Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಹತ್ತಿ ಮಿಲ್ ಸ್ಥಾಪನೆಯಿಂದ ರೈತರಿಗೆ ನೈಜ ಬೆಲೆ-ಡಾ.ಪ್ರಭುಗೌಡ

ಶ್ರೀ ಗುರು ಖಾಸ್ಗತ ಅಗ್ರೋ ಇಂಡಸ್ಟ್ರೀಸ್ ಹತ್ತಿ ಮಿಲ್ ಪ್ರಾರಂಭೋತ್ಸವ


ತಾಳಿಕೋಟೆ,ಅ,೧೨:  ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ರೈತರ ಉತ್ಪನ್ನಗಳ ಖರೀದಿಗೆ ಮತ್ತು ರೈತರಿಗೆ ನೈಜ ಬೆಲೆ ಒದಗಿಸುವ ದೃಷ್ಠಿಯಿಂದ ಹತ್ತಿ ಮಿಲ್ ಮತ್ತು ದಾಲ್ ಮಿಲ್‌ಗಳು ಪ್ರಾರಂಭಗೊಳ್ಳುತ್ತಾ ಸಾಗಿರುವದು ಸಂತಸದ ಸಂಗತಿಯಾಗಿದೆ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ವೈಧ್ಯ ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಹೇಳಿದರು.
ರವಿವಾರ ತಾಲೂಕಿನ ತುಂಬಗಿ ಗ್ರಾಮದ ಬಿಂಜಲಭಾವಿ ರಸ್ತೆಯಲ್ಲಿ ನೂತನವಾಗಿ ಸ್ಥಾಪನೆಗೊಂಡಿರುವ  ಶ್ರೀ ಗುರು ಖಾಸ್ಗತ ಅಗ್ರೋ ಇಂಡಸ್ಟ್ರೀಸ್ ಹತ್ತಿ ಮಿಲ್ ಇದರ ವಾಸ್ತು ಶಾಂತಿ ಪೂಜಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಬರಗಾಲದಂತಹ ಸಂಕಷ್ಟದ ಸಂದರ್ಬದಲ್ಲಿ ಮತ್ತು ವರ್ಷವಿಡಿ ಕಷ್ಟಪಟ್ಟು ಬೆಳೆದ ಬೆಳೆಗೆ ನೇರ ಹಣಕಾಸಿನೊಂದಿಗೆ ನೈಜ ಬೆಲೆ ಸಿಗುವಂತಹ ಕಾರ್ಯ ಇಂತಹ ಮಿಲ್‌ಗಳು ಪ್ರಾರಂಬವಾಗುವದರಿಂದ ಸಿಗಲಿದೆ ಯೋಗ್ಯ ದರದೊಂದಿಗೆ ಯಾವುದೇ ಕಮಿಷನ್ ಹಣವಿಲ್ಲದೇ ನೇರವಾಗಿ ರೈತರಿಂದ ಖರೀದಿಯಾಗುವದರಿಂದ ರೈತರಿಗೂ ಉಳಿತಾಯವಾಗಲಿದೆ ಮತ್ತು ಮಿಲ್‌ನವರಿಗೂ ಲಾಭದಾಯಕವಾಗಲಿದೆ ರೈತ ನಮ್ಮ ದೇಶದ ಬೆನ್ನೇಲು ಎಂದು ಮಾತಿಗೆ ಹೇಳುವದಲ್ಲಾ ಈ ರೀತಿಯಾಗಿ ಹಣ ಇದ್ದವರು ಹಣಕಾಸು ತೊಡಗಿಸುವದರೊಂದಿಗೆ ಗ್ರಾಮೀಣ ಭಾಗದಲ್ಲಿ ಇಂಥಹ ಮಿಲ್ ಗಳನ್ನು ಸ್ಥಾಪಿಸುವುದರಿಂದ  ಯೋಗ್ಯ ದರದ ಜೊತೆಗೆ ಅವರಿಗೆ ಅನುಕೂಲ ಕಲ್ಪಿಸಿದಂತಾಗಲಿದೆ ಶ್ರೀ ಗುರು ಖಾಸ್ಗತ ಅಗ್ರೋ ಇಂಡಸ್ಟ್ರೀಸ್ ಹತ್ತಿ ಮಿಲ್ ಇಂದು ಬೃಹತ್ ಪ್ರಮಾಣದಲ್ಲಿ ಪ್ರಾರಂಬಿಸುವದರೊಂದಿಗೆ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಿರುವದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದ ಸಾನಿದ್ಯ ವಹಿಸಿದ ತುಂಬಗಿ ಮಡಿವಾಳೇಶ್ವರ ಮಠದ ಪೂಜ್ಯ ಶ್ರೀ ಷ. ಬ್ರ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ರೈತರಿಗೆ ಅವರು ಬೆಳೆದ ಫಸಲುಗಳನ್ನು ಇಲ್ಲಿಯೇ ಮಾರಾಟ ಮಾಡಲು ತುಂಬಾ ಅನಕೂಲ ವಾಗುತ್ತದೆ ಇದರಿಂದ ಅವರಿಗೆ ಹಲವಾರು ವೆಚ್ಚಗಳಿಂದ ಉಳಿಯಲು ಸಾಧ್ಯವಾಗುತ್ತದೆ ಈ ಮಿಲ್ಲಿನ ಆಡಳಿತ ಮಂಡಳಿಯವರು ಬಹಳ ಕಷ್ಟಪಟ್ಟು ದೊಡ್ಡ ಪ್ರಮಾಣದಲ್ಲಿ ಹಣವನ್ನು ವೆಚ್ಚ ಮಾಡಿ ಇದನ್ನು  ಆರಂಭಿಸಿದ್ದಾರೆ ಅವರಿಗೆ ಎಲ್ಲ ರೈತರ ಸಹಕಾರ ಇರಲಿ ಎಂದರು.  ಉದ್ಘಾಟನಾ ಸಮಾರಂಭದ ಮುನ್ನ ಬೆಳಿಗ್ಗೆ ಶ್ರೀಗಳ ಸಮ್ಮುಖದಲ್ಲಿ ವಾಸ್ತು ಶಾಂತಿಯ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.    
ಕೊಣ್ಣೂರಿನ ಪೂಜ್ಯ ಶ್ರೀ ಶ್ರೀನಾಥಯ್ಯ ಮಹಾಸ್ವಾಮಿಗಳು ಹಾಗೂ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಅವರು ಸಮ್ಮುಖ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಬಿಜೆಪಿ ಮುಖಂಡ ಬಸನಗೌಡ ಪಾಟೀಲ(ಯಡಿಯಾಪೂರ), ಬಿ.ಎಸ್.ಪಾಟೀಲ(ಯಾಳಗಿ), ಆನಂದಗೌಡ ದೊಡ್ಡಮನಿ, ಸುರೇಶಬಾಬುಗೌಡ ಬಿರಾದಾರ(ಪೀರಾಪೂರ), ಆರ್.ಎಸ್.ಪಾಟೀಲ(ಕೂಚಬಾಳ), ಅಮೀನರೆಡ್ಡಿ ಯಾಳಗಿ, ಸಿದ್ದನಗೌಡ ಪಾಟೀಲ(ನಾವದಗಿ), ಪ್ರಭುಗೌಡ ಮದರಕಲ್ಲ, ಬಸನಗೌಡ ವಣಕ್ಯಾಳ, ರಾಜುಗೌಡ ಕೊಳೂರ,  ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಶ್ರೀ ಗುರು ಖಾಸ್ಗತ ಅಗ್ರೋ ಇಂಡಸ್ಟ್ರೀಜ್ ಹತ್ತಿ ಮಿಲ್ ಆಡಳಿತ ಮಂಡಳಿ ಸದಸ್ಯರಾದ ಶರದಕುಮಾರ ಎತ್ತಿನಮನಿ, ಸಂಗನಗೌಡ ಪಾಟೀಲ, ಶಿವಪುತ್ರ ಪಾಟೀಲ, ಶಿವನಗೌಡ ಹಾರಣಗೇರಿ, ಮಲ್ಲಯ್ಯ ಚಿತ್ತಾ ಹುಲಕಲ್, ಹರ್ಪೀತಸಿಂಗ್  ಶಹಾಪೂರ, ಮಲ್ಲನಗೌಡ ಸಿಂಗ್ನಳ್ಳಿ (ರಡ್ಡಿ), ಕೆ.ವಾಯ್.ಬಿರಾದಾರ ಮೊದಲಾದವರು ಇದ್ದರು

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ