ಮುಗಳಖೋಡ (೧೨) ಪೋಷಣ ಅಭಿಯಾನದಲ್ಲಿ ತಾಯಂದಿರುಗಳು ಪೊಷಕರು ಅನುಪಸ್ಥಿತಿಯಿಂದ ಸರ್ಕಾರದ ಯೋಜನೆ ಫಲಕಾರಿಯಾಗುವುದಿಲ್ಲ.ಸಂತೋಷ ಅರಭಾವಿ.
ಪಟ್ಟಣದ ಕರೆಸಿದ್ದೇಶ್ವರ ಸಭಾ ಭವನದಲ್ಲಿ ಸೋಮವಾರ 12 ರಂದು ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ,ಶಿಸು ಅಭಿವೃದ್ದಿ ಯೋಜನೆ ರಾಯಬಾಗ ವತಿಯಿಂದ ರಾಷ್ಟ್ರೀಯ ಪೋಷಣ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿ ,ಗರ್ಭಿಣಿಯರಿಗೆ ಸೀಮಂತ , ಭಾನಂತಿ ಹಾಗೂ ಶಿಶುಗಳಿಗೆ ಅನ್ನ ಪ್ರಾಷಣ , ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಈ ಕಾರ್ಯಕ್ರಮದಲ್ಲಿ ಆಶಾ , ಅಂಗನವಾಡಿ ಹಾಗೂ ಬೆರಳೆಣಿಕೆಯಷ್ಟು ಬಾನಂತಿಯರು ಮಾತ್ರ ಇದ್ದರೆ ಫಲಕಾರಿಯಾಗದು ತಾಯಂದಿರು ಪೋಷಕರಿಗೂ ಯೋಜನೆಯ ಅರಿವು ಮೂಡಿಸುವಂತಾಗಬೇಕು ಎಂದು ಹೇಳಿದರು.
ಪತ್ರಕರ್ತೆ ಹಾಗೂ ಮಾಜಿ ಪಂಚಾಯತ್ ಸದಸ್ಯೆ ಕಾಂಚನಾ ಬಡಿಗೇರ ಮಾತನಾಡಿ ಗರ್ಭಿಣಿಯರು ಔಷಧಿಗೆ ಅಂಟಿಕೊಳ್ಳದೆ ಹಿರಿಯರೂ ಆಚರಿಸಿಕೊಂಡು ಬಂದಂತೆ ಮನೆಯಲ್ಲಿಯ ಒಳ್ಳೆಯ ಪೌಷ್ಟಿಕಾಂಶ ಉಳ್ಳ ಆಹಾರ ವಿಹಾರ ದಿಂದ ಉತ್ತಮ ಆರೋಗ್ಯ ಕೈದುಕೊಂಡಾಗ ಮಗುವಿನ ಸರಳ ಜನನ ನೀಡಲು ಸಾಧ್ಯ ಅದಕ್ಕೆ ನಾನೇ ಸಾಕ್ಷಿ ಎಲ್ಲರೂ ಒಳ್ಳೆಯ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯ ವಂತರಾಗಿ ಸದೃಢ ಮಗುವಿಗೆ ಜನ್ಮ ನೀಡಿ ಎಂದರು.
ಸಿಡಿಪಿಓ ಭಾರತಿ ಕಾಂಬಳೆ, ಎಸಿಡಿ ಪಿ ಓ ಪ್ರಭಾವತಿ ಯಳಕರ, ಅನ್ನಪೂರ್ಣ ಯರಡೆತ್ತಿ,ಅನ್ನಪೂರ್ಣ ಘಟನಟ್ಟಿ ಸರ್ಕಾರದ ಯೋಜನೆ ಸರಿಯಾಗಿ ಉಪಯೋಗಿಸಿ ಸದೃಢರಾಗಿರಿ ಎಂದು ಮಾತನಾಡಿದರು. ಪ್ರತೀಕ್ಷಾ ಅಂಗಡಿ ಹಾಗೂ ಅನ್ವಿತಾ ಅಂಗಡಿ ವಿದ್ಯಾರ್ಥಿನಿಯರಿಂದ ಭರತ ನಾಟ್ಯ ಜರುಗಿತು. ಬಾನಂತಿಯರಿಗೆ ಹಾಗೂ ಎಲ್ಲರಿಗೂ ಪೌಷ್ಟಿಕಾಂಶವುಳ್ಳ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಕಾಂಚನಾ ಬಡಿಗೇರ, ಅನ್ನಪೂರ್ಣ ಯರಡೆತ್ತಿ, ತಾಲೂಕಾ ಪೋಷಣ ಅಭಿಯಾನದ ಸಂಯೋಜಕರಾದ ಅನ್ನಪೂರ್ಣ ಘಟನಟ್ಟಿ, ಶೋಭಾ ಪರೀಟ, ರಾಜೇಶ್ವರಿ ಪಾಟೀಲ, ಕರೆಪ್ಪ ಮಂಟರ, ಸಂತೋಷ ಅರಭಾವಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಜಯಶ್ರೀ ಕಾನಟ್ಟಿ ನಿರೂಪಿಸಿದರು, ಸುರೇಖಾ ವಿಜಯನಗರ ಸ್ವಾಗತಿಸಿದರು, ಮಹಾದೇವಿ ಸೂರ್ಯವಂಶಿ ವಂದಿಸಿದರು.