ಮಹಾಲಿಂಗಪುರ: ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಯಲ್ಲಿ ತಾಸೆ ವಾದನ ಕಲಾ ಪ್ರಕಾರದ ಬದಲಾಗಿ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಜಾನಪದ ಕರಡಿಮಜಲು ಕಲಾ ಪ್ರಕಾರ ಆಯ್ಕೆ ಮಾಡುವ ಹಾಗೂ ಬಾಗಲಕೋಟೆ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಾಯಂ ಸಹಾಯಕ ನಿರ್ದೇಶಕ ನೇಮಕ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಸುವ ಚಿಗುರು ಹಾಗೂ ಕಲಾ ಪ್ರತಿಭೋತ್ಸವ ಮಕ್ಕಳ ಕಾರ್ಯಗಳ ಕಾರ್ಯಕ್ರಮಗಳಲ್ಲಿ ಜಾನಪದ ಚರ್ಮ ವಾದ್ಯಗಳಿಗೆ ಅವಕಾಶ ನೀಡುವ ಕುರಿತು ಬಾಗಲಕೋಟೆಯಲ್ಲಿ ಮಹಾಲಿಂಗಪುರ ಕಲಾವಿದರ ಬಳಗದ ವತಿಯಿಂದ ಸಚಿವ ವಿಜಯಾನಂದ ಕಾಶಪ್ಪನವರಿಗೆ ಸ್ಥಳೀಯ ಪುರಸಭಾ ಮುಖ್ಯಾಧಿಕಾರಿ ಮುಖಾಂತರ ಅರ್ಜಿ ಸಲ್ಲಿಸಿದರು.
ಬೆಳಿಗ್ಗೆ ಪುರಸಭಾ ಆಭರಣದಲ್ಲಿ ಸೇರಿದ ಕಲಾವಿದರು ಬಾಗಲಕೋಟೆ ಜಿಲ್ಲೆ ವಾಸ್ತುಶಿಲ್ಪ, ಜಾನಪದ ಕಲೆ, ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ ಜಿಲ್ಲೆಯ ಸಾಂಪ್ರದಾಯಿಕ ಜಾನಪದ ಕಲೆ ಕರಡಿ ಮಜಲು ಕಲೆಗೆ ೬೦೦ ವ?ಗಳ ಇತಿಹಾಸವಿದೆ, ರಾ?ಮಟ್ಟದಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರಿದ್ದಾರೆ ಇಂಥ ಕಲೆ ಮತ್ತು ಕಲಾವಿದರಿದ್ದರೂ ಜಿಲ್ಲೆಯ ಕಲೆಯನ್ನು ಕಡೆಗಣಿಸಿ ಕರಾವಳಿ ಭಾಗದ ತುಳುನಾಡಿನ ತಾಸೆ ವಾದನ ಕಲೆಗೆ ಮಣೆ ಹಾಕಿರುವುದು ಬಾಗಲಕೋಟೆ ಜಿಲ್ಲೆಯ ಕಲಾವಿದರಿಗೆ ಮಾಡಿದ ಅವಮಾನ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿ ಜಿಲ್ಲೆಗಳಿಂದ ಆಯಾ ಜಿಲ್ಲೆಯ ಕಲಾ ಪರಂಪರೆಯನ್ನೇ ಆಯ್ಕೆ ಮಾಡಿ ಎಂದು ಮೌಖಿಕವಾಗಿ ಆದೇಶಿಸಿದ್ದಾರೆ, ಅದೇ ಪ್ರಕಾರ ಧಾರವಾಡದ ಜಗ್ಗಿ ಹಲಗಿ, ಬೆಳಗಾವಿಯ ದಟ್ಟಿ ಕುಣಿತ, ಕೊಪ್ಪಳದ ಹಗಲು ವೇ?, ವಿಜಯಪುರದ ಸತ್ತಿಗೆ ಕುಣಿತ ಆಯ್ಕೆ ಮಾಡಲಾಗಿದೆ ಆದರೆ ಬಾಗಲಕೋಟೆ ಜಿಲ್ಲೆಯ ಕಲಾವಿದರನ್ನು ಆಯ್ಕೆ ಮಾಡದೆ ಹೊರ ಜಿಲ್ಲೆಯ ಕಲೆಗೆ ಮಣೆ ಹಾಕಿದ್ದು ಅಧಿಕಾರಿಗಳು ದೊಡ್ಡ ದ್ರೋಹ ಮಾಡಿದ್ದಾರೆ, ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದ ಅವರು ಅಧಿಕಾರಿಗಳು ಮತ್ತು ಇಲಾಖೆಯ ವಿರುದ್ಧ ಧಿಕ್ಕಾರ ಕೂಗಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಖಾಯಂ ಸಹಾಯಕ ನಿರ್ದೇಶಕರಿಲ್ಲದೆ ಇರುವುದು ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ಅವರನ್ನು ನೇಮಿಸುವಂತೆ ಹಾಗೂ ಚಿಗುರು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅವಕಾಶ ನೀಡುವಂತೆ ಕಳೆದ ೮ ವ?ಗಳಿಂದ ಅರ್ಜಿ ಸಲ್ಲಿಸುತ್ತಿದ್ದರೂ ಅವುಗಳನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದ ಅವರು, ತಕ್ಷಣವೇ ಜಿಲ್ಲೆಯ ಕಲಾವಿದರಿಗೆ ಪ್ರಾಧಾನ್ಯತೆ ನೀಡಬೇಕು, ಬಾಗಲಕೋಟೆ ಜಿಲ್ಲೆಯ ಕಲಾ ಇತಿಹಾಸಿಕ ಧಕ್ಕೆ ಬರದ ಹಾಗೆ ನೋಡಿಕೊಳ್ಳಬೇಕು ತಪ್ಪಿದಲ್ಲಿ ಹೋರಾಟ ಅನಿವಾರ್ಯ ಎಂದು ಕಿಡಿ ಕಾರಿರುವ ಅವರು, ಮುಖ್ಯಾದಿ ಪರವಾಗಿ ಪುರಸಭಾ ವ್ಯವಸ್ಥಾಪಕ ಎಸ್.ಎನ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಕಲಾವಿದರಾದ ಗಂಗಪ್ಪ ಕರಡಿ , ಅಶೋಕ ಕರಡಿ, ಪ್ರಕಾಶ ಬೆಳಗಲಿ,ರಾಜಶೇಖರ ಬೆಳಗಲಿ, ಪಂಡಿತಪ್ಪ ಕರಡಿ, ಚನ್ನಮಲ್ಲಪ್ಪ ಕರಡಿ, ಹೋಳಬಸು ಹಡಪದ, ಶಿವಾಜಿ ಪಾತ್ರೋಟ , ಅಭಿನವ ಕರಡಿ, ಶ್ರೀಶೈಲ ಹುಣಶ್ಯಾಳ, ಚಂದ್ರಶೇಖರ ಕರಡಿ, ಮಹಾಂತೇಶ ಬಡಿಗೇರ , ಈರಪ್ಪ ಕಾಗಿ, ಮಹಾಲಿಂಗ ಬಳಗಾರ, ಈರಪ್ಪ ಕರಡಿ ಇದ್ದರು.