ಬಳ್ಳಾರಿ,ಸೆ.24: ನಗರದ ವಿ.ಎಸ್.ಕೆ. ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗದ ಸಂಶೋಧನಾರ್ಥಿಯಾದ ಕುಮಾರಿ ರೆಷ್ಮಾಬೀ ಹೆಚ್ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ವಿಶ್ವವಿದ್ಯಾಲಯದ ಇಂಗ್ಲೀಷ್ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊಫೆಸರ್ ರಾಬರ್ಟ್ ಜೋಸ್ ಅವರ ಮಾರ್ಗದರ್ಶನದಲ್ಲಿ “ಮ್ಯಾಪಿಂಗ್ ಮ್ಯಾಸ್ಕುಲಿನಿಟೀಸ್ ಇನ್ ದಿ ವರ್ಕ್ಸ್ ಆಫ್ ವಿಜಯ್ ತೆಂಡೂಲ್ಕರ್ ಅಂಡ್ ಮಹೇಶ್ ದತ್ತಾನಿ” ಎಂಬ ಶೀರ್ಷಿಕೆಯಡಿ ಮಹಾಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಪಿಎಚ್.ಡಿ ಪದವಿ ನೀಡಲಾಗಿದೆ.
ಮಾಬುಸುಬಾನಿ ಮತ್ತು ಸಲೀಮಾಬೀ ಇವರ ಪುತ್ರಿಯಾದ ರೆಷ್ಮಾಬೀ ಹೆಚ್ ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನವರಾಗಿದ್ದು, ಪಿಎಚ್.ಡಿ. ಪದವಿ ಲಭಿಸಿದ ಹಿನ್ನೆಲೆಯಲ್ಲಿ ಇಂಗ್ಲೀಷ್ ಅಧ್ಯಯನ ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಗುರುಹಿರಿಯರು ಶುಭಾಶಯ ಕೋರಿದ್ದಾರ