ಹುನಗುಂದ; ವೈಚಾರಿಕ ಸಾಹಿತ್ಯವು ಸಾಮಾಜಿಕ ಪರಿವರ್ತನೆಗೆ ಪೂರಕವಾಗಿದೆ. ಸೃಜನಶೀಲ ಸಾಹಿತ್ಯದ ಓದು ವ್ಯಕ್ತಿಯನ್ನು ಮನು?ನಾಗಿ ಮಾಡುತ್ತದೆ. ಕನ್ನಡ ಚಿಂತನಾ ಪರಂಪರೆಗೆ ಜೀವಂತ ಡಾ. ಕಲಬುರ್ಗಿ ಧ್ವನಿಯಾಗಿದ್ದರು ಎಂದು ಪ್ರತಿಷ್ಠಾನದ ರಾಷ್ಟ್ರೀಯ ಅಧ್ಯಕ್ಷ ಡಾ. ವೀರಣ್ಣ ರಾಜೂರ ಹೇಳಿದರು. =ಕರ್ನಾಟಕ ಸರ್ಕಾರ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿ?ನ ಧಾರವಾಡ ಹಾಗೂ ವಿಎಂಕೆಎಸ್ಆರ್ ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ ಎಸ್ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಸಹೋಗದಲ್ಲಿ ನಡೆದ ಡಾ. ಎಂ.ಎಂ. ಕಲಬುರ್ಗಿ ಅವರ ಸೃಜನ ಸಾಹಿತ್ಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತ ಸೃಜನಶೀಲತೆ ಕನ್ನಡ ಸಾಹಿತ್ಯಕ್ಕೆದಾರಿದೀಪ. ಕಲಬುರ್ಗಿಯವರು ವಚನ ಸಾಹಿತ್ಯ ಆದಿಯಾಗಿ ಸಂಶೋಧನೆ, ಗ್ರಂಥ ಸಂಪಾದನೆ, ಹಸ್ತಪ್ರತಿ, ಶಾಸನ ಸಾಹಿತ್ಯ ಮುಂತಾದ ಸಾಹಿತ್ಯಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ರಾಷ್ಟ್ರೀಯ ಯುವ ಪೀಳಿಗೆಗಳಲ್ಲಿ ವೈಚಾರಿಕ ಚಿಂತನೆಗಳನ್ನು ಬಿತ್ತುವುದು ಪ್ರತಿಷ್ಠಾನದ ಉದ್ದೇಶವಾಗಿದೆ. ಬದಲಾಗುತ್ತಿರುವ ಸಮಾಜದಲ್ಲಿ ಮನು?ತ್ವದ ಅಸ್ತಿತ್ವ ಬಹುಮುಖ್ಯ. ಈ ನಿಟ್ಟಿನಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳಸಿಕೊಳ್ಳಬೇಕೆಂದು ರಾಜೂರ ಹೇಳಿದರು. ಡಾ. ಮಹಾಂತೇಶ ಕಡಪಟ್ಟಿ ಅಧ್ಯಕ್ಷತೆವಹಿಸಿ ಡಾ.ಎಂ.ಎಂ.ಕಲಬುರ್ಗಿ ಅವರು ಕನ್ನಡ ನಾಡಿನ ಹೆಮ್ಮೆಯ ವಿದ್ವಾಂಸರು, ಅಪರೂಪದ ಸಂಶೋಧಕರು ಹಾಗೂ ವಿಚಾರಶೀಲ ಚಿಂತಕರಾಗಿದ್ದರು. ಅವರ ಸಾಹಿತ್ಯ ಪ್ರಜ್ಞೆಯನ್ನು ಇಂದಿನ ವಿದ್ಯಾರ್ಥಿಗಳು ತಮ್ಮಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ತಿಪ್ಪೇಸ್ವಾಮಿ ಡಿ.ಎಸ್, ಪ್ರಾಸ್ತಾವಿಕ ಮಾತನಾಡಿದರು. ಮೊದಲನೆಯ ಗೋಷ್ಠಿಯಲ್ಲಿ ಡಾ. ಬಿ. ಆರ್.ಪೊಲೀಸಪಾಟೀಲ್ ಅವರು ಖರೇಖರೇ ಸಂಗ್ಯಾ ಬಾಳ್ಯಾ ನಾಟಕ ಕುರಿತು ಮತ್ತು ೨ನೆ ಗೋಷ್ಠಿಯಲ್ಲಿ ಡಾ.ಸಂಗಮೇಶ ಕಲ್ಯಾಣಿ ಅವರು ನೀರಾಗ ನಿಂತೀನಿ ನೀರಡಿಸಿ ಕವನ ಸಂಕಲನ ಕುರಿತು ಮಾತನಾಡಿದರು. ಪ್ರಾಚಾರ್ಯ ಡಾ. ಎಸ್. ಆರ್.ಗೋಲಗೊಂಡ ಮತ್ತು ಒಕ್ಕೂಟದಕಾರ್ಯಾಧ್ಯಕ್ಷ ಶ್ರೀ ಶ್ರೀನಿಧಿ ಆರ್.ಎ, ಪ್ರತಿ?ನದ ಸದಸ್ಯೆ ಡಾ. ಹನುಮಾಕ್ಷಿ ಗೂಗಿ ಉಪಸ್ಥಿತರಿದ್ದರು. ಕುಮಾರಿ ಸ್ವಪ್ನಾ ಪ್ರಾರ್ಥಿಸಿದರು. ಕುಮಾರಿ ಪೂಜಾ ಜಾನಪದ ಗೀತೆ ಹಾಡಿದರು, ಲೆಪ್ಟಿನೆಂಟ್ ಎಸ್. ಬಿ.ಚಲಗೇರಿ ಸ್ವಾಗತಿಸಿದರು. ಡಾ. ಪರಶುರಾಮ ಹಾದಿಮನಿ ಮತ್ತು ಹನುಮಂತ ವಜ್ರಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ.ಎಲ್.ಎನ್. ಕುಲಕರ್ಣಿ ವಂದಿಸಿದರು.
೮;ಎಚ್ಎನ್ಡಿ;೨; ಹುನಗುಂದ ಶ್ರೀ ವಿಜಯ ಮಹಂತೇಶ ಮಹಾವಿದ್ಯಾಲಯ ಮತ್ತು ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿ?ನ ಧಾರವಾಡ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಡಾ. ವೀರಣ್ಣ ರಾಜೂರ ಉದ್ಘಾಟಿಸಿ ಮಾತನಾಡಿದರು.