ಬಳ್ಳಾರಿ. ಅ. 24: : SIR ಪಿತಾಮಹರಾದ ಮೋದಿ ಮತ್ತು ಅಮಿತ್ ಶಾ ತಮ್ಮ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಕೇಂದ್ರ ಚುನಾವಣಾ ಆಯೋಗದ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ರಕ್ಷಿಸುತ್ತಿದ್ದಾರೆ ಕೂಡಲೇ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಮುಖಂಡರು ಆಗ್ರಹಿಸಿದರು.
ಸಂಘಟನೆವತಿಯಿಂದ ಇಂದು ನಗರದ ರಾಯಲ್ ಸರ್ಕಲ್ ನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಹಳೆ ಜಿಲ್ಲಾಧಿಕಾರಿ ಕಚೇರಿ ಎದುರುಗಡೆಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ದೇಶದಲ್ಲಿ ಪ್ರಧಾನಮಂತ್ರಿ, ಗೃಹ ಮಂತ್ರಿ ಮತ್ತು ಚುನಾವಣಾ ಆಯುಕ್ತರು ಮತ ಕಳ್ಳತನ ಮಾಡುವುದರಿಂದ
ಪ್ರಜಾತಂತ್ರದ ಕಗ್ಗೋಲೆ ಮಾಡುತ್ತಿದ್ದಾರೆ ದೇಶದ ಮತದಾರರು ಯಾವುದೇ ಕಾರಣಕ್ಕೂ ಈ ಕೃತ್ಯವನ್ನು
ಸಹಿಸಲು ಸಾಧ್ಯವಿಲ್ಲ. ದೇಶದ ರೈತ, ಕಾರ್ಮಿಕ, ದಲಿತ, ವಿದ್ಯಾರ್ಥಿ, ಯುವಜನ, ಮಹಿಳಾ, ಆದಿವಾಸಿ, ಅಲ್ಪ ಸಂಖ್ಯಾತ, ಹಿಂದುಳಿದ ವರ್ಗಗಳ ಸಂಘಟನೆಗಳೆಲ್ಲಾ ಕೂಡಿ 'People Against SIR" ಎಂಬ ರಾಷ್ಟ್ರ ಮಟ್ಟದ ವೇದಿಕೆಯನ್ನು ರೂಪಿಸಿಕೊಂಡು ಪ್ರಜಾತಂತ್ರದ ಸಂರಕ್ಷಣೆಗೆ ಪಣತೊಡಲಾಗಿದೆ ಎಂದು ಎದ್ದೇಳು ಕರ್ನಾಟಕದ ಸಂಘಟನೆಯ ಸದಸ್ಯರು ಪ್ರತಿಭಟಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಎದ್ದೇಳು ಸಂಘಟನೆಯ ಸಿದ್ದಣ್ಣ ಪನ್ನರಾಜ್ ಎ ಮಾನಯ್ಯ ಎನ್ ಡಿ ವೆಂಕಮ್ಮ ಸಂಗನಕಲ್ಲು ವಿಜಯ್ ಕುಮಾರ್, ಹುಸೇನಪ್ಪ, ಹುಮಾನ್ ಖಾನ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳಿದ್ದರು.