ಮಹಾಲಿಂಗಪುರ,ಅ,೨೧: ಗುರುವಾರ ಸಮೀಪದ ಕೆಸರಗೊಪ್ಪ ಗ್ರಾಮದ ಸಂತ ದಿ.ಬಾಬಣ್ಣ ಜಾಧವ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜರ ನೇತೃತ್ವದ ದಿಂಡೆ ಭಾಗವಹಿಸಿ ದಿವಂಗತರ ಭಾವ ಚಿತ್ರಕ್ಕೆ ಪುಷ ನಮನ ಸಲ್ಲಿಸಿ ಶೃಧ್ಧಾಂಜಲಿ ಅರ್ಪಿಸಿತು.
ಕೆಸರಗೊಪ್ಪದ ಜನ ಮತ್ತು ದಿಂಡೆ ಸಂತರೆಲ್ಲ ದಿ.ಬಾಬಣ್ಣ ಅವರನ್ನು ಬಾಬು ಮುತ್ಯಾ ಅಂತಲೆ ಕರೆಯುತ್ತಿದ್ದರು.ಅವರ ಜೀವಿತಾವಧಿಯಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಸಂತರ ಸಂಘವೇ ಅವರಿಗೆ ಉಸಿರಾಗಿತ್ತು.ಅಂತಲೆ ಮಾಧವಾನಂದರ ಜಯಂತಿ ಅಂಗವಾಗಿ ಹುಬ್ಬಳ್ಳಿಯ ಗಿರೀಶ ಆಶ್ರಮದಿಂದ ನಡೆಯುವ ಸರ್ವ ಧರ್ಮಗಳ ಸತ್ಸಂಗ ಪಾದಯಾತ್ರೆಯ ಮಧ್ಯೆ ಕೆಸರಗೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸಂತ ಬಾಬಣ್ಣ ಅವರ ಸಮಾಧಿಗೆ ಪು? ನಮನ ಸಲ್ಲಿಸಿ ಮುಂದೆ ಸಾಗುತ್ತಾರೆ.
ನಿತ್ಯ ನಿಯಮ ಸಂಪ್ರದಾಯದಂತೆ ಕೆಸರಗೊಪ್ಪ ಗ್ರಾಮದಲ್ಲಿ ಭಜನೆ, ಪುರಾಣ ಮತ್ತು ಪ್ರವಚನಗಳು ನಡೆದವು.ಈ ಪಾದಯಾತ್ರೆ ಅಕ್ಟೋಬರ್ ೨ ರಂದು ಆರಂಭಗೊಂಡು ನವೆಂಬರ್ ೨ ರಂದು ಇಂಚಗೇರಿ ಮಠದಲ್ಲಿ ಮಂಗಲಗೊಳ್ಳುತ್ತದೆ.ಇಲ್ಲಿ ೧೧೧ ನೇ ಮಾಧವಾನಂದರ ಜಯಂತಿ ನಡೆಯಲಿದೆ.
ಈ ಪು? ನಮನದಲ್ಲಿ ಶಂಕರಪ್ಪ ಮಹಾರಾಜರು, ಸುಭಾಸ ಮಹಾರಾಜರು, ಮಹಾದೇವ ಕದ್ದಿಮನಿ,ಸಂಗಮೇಶ ಹಿಡಕಲ್,ದುಂಡಪ್ಪ ಜಾಧವ,ಧರೆಪ್ಪ ಬ್ಯಾಕೋಡ,ಗ್ಯಾನೋಬಾ ಜಾಧವ,ಶಿವಾಜಿ ತೇಜಪ್ಪಗೋಳ,ವಿಶ್ವನಾಥ ಹಿರೇಮಠ,ಮೂರ್ತ್ಯಪ್ಪ ಹೂಗಾರ,ಅಶೋಕ ಹವಾಲ್ದಾರ,ಸದಾಶಿವ ಹವಾಲ್ದಾರ,ಮಹಾದೇವ ಸಂಶಿ,ಅರ್ಜುನ ಡವಳೇಶ್ವರ,ವಿಠ್ಠಲ ಬನಾಜ,ವಿಠ್ಠಲ ಶಿರೋಳ,ಶಿವು ಜಾಧವ,ಮಹಾದೇವ ಸಸಾಲಟ್ಟಿ, ಪರಪ್ಪ ಬ್ಯಾಕೋಡ, ಭೀಮಪ್ಪ ಸಸಾಲಟ್ಟಿ, ಅಲ್ಲಪ್ಪ ದಡ್ಡಿಮನಿ,ದುಂಡಪ್ಪ ಬನಾಜ,ನಾಗಪ್ಪ ಉತ್ತೂರ,ಮಾರುತಿ ಕರೋಶಿ, ಮಲ್ಲಿಕಾರ್ಜುನ ಕಾನಟ್ಟಿ,ಮಲ್ಲಪ್ಪ ಮಡಿವಾಳ, ಗೋಪಾಲ ಜಾಧವ, ಮುಕುಂದ ಜಾಧವ,ಸೀಮಂತ ಕಾರಜೋಳ,ಸುನೀಲ ಜಾಧವ ಇನ್ನೂ ನೂರಾರು ಜನ ಸದ್ಭಕ್ತರು ಪಾಲ್ಗೊಂಡಿದ್ದರು.