Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಗ್ರಾಹಕರ ಹಣಕ್ಕೆ ಕನ್ನ: ಚಿನ್ನ ಅಡವಿನ ಆಧಾರದಲ್ಲಿ ಕೋಟ್ಯಾಂತರ ರೂ. ವಂಚನೆ

ಬೆಂಗಳೂರು, ಮೇ 09: ಜನರು ಕಷ್ಟದಲ್ಲಿದ್ದಾರೆ ಎಂದು ತಮ್ಮ ಅಮೂಲ್ಯ ಚಿನ್ನಾಭರಣವನ್ನು (Gold Jewellery) ಅಡವಿಟ್ಟರೆ, ಇಲ್ಲೊಬ್ಬ ಜ್ಯುವೆಲರಿ ಶಾಪ್ ಮಾಲೀಕ ಜನರಿಗೇ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಕಡಿಮೆ ಬಡ್ಡಿಯ ಆಮಿಷ ತೋರಿಸಿ ಗ್ರಾಹಕರಿಂದ ಚಿನ್ನ ಪಡೆದು, ಅಂಗಡಿ ಬಾಗಿಲು ಮುಚ್ಚಿಕೊಂಡು ಆರೋಪಿ ಪರಾರಿಯಾಗಿದ್ದಾನೆ.

ಮುಖ್ಯಾಂಶಗಳು

ಆರೋಪಿಯು ರಾಘವೇಂದ್ರ ಜ್ಯುವೆಲರಿ ಶಾಪ್ ಮಾಲೀಕ ತೇಜಸ್ ಗೌಡ ಅಲಿಯಾಸ್ ಮೂರ್ತಿ ಎಂಬಾತನೇ ಈ ಹಗರಣದ ಕೇಂದ್ರಬಿಂದು. ಈತ ಮೊದಲಿಗೆ ಒಂದು ತಂಡವನ್ನು ಕಟ್ಟಿಕೊಂಡು, ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಚಿನ್ನ ಅಡವಿಟ್ಟಿರುವ ಗ್ರಾಹಕರ ವಿವರಗಳನ್ನು ಸಂಗ್ರಹಿಸುತ್ತಿದ್ದ. ನಂತರ ಅಂತಹವರನ್ನು ಸಂಪರ್ಕಿಸಿ ಕಡಿಮೆ ಬಡ್ಡಿಯಲ್ಲಿ ಹೆಚ್ಚಿನ ಸಾಲ ನೀಡುವುದಾಗಿ ನಂಬಿಕೆ ಮೂಡಿಸುತ್ತಿದ್ದ. ಗ್ರಾಹಕರು ಒಪ್ಪಿಕೊಂಡ ಬಳಿಕ, ಅವರ ಚಿನ್ನವನ್ನು ಅಡವಿದ್ದ ಸಂಸ್ಥೆಗಳಿಂದ ಬಿಡಿಸಿಕೊಂಡು ಹಣ ಪಾವತಿಸುತ್ತಿದ್ದ. ನಂತರ ಆ ಚಿನ್ನವನ್ನು ತನ್ನ ರಾಘವೇಂದ್ರ ಜ್ಯುವೆಲರಿ ಶಾಪ್‌ನಲ್ಲಿ ಇಟ್ಟುಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.

ಆರೋಪಿ ಎಸ್ಕೇಪ್!
ಕಳೆದ ಒಂದು ವರ್ಷದಿಂದ ಈ ರೀತಿಯ ವ್ಯವಹಾರ ನಡೆಸುತ್ತಿದ್ದ ತೇಜಸ್, ಕಡಿಮೆ ಬಡ್ಡಿ (50 ಪೈಸೆ) ಆಮಿಷ ತೋರಿಸಿ ನೂರಾರು ಗ್ರಾಹಕರನ್ನು ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆದರೆ ಕಳೆದ ಮೂರು ತಿಂಗಳಿಂದ ಜ್ಯುವೆಲರಿ ಶಾಪ್ ಮುಚ್ಚಲ್ಪಟ್ಟಿದ್ದು, ಚಿನ್ನ ಬಿಡಿಸಲು ಬಂದ ಗ್ರಾಹಕರಿಗೆ ಅಂಗಡಿ ಬಾಗಿಲು ಮುಚ್ಚಿರುವುದು ಕಂಡುಬಂದಿದೆ. ಈ ನಡುವೆ ಶಾಪ್ ಬಂದ್ ಮಾಡಿದ ಬಳಿಕ ಹೊಸ ಫೈನಾನ್ಸ್ ಸಂಸ್ಥೆಯೊಂದನ್ನು ಆರಂಭಿಸಿದ್ದ ತೇಜಸ್, ಕಳೆದ ಒಂದು ವಾರದಿಂದ ಅದನ್ನೂ ಮುಚ್ಚಿ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಲಕ್ಷಾಂತರ ರೂಪಾಯಿ ವಂಚನೆ
ಯಲಹಂಕ ಅಳ್ಳಾಳಸಂದ್ರ ನಿವಾಸಿ ಸೌಮ್ಯಲತಾ ಎಂಬವರಿಗೆ ಆರೋಪಿ ಸುಮಾರು 50 ಲಕ್ಷಕ್ಕೂ ಅಧಿಕ ರೂಪಾಯಿ ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ. ವಿವಿಧ ಖಾಸಗಿ ಫೈನಾನ್ಸ್ ಸಂಸ್ಥೆಗಳಲ್ಲಿ ಅಡವಿಟ್ಟಿದ್ದ ಅವರ ಚಿನ್ನವನ್ನು ಬಿಡಿಸಿಕೊಂಡ ನಂತರ, ಅದನ್ನು ಹಿಂದಿರುಗಿಸದೆ ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ ಎಂದು ದೂರಲಾಗಿದೆ. ಈ ಘಟನೆ ಬಳಿಕ ಕಂಗಾಲಾದ ಸೌಮ್ಯಲತಾ ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿ ತೇಜಸ್ ಗೌಡನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗಮಂಗಲ: ತಾಲೂಕಿನ ರಾ ಹೆ 75ರ ವರಾಹಸಂದ್ರ ಸಮೀಪ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಟ್ರ್ಯಾಕ್ಟ‌ರ್ ಅಪಘಾತ : ಬಸ್ ಚಾಲಕ ದುರ್ಮರಣದೇವರಾಜ್ ಎಂಬ ವ್ಯಕ್ತಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ, ಪೊಲೀಸ್ ತನಿಖೆಗೆ ಗ್ರಾಮಸ್ಥರ ಒತ್ತಾಯಉತ್ತಮ ವ್ಯಕ್ತಿತ್ವ, ಚಾಣಾಕ್ಷ ಕಾರ್ಯವೈಖರಿ; ವರ್ಗಾವಣೆಯಾದ ಚಾ ವಿ ಸ ನಿ ನಿ ಯ AE ಮತ್ತು ಪ್ರಭಾರ AEE ಅವರಿಗೆ ಭಾವಪೂರ್ಣ ಬೀಳ್ಕೊಡುಗೆಹಾಸನ: ನಿರ್ಮಾಣ ಹಂತದ ಮನೆಯ ಕ್ಯೂರಿಂಗ್ ವೇಳೆ ವಿದ್ಯುತ್ ಅವಘಡ – ಕುಣಿಗಲ್ ಆರ್‌ಎಫ್‌ಒ ಜಗದೀಶ್ ಸಾವುಟಾಟಾ ಪವರ್ ಲೈಸೆನ್ಸ್‌ಗೆ ವಿರೋಧ: ಹೆಚ್.ಡಿ. ರೇವಣ್ಣರಿಂದ ಸಂಪೂರ್ಣ ಬೆಂಬಲವಿದ್ಯುತ್ ವಿತರಣಾ ಖಾಸಗೀಕರಣ ವಿರೋಧಿಸಿ ಸಂಸದರಿಗೆ ಮನವಿಇರಾನ್–ಅಮೆರಿಕ ಶಾಂತಿ ಮಾತುಕತೆ ನಡುವೆ ಖಮೇನಿ ಅಂತ್ಯಕ್ರಿಯೆ ದಿನಾಂಕ ಘೋಷಣೆಮಧ್ಯಪ್ರಾಚ್ಯದಲ್ಲಿ ಕಾಳಗದ ಕಾವು: US ನೌಕಾನೆಲೆ ಮೇಲೆ ಇರಾನ್ ದಾಳಿ, ಪ್ರತೀಕಾರ ಅನಿವಾರ್ಯ ಎಂದ ಟ್ರಂಪ್13 ಕಿ.ಮೀ ಕಾಮಗಾರಿ ಪೂರ್ಣಗೊಂಡ ತುಮಕೂರು–ಚಿತ್ರದುರ್ಗ ರೈಲು ಯೋಜನೆ; ಸಂಪೂರ್ಣ ಮಾರ್ಗ ಯಾವಾಗ ಸಿದ್ಧ?ಬಂಡೀಪುರದಲ್ಲಿ ಭದ್ರತಾ ಲೋಪ: ರೌಡಿ ಶೀಟರ್ ಗ್ಯಾಂಗ್‌ನ ಎಣ್ಣೆ ಪಾರ್ಟಿ ಬಹಿರಂಗ