ಆನೆಕಲ್: ಕೃಷಿ ಹೊಂಡಕ್ಕೆ (Agricultural Pond) ಬಿದ್ದು ತಾಯಿ (Mother) ಹಾಗೂ ಮಗಳು ಮೃತಪಟ್ಟ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಸಾಗರ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರು ಲಾವಣ್ಯ (28) ಮತ್ತು ಲಕ್ಷತಾ (8) ಎಂದು ಗುರುತಿಸಲಾಗಿದೆ. ಲಾವಣ್ಯ ಅವರು 2017ರಲ್ಲಿ ಸಂಪತ್ ಅವರನ್ನು ವಿವಾಹವಾಗಿದ್ದರು. ಈ ಸಾವಿನ ಹಿನ್ನೆಲೆ ಅನುಮಾನ ವ್ಯಕ್ತಪಡಿಸಿರುವ ಮಹಿಳೆಯ ಪೋಷಕರು ಪತಿ ವಿರುದ್ಧ ಆರೋಪ ಮಾಡಿ, ತನಿಖೆ ನಡೆಸುವಂತೆ ಸೂರ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.