ಮುಗಳಖೋಡ (೧೯) ಪಟ್ಟಣದ ಮುಗಳಖೋಡ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಘವು 10.67 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಶಿವಾನಂದ ಮಾರುತಿ ಗೋಕಾಕ ಹೇಳಿದರು .
ಅವರು ಶನಿವಾರ ಸಂಘದ ಸಭಾ ಭವನದಲ್ಲಿ2025-26 ನೇ ಸಾಲಿನ 81 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಸಹಕಾರಿ ಭೀಷ್ಮ ಸಿದ್ದನಗೌಡ ಪಾಟೀಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿ
ಈ ವರ್ಷ ಡಿವಿಡೆಂಡ್ ಹಂಚಲಾಗುವುದು ಹಾಗೂ ಸಂಘದ ಬೆಳವಣಿಗೆ ಹಾಗೂ ರೈತರ ಸಂಘದ ಸದಸ್ಯರ ಏಳ್ಗೆಗಾಗಿ ನಿಮ್ಮೆಲ್ಲರ ಸಹಕಾರ ಮುಖ್ಯವಾಗಿದ್ದು ಎಲ್ಲರೂ ಸಹಕಾರ ತತ್ವದ ಅಡಿಯಲ್ಲಿ ಸಾಗೋಣ ಎಂದು ಹೇಳಿದರು .
ಸದಸ್ಯರಾದ ಮಹಾದೇವ ಶೇಗುಣಸಿ,ಅಶೋಕ ಬಾಗಿ ಸಂಕಷ್ಟದಲ್ಲಿರುವ ರೈತರು ಸಾಲ ಮರುಪಾವತಿಗಾಗಿ ಹೆಚ್ಚಿನ ಬಡ್ಡಿ ಆಕರಿಸಿ ಮತ್ತೆ ಅವರನ್ನು ಸಾಲದ ಸೂಲಿಗೆ ಸಿಲುಕಿಸದೆ ಬೇರೆ ಬ್ಯಾಂಕಿನಲ್ಲಿಯ ಸಂಘದ ಠೇವು ಹಣದ ಮೇಲೆ ಸಾಲಪಡೆದು ಆ ಬಡ್ಡಿಯಂತೆ ಸಾಲ ಮರುಪಾವತಿ ಮಾಡಿರಿ ಮತ್ತು ಸದಸ್ಯರಿಗೆ ಸರಿಯಾಗಿ ಖರ್ಚು ವೆಚ್ಚದ ಸಂಪೂರ್ಣ ಮಾಹಿತಿ ನೀಡಿ ಸಂಘದ ಬೆಳವಣಿಗೆಗೆ ಸಭೆಯಪರ ವಿಷಯ ಮಂಡಿಸಿದರು.ಅಧ್ಯಕ್ಷ ಶಿವಾನಂದ ಗೋಕಾಕ ನಿರ್ದೇಶಕ ಸುರೇಶ ಜಂಬಗಿ ಸಭೆಯ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿ ಇತರ ವಿಷಯಗಳ ಬಗ್ಗೆ ಚರ್ಚಿಸಲಾಯಾತು. ಬ್ಯಾಂಕ್ ನಿರೀಕ್ಷಕರ ಅನುಪಸ್ಥಿತಿಯಲ್ಲಿ
ಉಪಾಧ್ಯಕ್ಷ ಹನುಮಾಸಾಹೇಬ ನಾಯಕ ನಿರ್ದೇಶಕರಾದ ಲಕ್ಷ್ಮಣ್ಣ ಮುನ್ಯಾಳ, ಕರೆಪ್ಪ ಮಂಟೂರ , ಲಕ್ಷ್ಮಣ್ಣ ಗೋಕಾಕ, ರಾಮಚಂದ್ರ ಕುರಾಡೆ , ಚನ್ನಪ್ಪ ಯಡವಣ್ಣವರ ಮುಖಂಡರಾದ ಭೀರಪ್ಪ ಶೇಗುಣಸಿ, ರವಿ ಖೆತಗೌಡರ ,ಗಿರಮಲ್ಲ ಕೊಪ್ಪದ ,ರಮೇಶ ಖೆತಗೌಡರ, ಅಶೋಕ ಬಾಗಿ ,ಮಹಾದೇವ ಶೇಗುಣಸಿ ,ಲಕ್ಷ್ಮಣ್ಣ ಅರವಳ್ಳಿ ,ಸಾಗರ ತೂಗದೇಲಿ ,ಕುಮಾರ ಬಾಬಣ್ಣವರ, ಶ್ರೀಶೈಲ ಗೋಕಾಕ ,ತಮ್ಮಣ್ಣ ಹಿಪ್ಪರಗಿ ,ಭೀರಪ್ಪ ಕವಾಲಿ ,ರಾಮಪ್ಪ ಗೋಕಾಕ,ಹಾಗೂ ನೂರಾರು ಸದಸ್ಯರ ಉಪಸ್ಥಿತಿಯಲ್ಲಿ ಸಭೆ ಜರುಗಿತು .ಅಪ್ಪಾಸಾಹೇಬ ಬಾಬಣ್ಣವರ, ಸ್ವಾಗತಿಸಿದರು ಮುಖ್ಯ ಕಾರ್ಯನಿರ್ವಹಕ ಗೋಪಾಲ ಗೋಕಾಕ ವರದಿ ವಾಚಿಸಿದರು, ಮಹಾದೇವ ಉಗಾರೆ ವಂದಿಸಿದರು.