ಗುರ್ಲಾಪೂರ :ಪಿ ಎಂ ಶ್ರೀ ಶಾಸಕರ ಕರ್ನಾಟಕ ಪಬ್ಲಿಕ್ ಸ್ಕೂಲ್, ಗುರ್ಲಾಪುರ ಶಾಲೆಯ ಬಾಲಕಿಯರ ಥ್ರೋ ಬಾಲ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದೆ. ತಾಲೂಕ ಮಟ್ಟದ ಫೈನಲ್ ಪಂದ್ಯದಲ್ಲಿ ಗುರ್ಲಾಪೂರ ಶಾಲೆಯ ಬಾಲಕಿಯರ ತಂಡ ಕಲ್ಲೋಳಿಯ ಎಂಡಿ ಆರ್ ಎಸ್ ಶಾಲೆಯ ವಿರುದ್ಧ 2-1 ಪಾಯಿಂಟ್ ಗಳಿಂದ ಗೆದ್ದು ಸತತ ಮೂರನೇ ಬಾರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ . ಬಾಲಕಿಯರು ಹಾಗೂ ತಂಡದ ಕೋಚ್ ಗಳಾದ ಎಲ್ ಆರ್ ಸಾಲಿಮಠ, ಬಿ ವಾಯ್ ಮೋಮಿನ್, ಶ್ರೀಮತಿ ಕವಿತಾ ಕಟಗಿ ಇವರ ಸಾಧನೆಗೆ ಎಸ್ ಡಿ ಎಮ್ ಸಿ ಅಧ್ಯಕ್ಷರು ಉಪಾಧ್ಯಕ್ಷರು ಪುರಸಭಾ ಮಾಜಿ ಸದಸ್ಯರು ಶಾಲಾ ಮುಖ್ಯೋಪಾಧ್ಯಾಯರು ಸಹಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.