ಬೆಳಗಾವಿ: ಸಾರ್ವಜನಿಕ ಭಾಷಣ ಕಲೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ, “Speak • Connect • Lead” (ಮಾತನಾಡಿ • ಸಂಪರ್ಕ ಬೆಳೆಸಿ • ನಾಯಕತ್ವ ವಹಿಸಿ) ಎಂಬ ಧ್ಯೇಯವಾಕ್ಯದೊಂದಿಗೆ ಮೃಣಾಲಿನಿ ಗ್ಲೋಬಲ್ ಇಂಗ್ಲಿಷ್ ಕ್ಲಬ್ನ 2026–27ನೇ ಸಾಲಿನ ಅಧಿಕೃತ ಉದ್ಘಾಟನಾ ಸಮಾರಂಭವು ಅದ್ಧೂರಿಯಾಗಿ ನೆರವೇರಿತು. ನಾಲ್ಕು ತಿಂಗಳ ಯೋಜನೆ ಮತ್ತು ಸಿದ್ಧತೆಯ ಫಲವಾಗಿ ಈ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು.
ಸೃಜನಶೀಲ ಉದ್ಯಮಿ ಶ್ರೀಮತಿ ಸಂಜನಾ ಶೀಗಿಹಳ್ಳಿ ಅವರು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ, ಕ್ಲಬ್ನ ನೂತನ ಕಾರ್ಯಕಾರಿ ಸಮಿತಿಗೆ ಅಧಿಕೃತವಾಗಿ ಪದಗ್ರಹಣ ಮಾಡಿಸಿದರು. ಈ ಸಂದರ್ಭದಲ್ಲಿ ಕ್ಲಬ್ನ ಸಂಸ್ಥಾಪಕರಾದ ಶ್ರೀ ಆರ್. ಶೇಖರ್ ಕೊಳ್ಳಿಮಠ ಹಾಗೂ ಸಹ-ಸಂಸ್ಥಾಪಕರಾದ ಶ್ರೀಮತಿ ಕೋಮಲ್ ಕೊಳ್ಳಿಮಠ ಉಪಸ್ಥಿತರಿದ್ದರು.
ನೂತನ ಕ್ಲಬ್ ಲೀಡರ್ ಶ್ರೀಮತಿ ನಮ್ರತಾ ಬಿರಾದಾರ್ ಅವರು ತಮ್ಮ ಕಾರ್ಯಕಾರಿ ತಂಡದೊಂದಿಗೆ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಸಂದರ್ಭದಲ್ಲಿ ತಂಡಕ್ಕೆ ಅಧಿಕೃತ ಚಾರ್ಟರ್ ಪ್ರಮಾಣಪತ್ರ, ಪ್ರಮಾಣಪತ್ರಗಳು ಹಾಗೂ ಸದಸ್ಯತ್ವದ ಪಿನ್ಗಳನ್ನು ವಿತರಿಸಲಾಯಿತು.
ಸ್ಥಳೀಯ ಪ್ರತಿಭೆಗಳನ್ನು ಜಾಗತಿಕ ಮಟ್ಟದ ನಾಯಕರನ್ನಾಗಿ ರೂಪಿಸುವುದು ಕ್ಲಬ್ನ ಪ್ರಮುಖ ಉದ್ದೇಶವಾಗಿದೆ ಎಂದು ಸಂಸ್ಥಾಪಕರು ತಿಳಿಸಿದರು. ಮುಂಬರುವ ವರ್ಷದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರಗಳು ಹಾಗೂ ನಾಯಕತ್ವ ಬೆಳೆಸುವ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಕ್ಲಬ್ನ ಉದ್ದೇಶಗಳನ್ನು ಸಾಕಾರಗೊಳಿಸುವುದಾಗಿ ನೂತನ ಕ್ಲಬ್ ಲೀಡರ್ ಶ್ರೀಮತಿ ನಮ್ರತಾ ಬಿರಾದಾರ್ ಭರವಸೆ ನೀಡಿದರು.