Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ನೂತನ ಸಚಿವ ಲಕ್ಷ್ಮಣ ಸವದಿಗೆ ಸ್ವಕ್ಷೇತ್ರದಲ್ಲಿ ಅಭೂತಪೂರ್ವ ಸ್ವಾಗತ

ಅಥಣಿಯಲ್ಲಿ ಮೊಳಗಿದ ಲಕ್ಷ್ಮಣ  ಸವದಿ ಶಕ್ತಿ!

ಅಥಣಿ : ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಮಹತ್ವದ ಜವಾಬ್ದಾರಿ ಹೊತ್ತು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಮೊದಲ ಬಾರಿಗೆ ಸ್ವಕ್ಷೇತ್ರ ಅಥಣಿಗೆ ಆಗಮಿಸಿದ ಶಾಸಕ ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡುವ ಮೂಲಕ ತಮ್ಮ ನಾಯಕನ ಮೇಲಿನ ಅಭಿಮಾನ ಹಾಗೂ ರಾಜಕೀಯ ಬೆಂಬಲವನ್ನು ಅನಾವರಣಗೊಳಿಸಿದರು.

ಅಥಣಿ ಪಟ್ಟಣಕ್ಕೆ ಶನಿವಾರ ಆಗಮಿಸಿದ ನೂತನ ಸಚಿವ ಲಕ್ಷ್ಮಣ  ಸವದಿ ಅವರ ಆಗಮನದ ಹಿನ್ನೆಲೆಯಲ್ಲಿ ಅಥಣಿ ಪಟ್ಟಣವೇ ಸಂಭ್ರಮದ ಅಲೆಯಲ್ಲಿ ತೇಲಿತು. ಪ್ರಮುಖ ರಸ್ತೆಗಳು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಕಿಕ್ಕಿರಿದು ಸೇರಿರುವದು ಕಂಡು ಬಂದಿತು. ಸಚಿವರನ್ನು ಬರಮಾಡಿಕೊಳ್ಳಲು ಕಾರ್ಯಕರ್ತರು ವಿಶೇಷ ಸಿದ್ಧತೆ ಮಾಡಿಕೊಂಡಿದ್ದು, ಆಪಲ್ ಹಾರ, ಬೃಹತ್ ಪುಷ್ಪಹಾರ ಹಾಗೂ ಹೂವಿನ ಸುರಿಮಳೆಯೊಂದಿಗೆ ಲಕ್ಷ್ಮಣ ಸವದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಭವ್ಯೆ ಮೇರವಣಿಗೆಯಲ್ಲಿ ಕುಡಚಿ ಶಾಸಕ ಮಹೇಶ ತಮ್ಮಣ್ಣವರ ಹಾಗೂ ಸಚಿವ ಸುಪತ್ರರಾದ ಚಿದಾನಂದ ಸವದಿ, ಸುಮಿತ್ ಸವದಿ ಅವರು ನೂತನ ಸಚಿವರಿಗೆ ಸಾಥ ನೀಡಿದರು.

ಈ ವೇಳೆ ನೂತನ ಸಚಿವ ಲಕ್ಷ್ಮಣ  ಸವದಿ ಅವರು ಸುಪುತ್ರ ಕಾಂಗ್ರೇಸ್ ಮುಖಂಡ ಚಿದಾನಂದ ಸವದಿ ಮಾತನಾಡಿ ನಮ್ಮ ತಂದೆಯರಿಗೆ ಸಚಿವ ಸ್ಥಾನ ದೊರೆತಿರುವುದು ಅಥಣಿ ಕ್ಷೇತ್ರದ ಹೆಮ್ಮೆಯ ಸಂಗತಿ. ಕ್ಷೇತ್ರದ ಜನರ ಆಶಯಗಳಿಗೆ ಸ್ಪಂದಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅಥಣಿ ಕ್ಷೇತ್ರದ  ಸಮಗ್ರ ಪ್ರಗತಿಗೆ ಹೊಸ ಅಧ್ಯಾಯ ಬರೆಯಲಿದೆ ಎಂದು ಹೇಳಿದರು

##
ಪಟಾಕಿ ಸಿಡಿಸಿ ಸಂಭ್ರಮ: ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಡಿಜೆ ವಾದ್ಯದ ಸದ್ದಿಗೆ ಯುವ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರೆ, ಅಭಿಮಾನಿಗಳು ಲಕ್ಷ್ಮಣ ಸವದಿ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಹಲವೆಡೆ ಹೂಮಳೆ ಸುರಿಸಿ ಸಚಿವರನ್ನು ಅಭಿನಂದಿಸಲಾಯಿತು.

ಅಭಿವೃದ್ಧಿಗೆ ಹೊಸ ವೇಗದ ನಿರೀಕ್ಷೆ: ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಕ್ಷೇತ್ರದ ಜನರಲ್ಲಿ ಸಂತಸ ಮೂಡಿಸಿದೆ. ಸಾಮಾಜಿಕ, ಶೈಕ್ಷಣಿಕ, ನೀರಾವರಿ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿರುವ ಸವದಿ ಅವರು ಸಚಿವರಾಗಿ ಇನ್ನಷ್ಟು ವೇಗವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂಬ ವಿಶ್ವಾಸವನ್ನು ಕಾರ್ಯಕರ್ತರು ವ್ಯಕ್ತಪಡಿಸಿದರು.

news_1786204670_0_225.webp

 

ಈ ವೇಳೆ ಮಾಜಿ ಪುರಸಭೆ ಅದ್ಯಕ್ಷ ದಿಲೀಪ ಲೋಣಾರೆ ಮಾತನಾಡಿ ನಮ್ಮ ಹೆಮ್ಮೆಯ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಸ್ವ ಕ್ಷೇತ್ರ ಅಥಣಿಗೆ ಆಗಮಿಸಿದ್ದಾರೆ. ಕ್ಷೇತ್ರದಲ್ಲಿ ಸಂತೋಷದ ಅಲೆ ಇದ್ದು ನಮ್ಮ ಬಹುದಿನಗಳ  ಕನಸು ನನಸಾಗಿದೆ. ಈ ಹಿಂದೆ ಅವರು ಸಚಿವರಾಗಿ ಹಲವಾರು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಮುಂದೆ ಅವರಿಗೆ ಯಾವುದೇ ಖಾತೆ ನೀಡಿದರು ಅವರು ಸಮರ್ಥವಾಗಿ ನಿಭಾಯಿಸಿ ರಾಜ್ಯದ  ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ. ಅವರು ಸಚಿವರಾಗಿರುವುದರಿಂದ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ. ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ದತ್ತಾ ವಾಸ್ಟರ್. ಶಿವು ಗುಡ್ಡಾಪುರ್. ರಾಜು ಗುಡೊಡಗಿ. ಮಲ್ಲೇಶ ಹುದ್ದಾರ. ವಿನಾಯಕ ದೇಸಾಯಿ. ಶೇಖರ ಕನಕರೆಡ್ಡಿ. ಶರದ ಶಟ್ಟಿ. ವಿನೋದ ಶಟ್ಟಿ. ಪ್ರಶಾಂತ್ ಶಟ್ಟಿ. ವಿಶಾಲ ಸಗರಿ. ಆಸೀಫ್ ತಾಂಬೋಳಿ. ಸುಂದರ ಸೌದಾಗರ. ಮಲ್ಲು ಕುಲ್ಲೋಳ್ಳಿ. ಬಸು ತೇರದಾಳ. ಮುತ್ತು ಮೋಕಾಶಿ. ಸೇರಿದಂತೆ ಬೃಹತ್ ಪ್ರಮಾಣದ ಅಭಿಮಾನಿ ಬಳಗದವರು ಸೇರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ