Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ರಾಮದುರ್ಗದಲ್ಲಿ ವಿಜೃಂಭಿಸಿದ ಶಬರಿ ಉತ್ಸವ: ಜಾನಪದ ಕಲೆ ಉಳಿಸುವಂತೆ ಯುವಜನತೆಗೆ ಕರೆ


ರಾಮದುರ್ಗ,ಅ,೨೭: ಭಾರತೀಯ ಕಲೆ, ಸಾಹಿತ್ಯ, ಜನಪದ ಸಂಸ್ಕೃತಿ ನಮ್ಮ ನೆಲದ ಅಸ್ಮಿತೆಯಾಗಿದೆ. ನಶಿಸಿ ಹೋಗುತ್ತಿರುವ ಮೂಲ ಜನಪದ ಕಲೆಯನ್ನು ಉಳಿಸಿ, ಬೆಳೆಸುವ ಗುರುತರ ಜವಾಬ್ದಾರಿ ನಮ್ಮ ಯುವ ಜನಾಂಗದ ಮೇಲಿದೆ ಎಂದು ಸುರೇಬಾನ ಪಿಎಸ್.ಐ ಗುರುರಾಜ ಕಲಬುರ್ಗಿ ಹೇಳಿದರು. 
ರಾಮದುರ್ಗ ಕಲ್ಚರಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ತಾಲೂಕಿನ ಶಬರಿಕೊಳ್ಳದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶಬರಿ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಬರಿ ಓರ್ವ ಮಹಾತಪಸ್ವಿ.  ಶ್ರೀರಾಮನ ಬರುವಿಕೆಗಾಗಿ ಕಾಯ್ದ ಐತಿಹಾಸಿಕ ಸ್ಥಳ ಶಬರಿ ಕೊಳ್ಳದಲ್ಲಿ ಪ್ರತಿವರ್ಷ ಶಬರಿ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸುತ್ತ ಬಂದಿರುವುದು ಅತ್ಯಂತ ಸ್ತೂತ್ಯ ಎಂದರು.  
ಸುರೇಬಾನ ಗ್ರಾಮ ಪಂಚಾಯತ ಅಧ್ಯಕ್ಷ ಅಶ್ರಫ್‌ಅಲಿ ಬಂದಗಿ ಮಾತನಾಡಿ, ಆದಿ ಕಾಲದಿಂದಲೂ ಜನಪದ ಕಲೆ ಮನೆ ಮನೆಗಳಲ್ಲಿ ಬೆಳೆದು ಬಂದಿರುವಂತಹದ್ದಾಗಿದೆ.  ಇಂತಹ ಜನಪದ ಕಲೆ ಮತ್ತು ಕಲಾವಿದರನ್ನು ಉಳಿಸಿ, ಕಲೆಯನ್ನು ಪ್ರೋತ್ಸಾಹಿಸುತ್ತಿರುವ ರಾಮದುರ್ಗ ಕಲ್ಚರಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯವಾದುದು ಎಂದರು.  
ಅಧ್ಯಕ್ಷತೆ ವಹಿಸಿದ್ದ ರಾಮದುರ್ಗ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ಕುಂಬಾರ ಮಾತನಾಡಿ, ರಾಮದುರ್ಗ ತಾಲೂಕಿನಲ್ಲಿ ಬಹುಸಂಖ್ಯೆಯಲ್ಲಿರುವ ಕಲಾವಿದರಿಗೆ ವೇದಿಕೆ ಪೂರೈಸುವುದುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ವೇದಿಕೆಗಳನ್ನು ನಿರ್ಮಾಣ ಮಾಡುವುದರ ಮೂಲಕ ಸಂಗೀತ, ನೃತ್ಯ, ವೃತ್ತಿಪರ ನಾಟಕಗಳು, ಜಾನಪದ ಕಲೆಗಳನ್ನು ನಿರಂತರವಾಗಿ ಉತ್ತೇಜಿಸುತ್ತ ಬರಲಾಗಿದೆ ಎಂದರು.  
ಕಲ್ಚರಲ್ ಟ್ರಸ್ಟ್‌ನ ಉಪಾಧ್ಯಕ್ಷ ಈಶ್ವರ ಹಾಲಭಾವಿ, ಸದಸ್ಯರಾದ ಚಂದ್ರಕಾಂತ ಹೊಸಮನಿ, ಮನಿಹಾಳ ಗ್ರಾ.ಪಂ ಸದಸ್ಯರಾದ ಮಾರುತಿ ಪ್ಯಾಟಿ, ನೂರೊಂದ ಕೊಂಗಿ, ಪ್ರವೀಣ ಗೊನಬಾಳ, ರಮೇಶ ಪತ್ತೇಪೂರ, ಜನಸಾಮಾನ್ಯರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಈರಣ್ಣ ಕಲ್ಯಾಣಿ, ಮಹರ್ಷಿ ವಾಲ್ಮೀಕಿ ಜಾನಪದ ಕಲಾ ಸಂಘದ ಅಧ್ಯಕ್ಷ ಯಮನಪ್ಪ ಬೆಳಗಂಟಿ, ಐ.ಎಸ್. ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರಕಾಶ ಬಾಳಿಕಾಯಿ ನಿರೂಪಿಸಿದರು.  ವಿಜಯಲಕ್ಷ್ಮೀ ಕಮ್ಮಾರ ಪ್ರಾರ್ಥಿಸಿದರು. ಈಶ್ವರ ಹಾಲಭಾವಿ ವಂದಿಸಿದರು.  
ಸಾಂಸ್ಕೃತಿಕ ಕಾರ್ಯಕ್ರಮ:
ನಂತರ ಜರುಗಿದ ಕಾರ್ಯಕ್ರಮದಲ್ಲಿ ಪದ್ಮಭಾಸ್ಕರ್ ನೃತ್ಯ ಕಲಾಕೇಂದ್ರ ಸುರೇಬಾನ ಕಲಾವಿದರಿಂದ ಭರತನಾಟ್ಯ, ಶಾಖಾಂಬರಿ ಜಾನಪದ ಕಲಾತಂಡದ ಶಂಕ್ರವ್ವ ಮುಗಳಿ ಅವರ ನಿರ್ದೇಶನದಲ್ಲಿ ದೀಪನೃತ್ಯ, ಡಾ.ಗುರುಬಸವ ಮಹಾಮನೆ ಅವರಿಂದ ವಯೋಲಿನ್ ವಾದನ, ಧಾರವಾಡದ ಸ್ವರ ಸಂವಾದಿನಿ ಸಂಗೀತ ವಿದ್ಯಾಲಯದ ಕಲಾವಿದರಿಂದ ಸಮೂಹ ಗಾಯನ. ಸುರೇಬಾನದ ವಿಜಯಲಕ್ಷ್ಮೀ ಕಮ್ಮಾರ ಮತ್ತು ವಿನಾಯಕ ಕಮ್ಮಾರ ಅವರಿಂದ ಸುಗಮ ಸಂಗೀತ, ರಾಮದುರ್ಗದ ರಾಧಾಪೂರ ಪೇಟೆಯ ಜಾನಪದ ಕಲಾವಿದರಿಂದ ಸಾಂಪ್ರದಾಯದ ಹಾಡುಗಳ ಕಾರ್ಯಕ್ರಮ ಜರುಗಿತು. ತಬಲಾದಲ್ಲಿ ಡಾ. ಶಿವರಾಜ ಈರಾಪೂರ, ಹಾರ್ಮೊನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ, ಪ್ರಶಾಂತ ಭಂಡಿವಾಡ, ಕೀ ಬೋರ್ಡದಲ್ಲಿ ವಿನಾಯಕ ಕಮ್ಮಾರ ಸಾಥ್ ಸಂಗೀತ ನೀಡಿದರು.  

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ