Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಪವಾಡಗಳ ಹಿಂದೆ ವೈಜ್ಞಾನಿಕ ಸತ್ಯ ಅರಿಯಬೇಕು: ಅಶೋಕ ಗೊನಬಾಳ

 

ರನ್ನ ಬೆಳಗಲಿ:೦೮., ಪಟ್ಟಣದ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆಯಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮವು ಮಂಗಳವಾರ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಸಾಯಿನಿಕೇತನ ಸಿಬಿಎಸ್‌ಇ ಪ್ರೌಢಶಾಲೆ, ಮುಧೋಳದ ಚಿತ್ರಕಲಾ ಶಿಕ್ಷಕ ಅಶೋಕ ಗೊನಬಾಳ ಮಾತನಾಡಿ, ಸಾಮಾನ್ಯವಾಗಿ ಮನು?ನಿಂದ ಮಾಡುವುದು ಅಸಾಧ್ಯವೆಂದು, ಅತೀಂದ್ರಿಯ ಅಥವಾ ಅತಿಮಾನು? ಶಕ್ತಿಯಿಂದ ನಡೆಯುತ್ತದೆ ಎಂದು ಹೇಳಿಕೊಳ್ಳುವ ಘಟನೆಗಳನ್ನು ಪವಾಡ ಎಂದು ಕರೆಯಲಾಗುತ್ತದೆ. ಆದರೆ ಇಂತಹ ಘಟನೆಗಳ ಹಿಂದೆ ಬಹುತೇಕ ವೈಜ್ಞಾನಿಕ ಕಾರಣಗಳು ಮತ್ತು ತಂತ್ರಗಳು ಅಡಗಿರುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಾಜಿನ ಚೂರುಗಳ ಮೇಲೆ ನಡೆಯುವುದು, ಬೆಂಕಿಯ ಮೇಲೆ ನಡೆಯುವುದು, ಕೈಯಲ್ಲಿ ಬೆಂಕಿಯ ಜ್ವಾಲೆ ತೋರಿಸುವುದು, ತಾಮ್ರದ ತಂತಿಯನ್ನು ನಾಲಿಗೆಗೆ ಚುಚ್ಚಿಕೊಳ್ಳುವುದು, ತೆಂಗಿನಕಾಯಿಯಲ್ಲಿ ಹೂವು ಮೂಡಿಸುವುದು, ತೆಂಗಿನ ನಾರಿಗೆ ಬೆಂಕಿ ಹಚ್ಚುವುದು, ಲಿಂಬೆಹಣ್ಣಿನಿಂದ ರಕ್ತ ಬರುತ್ತಿರುವಂತೆ ತೋರಿಸುವುದು ಸೇರಿದಂತೆ ವಿವಿಧ ಪವಾಡಗಳ ಹಿಂದಿರುವ ವೈಜ್ಞಾನಿಕ ರಹಸ್ಯಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿ ವಿವರಿಸಲಾಯಿತು.ಬೆಂಕಿಯ ಮೇಲೆ ನಡೆಯುವಂತಹ ಪ್ರದರ್ಶನಗಳಲ್ಲಿ ಸಮಯ, ಉ?ತೆಯ ಪ್ರಮಾಣ ಹಾಗೂ ವಸ್ತುಗಳ ಭೌತಿಕ ಗುಣಲಕ್ಷಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದೇ ರೀತಿ ಕೆಲವು ರಾಸಾಯನಿಕ ಕ್ರಿಯೆಗಳಿಂದ ಬೆಂಕಿ ಉತ್ಪತ್ತಿಯಾಗುವ ರೀತಿಯನ್ನೂ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು. ಸೂಜಿಯ ಮೇಲೆ ನಡೆಯುವುದು, ನಾಲಿಗೆಗೆ ತಂತಿ ಚುಚ್ಚಿಕೊಳ್ಳುವುದು ಮುಂತಾದ ಪ್ರದರ್ಶನಗಳಲ್ಲಿಯೂ ಇರುವ ತಂತ್ರಗಳನ್ನು ವಿವರಿಸಿ, ಇಂತಹ ಘಟನೆಗಳನ್ನು ಕಂಡಾಗ ಅಂಧವಾಗಿ ನಂಬದೆ ವೈಜ್ಞಾನಿಕವಾಗಿ ವಿಶ್ಲೇಷಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿವಿಧ ಪ್ರಯೋಗಗಳನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರದರ್ಶಿಸಿ, ಅವರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಶೋಕ ಗೊನಬಾಳ ಸಂವಾದ ನಡೆಸಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಧೈರ್ಯದಿಂದ ಮೂಢನಂಬಿಕೆಗಳನ್ನು ಎದುರಿಸುವ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರಿ ಮುಖ್ಯಗುರುಮಾತೆ ಎಸ್.ಎಸ್. ಉದಪುಡಿ ವಹಿಸಿದ್ದರು. ಎಂ.ಎ. ಮುಗಳಖೋಡ, ಎಂ.ಬಿ. ಮುರಗೋಡ, ಅನಿಲ ನಡುವಿನಮನಿ, ಅಕ್ಷತಾ ಕುಲಗೋಡ ಹಾಗೂ ಬಿ.ಎಂ. ಹವಾಲ್ದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಬಿ.ಪಿ. ಚೋಪಡೆ ಚಿತ್ರಕಲಾ ಶಿಕ್ಷಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ