ಹುಬ್ಬಳ್ಳಿ: ವಿಡಿಯೋ ಗೇಮ್ (Video Game) ಆಡಲು ಮೊಬೈಲ್ (Mobile Phone) ಕೊಡದಿದ್ದ ಹಿನ್ನೆಲೆಯಲ್ಲಿ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಉದಯನಗರ ನಿವಾಸಿ ಸಮರ್ಥ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ ಎಂದು ತಿಳಿದುಬಂದಿದೆ. ಮೃತ ಸಮರ್ಥ ಮೊಬೈಲ್‌ನಲ್ಲಿ ಪ್ರೀ ಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ. ಸದಾ ಇದೇ ಗೇಮ್ ಆಡುತ್ತ ಸಮಯ ಕಳೆಯುತ್ತಿದ್ದ. ಇದೇ ಕಾರಣಕ್ಕೆ ಆತನ ತಾಯಿ ಮೊಬೈಲ್ ಕಸಿದುಕೊಂಡು ಗೇಮ್ ಆಡಬಾರದು ಎಂದು ಬುದ್ಧಿವಾದ ಹೇಳಿದ್ದರು. ತಾಯಿಯ ಮಾತಿನಿಂದ ಮನನೊಂದ ಬಾಲಕ ಮನೆಯ ಕೋಣೆಗೆ ತೆರಳಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.