ಮುಗಳಖೋಡ (೧೧) ಶರನ್ನವರಾತ್ರಿ ಪ್ರಥಮ ದಿನದ ಶೈಲಪುತ್ರಿ ರೂಪದಲ್ಲಿ ಪಟ್ಟಣದ ಪುರಾತನ ಗ್ರಾಮ ದೇವತೆ ಮಹಾಲಕ್ಷ್ಮೀ ಮೂರ್ತಿಯನ್ನು ಅಲಂಕರಿಸಿ ಪೂಜಿಸಿ ಘಟ ಸ್ಥಾಪಿಸಲಾಯಿತು. ಭಕ್ತರಿಂದ ಆಂಜನೇಯ ಮಂದಿರ,ಈಶ್ವರ,ದುರ್ಗಾ ಮಾತೆ,ದ್ಯಾಮವ್ವಾ, ಕೋಟೆ ಹುಡೆದೇವತೆ,ರೇಣುಕಾ ದೇವಿ ,ಬಸವೇಶ್ವರ,ಚನ್ನಬಸವೇಶ್ವರ ,ಭೀರಲಿಂಗೇಶ್ವರ ,ಪುರಾತನ ಮಡ್ಡಿ ಸಿದ್ದರಾಯಿ ,ಅಡವಿಸಿದ್ದೇಶ್ವರ,ರಾಮಲಿಂಗೇಶ್ವರ ಮಂದಿರಗಳಲ್ಲಿ ಹಾಗೂ ಶ್ರೀ ಯಲ್ಲಾಲಿಂಗೇಶ್ವರ ಭೃಹನ್ಮಠದಲ್ಲಿ ದೇವಿಗೆ ಶೈಲಪುತ್ರಿ ರೂಪದಲ್ಲಿ ವಿಶೇಷ ಅಲಂಕರಿಸಿ ಪೂಜಿಸಿ ಘಟ ಸ್ಥಾಪಿಸಿ ಶರನ್ನವರಾತ್ರಿ ಮಹೋತ್ಸವಕ್ಕೆ ವೈಭವದಿಂದ ಚಾಲನೆ ನೀಡಲಾಯಿತು.