- ಹೊಸಪೇಟೆ: ಸ್ತ್ರೀಯರಲ್ಲಿ ಶ್ರೇಷ್ಠ ಳು,ಎಂದು ಯೇಸುವಿನ ತಾಯಿ ಮರಿಯಮ್ಮ ಅವರನ್ನುನಾವು ಕೊಂಡಾಡುವ ದಿನ ಇದಾಗಿರುವುದರಿಂದ ಇಂದು ಪ್ರತಿ ಕ್ಯಾಥೊಲಿಕ್ ಕ್ರೈಸ್ತ ಸಮುದಾಯ ಜಗತ್ತಿನಾದ್ಯಂತ " ತಾಯಿ ಮರಿಯ"ಅವರ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ.
ದೇವರ ಚಿತ್ತದಂತೆ ನಡೆದ ಎಕೈಕ ಮಹಿಳೆ ಎಂದರೆ " ತಾಯಿ ಮರಿಯಳು" ಅದ್ದರಿಂದ ಗ್ಯಾಬ್ರಿಯೇಲ್ ದೇವದೂತನು ,ಮರಿಯ ಳನ್ನು ದೇವಮಾತೆಯೇ , ವರ ಪ್ರಸಾದ ಪೂರ್ಣೆಯೇ ಎಂದು ಸಂಭೋದಿಸಿದರು. ಎಂದು ಫಾ: ಭಸಿಲ್ ರವರು ತಮ್ಮ ಪ್ರಭೋದನೆಯಲ್ಲಿ ಹಬ್ಬದ ಆಚರಣೆ ಬಗ್ಗೆ ವಿಶೇಷ ಪ್ರವಚನ ನೀಡಿದರು.. ನಗರದ ಸೆಕ್ರೆಡ್ ಹಟ್೯ ಚರ್ಚ ನಲ್ಲಿ ಯೇಸುವಿನ ತಾಯಿಯಾದ 'ಮರಿಯ' ಅವರ ಜನ್ಮದಿನದ ನಿಮಿತ್ತ ನಡೆದ ಪ್ರಾರ್ಥನಾ ವಿಧಿಯಲ್ಲಿ ಮೇಲಿನಂತೆ ಬೋಧಿಸಿದರು. ಅವರನ್ನು ಸ್ತ್ರೀಯರಲ್ಲೇ ದನ್ಯಳು ಎಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಮರಿಯಮ್ಮ ಅವರ ಜನ್ಮ ಪವಿತ್ರಾತ್ಮರಿಂದ ನಿಗದಿಪಡಿಸಿಲ್ಪಟ್ಟಿತ್ತು. ದೇವರ ವಾಕ್ಯವನ್ನು ತನ್ನ ಉದರದಲ್ಲಿ ಹೊತ್ತ ಮಹಿಳೆ ಇವರಾಗಿರುವುದರಿಂದ ಅವರು ಶ್ರೇಷ್ಠ ರೆಂದು ಕರೆಯಲ್ಪಟ್ಟಿದ್ದಾರೆ ಅದ್ದರಿಂದ ಇಂದು ಅವರ ಜನ್ಮದಿನ ಕೊಂಡಾಡುತ್ತಿದ್ದೇವೆ ಎಂದು ಪ್ರಭೋದಿಸಿದರು. ಈ ಹಬ್ಬದ ವಿಶೇಷ .ಪ್ರಾರ್ಥನಾ ವಿಧಿಯನ್ನು ಪಾ: ಭಗವಂತರಾಜ್ ಅವರ ನೇತೃತ್ವದಲ್ಲಿ . ನಡೆಯಿತು. ಪ್ರಾರ್ಥನೆಯ ನಂತರ'ತಾಯಿ ಮರಿಯಳ ಮೂರ್ತಿ' ಯನ್ನು ಭಕ್ತಿಯಿಂದ ನೂರಾರು ಭಕ್ತರು ಕೈ ಯಲ್ಲಿ ಮೇಣದ ದೀಪಗಳನ್ನು ಹಿಡಿದು ಭಕ್ತಿ ಗೀತೆ ಗಳನ್ನು ಹಾಡುತ್ತಾ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು..ಮೆರವಣಿಗೆಯ ತೇರು ಹೂವಿನಿಂದ ಸಿಂಗರಿಸಲ್ಪಟ್ಟಿತ್ತು. ಚರ್ಚಿನ ಯುವ ತಂಡದ ಮುಖ್ಯಸ್ಥ ಕ್ಲಿಂಟನ್ ಅವರ ತಂಡ ಹೆಚ್ಚು ಮುತುವರ್ಜಿಯಿಂದ ತೇರನ್ನು ಸಿಂಗರಿಸಿದ್ದರು. ಸಿಸ್ಟರ್ ಎಲಿಜಬೆತ್ , ಜಾನ್ ಮತ್ತು ಸೆಲ್ವ ಅವರ ತಂಡ ಭಕ್ತಿ ಗೀತೆಗಳನ್ನು ಹಾಡುತ್ತಾ ಸಾಗುತ್ತಿದ್ದರು.