Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

 ಪಾಲಿಕೆ ಅಧಿಕಾರಿ ನಂದೀಶ್ ಅವರನ್ನು ಹುದ್ದೆಯಿಂದ ವಜ ಮಾಡಿ :  ಎ ಮಾನಯ್ಯ ಆಗ್ರಹ

ಬಿಜೆಪಿಯೇತರ  ಮತದಾರರನ್ನು ಪಟ್ಟಿಯಿಂದ ಕೈಬಿಡುವ ಹನ್ನಾರ 

 ಬಳ್ಳಾರಿ ಅ. 05; : ಮತದಾರರ ಸಮಗ್ರ ಪರಿಸ್ಕರಣಾ ಪಟ್ಟಿಯಲ್ಲಿ ಫಾರಂ ನಂಬರ್ ಏಳು ನೀಡಿ 7500ಕ್ಕೂ ಅಧಿಕ ಅಲ್ಪಸಂಖ್ಯಾತ ಮತದಾರರನ್ನು ಮತದಾರ ಪಟ್ಟಿಯಿಂದ ಕೈಬಿಡುವಂತೆ ಪಾಲಿಕೆ ಸದಸ್ಯ ಮೋತ್ಕಾರ್ ಶ್ರೀನಿವಾಸ ನೀಡಿರುವ ಮನವಿ ಖಂಡನೀಯ ಎಂದು ದಲಿತ ಸಂಘರ್ಷ ಸಮಿತಿ ಡಿಜಿ ಸಾಗರ್ ಬಣದ ಜಿಲ್ಲಾ ಸಂಚಾಲಕರಾದ ಎ ಮಾನಯ್ಯ ಖಂಡಿಸಿದರು.
 ಅವರು ಇಂದು ನಗರದ ನಕ್ಷತ್ರ ಹೋಟೆಲ್ ಸಭಾಂಗಣದಲ್ಲಿ ಅಹಿಂದ ಮುಖಂಡರಿಂದ ಹಮ್ಮಿಕೊಂಡ  ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಭಾರತೀಯ ಜನತಾ ಪಕ್ಷದ ವತಿಯಿಂದ ಬಿಜೆಪಿಯೇತರ ಮತದಾರರನ್ನು ಮತದಾರರ ಕರಡು ಪಟ್ಟಿಯಿಂದ ಕೈ ಬಿಡಲು ಹೊನ್ನಾರ ನಡೆಸುತ್ತಿದ್ದಾರೆ ಬಿ ಎಲ್ ಓ ಗಳು ಸರಿಯಾದ ಮಾಹಿತಿ ನೀಡಿ ಮತದಾರರ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ ಆದರೂ ಅವರ ಹೆಸರು ಕೈಬಿಡಲು ಪಾಲಿಕೆ ಅಧಿಕಾರಿ ನಂದೀಶ್ ಮತ್ತು ಬಿಜೆಪಿ ಪಾಲಿಕೆ ಸದಸ್ಯರು  ಹುನ್ನಾರ ನಡೆಸುತ್ತಿದ್ದಾರೆ ಪಾಲಿಕೆ  ಅಧಿಕಾರಿ ನಂದೀಶ್ ಅವರನ್ನು ಹುದ್ದೆಯಿಂದ ಒಗೆ ಮಾಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.
 ಯಾವುದೇ ಹಕ್ಕು ಹೊಂದಿಲ್ಲದ ಪಾಲಿಕೆ ಸದಸ್ಯ ಮೋತ್ಕಾರ್ ಶ್ರೀನಿವಾಸ್ 7,000ಕ್ಕೂ ಅಧಿಕ ಮತದಾರರನ್ನು ಕೈಬಿಡುವಂತೆ ಮನವಿ ಪತ್ರ ಸಲ್ಲಿಸುವುದು ಕಾನೂನುಬಾಹಿರವಾಗಿದೆ ಇದನ್ನೇ ಮುಂದಿಟ್ಟುಕೊಂಡು ಪಾಲಿಕೆ ಅಧಿಕಾರಿಗಳು ಮತ್ತು ಬಿ ಎಲ್ ಓ ಗಳು ಅಧಿಕೃತ ಮತದಾರರನ್ನು ಪಟ್ಟಿಯಿಂದ ಕೈಬಿಡುವಂತೆ ಚಡ್ಯಂತರ ನಡೆಸುತ್ತಿದ್ದಾರೆ ಹೀಗಾಗಲಿ ಬಡ ಮತದಾರರ ಗತಿ ಏನು ಎಂದು ಗಾದಿಲಿಂಗನಗೌಡ ಆತಂಕವನ್ನು  ವ್ಯಕ್ತಪಡಿಸಿದರು.
 ನನ್ನ 13ನೇ ವಾರ್ಡ್ ನಲ್ಲಿ 578 ಪರಿಶಿಷ್ಟ ಪಂಗಡ ಮತದಾರರ ಪೈಕಿ 65 ಜನ ಮತದಾರರನ್ನು ಮತದಾರ ಪಟ್ಟಿಯಿಂದ  ಕೈ ಬಿಡುವಂತೆ  ಒತ್ತಡ ಹೇರಲಾಗಿದೆ ಇದು ಕಾನೂನು ಮತ್ತು ಸಂವಿಧಾನ ವಿರೋಧಿ ನಡೆಯಾಗಿದೆ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗ ಬಿಜೆಪಿಯ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ   ಬಿ ಆರ್ ಎಲ್ ಶ್ರೀನಿವಾಸ್  ಆರೋಪಿಸಿದರು.
 ಈ ಪತ್ರಿಕಾಗೋಷ್ಠಿಯಲ್ಲಿ ಹುಮಾಯುನ್ ಖಾನ್ ಮಾತನಾಡಿ ಚುನಾವಣಾ ಅಧಿಕಾರಿಗಳು ನಮ್ಮ ಧರ್ಮಗುರು ಖಾಜಿಯವರ ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ ಅಷ್ಟೇ ಅಲ್ಲದೆ ಹಾಲಿ ಪಾಲಿಗಯ ಉಪಮೇಯರ್ ಡಿ ಸುಕುಮ್ ಅವರ ಹೆಸರನ್ನು ಸಹ ಕೈಬಿಟ್ಟಿದ್ದಾರೆ ಇದನ್ನು ಗಮನಿಸಿದಲ್ಲಿ ಕೇವಲ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಮತದಾರ ಪಟ್ಟಿಯನ್ನು    ಪರಿಷ್ಕರಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಫಾರಂ 7 ನೀಡುತ್ತಿರುವುದು ಒಂದು ಅವೈಜ್ಞಾನಿಕ ಕ್ರಮವಾಗಿದೆ ಇದನ್ನು ಕೂಡಲೇ ನಿಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದ ಅವರು ತಪ್ಪಿಸಸ್ಥ ಬಿ ಎಲ್ ಓ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
 ಈ ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಕೆ ಚಿದಾನಂದಪ್ಪ ಎಲ್ ಮಾರಣ್ಣ ಮಿಂಚು ಶ್ರೀನಿವಾಸ್ ನಂದೀಶ್ ಅವಂ ಬಾವಿ ಲೋಕೇಶ್ ಮಾತನಾಡಿದರು.  ಈ ಸಂದರ್ಭದಲ್ಲಿ ಜಗನ್, ದೇವಿ ನಗರ ಪರಶುರಾಮ್,  ಅಯಾಜ್ ಅಹಮದ್ ಶಿವರಾಜ್ ತಳವಾರ ದುರ್ಗಪ್ಪ ಬಿಸಿಲಹಳ್ಳಿ ಮುರಳಿ ಪಾಲಿಕೆ ಸದಸ್ಯ ನೂರಾಹಮದ್ ಮುಖಂಡರಾದ ಕೆಣೆಕಲ್ ಮಹಬೂಬ್ ಸಾಹೇಬ್ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಮುಖಂಡರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ