, ಜಮಖಂಡಿ; ತಾಲುಕಿನ ಕಡಪಟ್ಟಿ ಗ್ರಾಮದ ಮಾಲಿಂಗರಾಯ ದೇವಸ್ಥಾನದ ಜಾಗೆಯ ವಿಚಾರದಲ್ಲಿ ತೊಂದರೆ ಉಂಟು ಮಾಡಿರುವ ಪಿಡಿಒ ಅವರನ್ನು ಅಮಾನತ್ತು ಗೊಳಿಸಲು ಆಗ್ರಹಿಸಿ, ಗ್ರಾಮಸ್ಥರು ಹಾಗೂ ಮಾಲಿಂಗರಾಯ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರು ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾಮದ ಗೌಠಾಣ ಹಾಗೆಯನ್ನು ಮಹಳಿಂಗರಾಯ ದೇವಸ್ಥಾನಕ್ಕೆ ಬಳಸಿಕೊಳ್ಳಲು ಗ್ರಾಪಂ ನಿಂದ ಅನುಮೋದನೆ ಪಡೆಯಲಾಗಿತ್ತು. ಅದರಂತೆ ಜಾಗೆಯನ್ನು ಸ್ವಚ್ಛಗೊಳಿಸಿ ಬಳಸಲಾಗುತ್ತಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಜಾಗೆಯನ್ನು ಪಂಚಮಸಾಲಿ ಸಮುದಾಯ ಭವನ ನಿರ್ಮಾಣಕ್ಕೆ ಬಳಸಿಕೊಳ್ಳಲು ಗ್ರಾಪಂ ಮುಂದಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು. ಗ್ರಾಪಂ ನಿರ್ಧಾರ ದಿಂದ ಗ್ರಾಮದ ಎರಡು ಸಮಾಜಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ರಾತೋರಾತ್ರಿ ಪ್ರಭಾವಿಗಳ ಒತ್ತಡಕ್ಕೆ ಮಣಿದ ಗ್ರಾಪಂ ನವರು ಖಾತಾ ತಯಾರಿಕೆಯಲ್ಲಿ ತೊಡಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿ ಸಿದ್ದಾರೆ, ಮೊದಲಿನಂತೆ ಸದರಿ ಜಾಗೆಯನ್ನು ಮಹಳಿಂಗ ರಾಯ ದೇವಸ್ಥಾನಕ್ಕೆ ಹಸ್ತಾಂತರಿಸಬೇಕು, ಹಾಗೂ ಗ್ರಾಮದ ಎರಡು ಸಮಾಜದಲ್ಲಿ ಒಡಕು ಮುಡಿಸಲು ಯತ್ನಿಸಿದ ಪಿಡಿಓ ಅವರನ್ನು ಅಮಾನತ್ತು ಗೊಳಿಸಬೇಕೆಂದು ಆಗ್ರಹಿಸಿದರು. ಸಮಾಜದ ಮುಖಂಡ, ಅಧ್ಯಕ್ಷ ಶಿವಾನಂದ ಕುರಿ, ನಾಗಪ್ಪ ಪೂಜಾರಿ, ಮಲ್ಲು ಮೇಳಿ, ಚನ್ನಪ್ಪ ಕಡಪಟ್ಟಿ, ಮಲ್ಲಪ್ಪ ಲಿಂಗನೂರ, ರಮೇಶ ಅಕ್ಕೋಜಿ, ಮುರೇಪ್ಪ ಕಡಕೋಳ, ಶಂಕರ ಕಡಪಟ್ಟಿ, ಶಿವಪ್ಪ ಕಲ್ಹಳ್ಳಿ, ಹನುಮಂತ ಯಮಗಾರ, ಭೀಮಪ್ಪ ಮೇಳಿ, ಗೌರವ್ವ ಗುಲಬಾಳ, ಶಾಂತಾ ಜಡಿಪೂಜಾರಿ, ಅವ್ವಕ್ಕ ಉಡೆದ ಸೇರಿದಂತೆ ಅನೇಕ ಮಹಿಳೆಯರು, ಯುವಕರು, ಭಾಗವಹಿಸಿದ್ದರು.