕಾ ಆಡಳಿತ ನಿಮ್ಮೂರಿಗೆ ಬಂದಿದೆ ಅವರಿಗೆ ಸಮಾಧಾನದಿಂದ ಬೇಡಿಕೆಗನ್ನು ಘನೀಕೃತ ವ್ಯವಸ್ಥೆ ಮೂಲಕ ಸಲ್ಲಿಸಿ ಹತ್ತಾರು ದಿನಗಳಲ್ಲಿ ನಿಮ್ಮ ಬೇಡಿಕೆ ಪೂರೈಸಾಗುತ್ತದೆ ಎಂದು ಹೇಳಿದರು.ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಗ್ರಾಮಾಧಿಕಾರಿಗಳು ಸಾರ್ವಜನಿಕರಿಂದ ವಿವಿಧ ಬೇಡಿಕೆಯ ಮನವಿ ಸ್ವೀಕರಿಸಿದರು . ಮುಖಂಡರು ಸಾರ್ವಜನಿಕರು ಇದ್ದರು.