ಸಿರುಗುಪ್ಪ 12: ಶೈಕ್ಷಣಿಕ ಹಾಗೂ ಸಮಾಜಸೇವೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಶಾಲೆಯ ಶಿಕ್ಷಕ ರಾಘವೇಂದ್ರ ಅವರಿಗೆ ಧಾರವಾಡದ ಸಾಧನಕೇರಿಯಲ್ಲಿರುವ ಬೇಂದ್ರೆ ಭವನದಲ್ಲಿ ಖಾಸಗಿ ಪತ್ರಿಕೆ ಹಾಗೂ ವಾಹಿನಿ ವತಿಯಿಂದ ‘ರಾಜ್ಯ ಶಿಕ್ಷಕ ರತ್ನ’ ಪ್ರಶಸ್ತಿಯನ್ನು ಭಾನುವಾರ ನೀಡಿ ಗೌರವಿಸಲಾಗಿದೆ.
ಧಾರವಾಡದ ಸಾಧನಕೇರಿಯಲ್ಲಿರುವ ಬೇಂದ್ರೆ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಕನ್ನಡ ನಾಡಿಗೆ ಶ್ರೀ ರಾಘವೇಂದ್ರ ಅವರು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಈ ಗೌರವವನ್ನು ಪ್ರದಾನ ಮಾಡಲಾಯಿತು.
ಪತ್ರಿಕೆಯ ಸಂಪಾದಕರು ಹಾಗೂ ಆಡಳಿತ ಮಂಡಳಿಯವರು, "ಶ್ರೀ ರಾಘವೇಂದ್ರ ಅವರ ಸಾಧನೆ ಹಾಗೂ ಸಮಾಜಮುಖಿ ಕಾರ್ಯಗಳು ಹೀಗೆಯೇ ಮುಂದುವರಿಯಲಿ" ಎಂದು ಶುಭ ಹಾರೈಸಿ, ಪ್ರೀತಿಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.