Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ವಿದ್ಯಾರ್ಥಿಗಳ ಉಜ್ವಲ ಭವಷ್ಯಕ್ಕೆ ಪಿ ಯು ಶಿಕ್ಷಣ ಅಡಿಪಾಯ : ನಾನಾಸಾಹೇಬ ಪಾಟೀಲ 

ನೇಸರಗಿ., ಆ. 29.ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಏರಿಳಿತ ಅನುಭವಿಸಿ ವ್ಯಾಸಂಗ ಸಂದರ್ಭದಲ್ಲಿ ಮುನ್ನಡೆ ಅನುಭವಿಸುತ್ತಾರೆ. ಆದರೆ ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳು ಚನ್ನಾಗಿ ಕಲಿತು ಶ್ರಮಪಟ್ಟು ವ್ಯಾಸಂಗ ಮಾಡಿದರೆ ಮುಂದೆ ಉಜ್ವಲ ಭವಿಷ್ಯ ಹಾಗೂ ಶಿಕ್ಷಣದ ಉತ್ತಮ ಅಡಿಪಾಯ ಎಂದು ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ನಾನಾಸಾಹೇಬ ಪಾಟೀಲ ಹೇಳಿದರು.
      ಅವರು ಶನಿವಾರದಂದು ಗ್ರಾಮದ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾಮಠದಲ್ಲಿ ಆಯೋಜಿಸಲಾಗಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ, ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ನೇಸರಗಿ ಇದರ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್ ಘಟಕ, ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ ನೇಸರಗಿ ಭಾಗದ ವಿದ್ಯಾರ್ಥಿಗಳಿಗೆ ಬಹು ಅನುಕೂಲ ಇರುವ ಕಾಲೇಜು ಇದ್ದು ಜಿಲ್ಲಾ, ತಾಲೂಕಿಗೆ ಹೋಗಿ ಕಲಿಯುವ ಪ್ರಮೇಯು ಇಲ್ಲ, ವ್ಯಾಸಂಗ ಕಲಿಸುವ ಪ್ರಾದ್ಯಾಪಕರು ನುರಿತವರು ಇದ್ದು, ಗುರುವಿಗೆ ಗುಲಾಮರಾಗಿ ಶಿಕ್ಷಣ ಕಲಿತು ಜೀವನದಲ್ಲಿ ಮುಂದೆ ಬಂದು  ಪಾಲಕರ ಅಸೆ ಈಡೇರಿಸಿರಿ   ಮತ್ತು ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಕ್ರೀಡೆಗೆ ಹೋಗುವ ವಿದ್ಯಾರ್ಥಿಗಳಿಗೆ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ವಿದ್ಯಾರ್ಥಿಗಳಿಗೆ  ಸ್ವಂತ ಹಣಕಾಸು ನೆರವು ನೀಡುತ್ತಿದ್ದು ಇದರ ಸದುಪಯೋಗ ಪಡೆಯಿರಿ ಎಂದು ನಾನಾಸಾಹೇಬ ಪಾಟೀಲ ಹೇಳಿದರು.
news_1788004670_1_585.webp
     ಕಾರ್ಯಕ್ರಮದ ಅಥಿತಿಗಳಾಗಿ ಆಗಮಿಸಿದ್ದ ನಂದಗಡ ಮಹಾತ್ಮಾ ಗಾಂಧಿ ಕಾಲೇಜಿನ ಪ್ರಾಚಾರ್ಯರಾದ ಎಂ ಕೆ ಭಜಂತ್ರಿ ಮಾತನಾಡಿ ಭವಿಷ್ಯದ ದ್ರಿಷ್ಟಿಯಿಂದ ವಿದ್ಯಾರ್ಥಿಗಳು ಶ್ರದ್ದೆ, ನಿಷ್ಠೆ, ಶ್ರಮದಿಂದ ವ್ಯಾಸಂಗ ಮಾಡಿ, ಓದು, ಕ್ರೀಡೆ, ಸಾಂಸ್ಕೃತಿಕ, ಸಾಹಿತ್ಯ, ಕಲೆ  ವಿಷಯಗಳಲ್ಲಿ ತಮ್ಮ ಪ್ರತಿಭೆ ತೋರಿಸಿ ಜೀವನದಲ್ಲಿ ಮುಂದೆ ಬನ್ನಿ ಎಂದರು.
     ಕಾಲೇಜು ಪ್ರಾಂಶುಪಾಲರಾದ ಎಸ್ ವ್ಹಿ  ದೊಡ್ಡಮನಿ ಮಾತನಾಡಿ ನಮ್ಮ ಕಾಲೇಜು ವಿದ್ಯಾರ್ಥಿನೀಯರು ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದು ಸಂತಸ ತಂದಿದ್ದು. ಅದೇ ರೀತಿ ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಕ್ರೀಡೆ, ಎಲ್ಲ ರೀತಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ ಎಂದರು.
news_1788004670_0_937.webp
      ಕಾರ್ಯಕ್ರಮದಲ್ಲಿ ಕಾಲೇಜು ಸುಧಾರಣೆ ಸಮಿತಿ ಉಪಾಧ್ಯಕ್ಷ ಬಸವರಾಜ ಚಿಕ್ಕನಗೌಡ್ರ,ದೈಹಿಕ ಶಿಕ್ಷಕರಾದ ಸುಭಾಷ ಪಾಟೀಲ,ಮುಖಂಡ  ಸುರೇಶ ಅಗಸಿಮನಿ,ಪ್ರೊ. ರಾಮಲಿಂಗ ಪಾಟೀಲ, ಬಸವರಾಜ ಉಲ್ಲಾಳ, ಪ್ರೊ. ಎಂ ಕೆ ಬೆಟಗೇರಿ, ಪ್ರೊ. ಕೆ ಎಂ ಗಾಣಿಗೇರ, ಪ್ರೊ. ಪಿ ಎಂ ಬೋಳನ್ನವರ, ಪ್ರೊ. ಸಿ ಬಿ ರೊಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರೆ,ಪ್ರೊ. ರಾಯವ್ವಗೋಳ  ಮೇಡಂ ಸ್ವಾಗತಿಸಿದರು. ಸಂದ್ಯಾ ಮೇಡಮ, ವಾಲಿಕಾರ ಸರ್  ವಂದಿಸಿದರು.ಕಾಲೇಜಿನ ಎಲ್ಲ ಪ್ರಾದ್ಯಾಪಕರು, ವಿದ್ಯಾರ್ಥಿ, ವಿದ್ಯಾರ್ಥಿನೀಯರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ