ಬೆಂಗಳೂರು: ಸಿಎಂ Siddaramaiah ರಾಜೀನಾಮೆ ಘೋಷಣೆ ವೇಳೆ ಸಚಿವ Santosh Lad ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ರಾಜೀನಾಮೆಗೂ ಮುನ್ನ ಸಚಿವರೊಂದಿಗೆ ಇಂದು ಉಪಹಾರ ಸಭೆ ನಡೆಸಿದ ಸಿದ್ದರಾಮಯ್ಯ, ತಮ್ಮ ಸ್ಥಾನತ್ಯಾಗದ ನಿರ್ಧಾರವನ್ನು ಪ್ರಕಟಿಸಿದರು. ಇದೇ ವೇಳೆ ಮುಂದಿನ ಸಿಎಂ ಆಗಿ D. K. Shivakumar ಹೆಸರು ಘೋಷಿಸಿ, ಅವರಿಗೆ ಸಂಪೂರ್ಣ ಬೆಂಬಲ ನೀಡುವಂತೆ ಸಚಿವರಿಗೆ ಮನವಿ ಮಾಡಿದರು.
ಸಿದ್ದರಾಮಯ್ಯ ಅವರ ನಿರ್ಧಾರ ಕೇಳುತ್ತಿದ್ದಂತೆಯೇ ಸಭೆಯಲ್ಲಿ ಭಾವುಕ ವಾತಾವರಣ ನಿರ್ಮಾಣವಾಯಿತು. ಆಪ್ತ ಸಚಿವರು ಕಣ್ಣೀರಿಟ್ಟು ದುಃಖ ವ್ಯಕ್ತಪಡಿಸಿದರು. ಬಳಿಕ ಸಭೆಯಿಂದ ಹೊರಬಂದ ಹಲವರ ಮುಖದಲ್ಲಿ ಬೇಸರ ಸ್ಪಷ್ಟವಾಗಿ ಗೋಚರಿಸಿತು. ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದರೂ ಸಚಿವರು ಮೌನ ವಹಿಸಿದರು.
ಈ ವೇಳೆ ಸಚಿವ ಸಂತೋಷ್ ಲಾಡ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಅವರು ಭಾವನಾತ್ಮಕವಾಗಿ ಕಣ್ಣೀರಿಟ್ಟರು. ಮಾತು ಆಡಲು ಸಾಧ್ಯವಾಗದೇ ಯಾವುದೇ ಪ್ರತಿಕ್ರಿಯೆ ನೀಡದೇ ಕಾರಿನಲ್ಲಿ ತೆರಳಿದರು.