ತಾಳಿಕೋಟೆ, ದೇಶದ ಗಡಿಯಲ್ಲಿ ನಿಂತು ದೇಶದ ರಕ್ಷಣೆ ಮಾಡುವ ಸೈನಿಕರು ಹಾಗೂ ದೇಶದ ಜನರಿಗೆ ಅನ್ನ ನೀಡುವ ರೈತರು ದೇಶದ ಎರಡು ಕಣ್ಣುಗಳಿದ್ದಂತೆ ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞವೈದ್ಯ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ಹೇಳಿದರು.
ಮಂಗಳವಾರರಂದು ತಾಲೂಕಿನ ಬಳಗಾನೂರ ಗ್ರಾಮದಲ್ಲಿ ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವನವನ್ನು ಮುಡಿಪಾಗಿಟ್ಟು ಪ್ರಾಣತ್ಯಾಗ ಮಾಡಿದ ಹುತಾತ್ಮ ವೀರಯೋಧ ಸಿದ್ಧಣ್ಣ ಮಾದರ ಅವರ ಪ್ರತಿಮೆ ಅನಾವರಣ ಹಾಗೂ ಮಾಜಿ ಸೈನಿಕರ ಗೌರವ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಸೈನಿಕರು ತಮ್ಮ ಕುಟುಂಬ, ವೈಯಕ್ತಿಕ ಜೀವನ ಹಾಗೂ ಸುಖ-ಸೌಲಭ್ಯಗಳನ್ನು ಬದಿಗೊತ್ತಿ ದೇಶದ ಭದ್ರತೆಗಾಗಿ ಸೇವೆ ಸಲ್ಲಿಸುತ್ತಾರೆ. ಅಂತಹ ವೀರಯೋಧರ ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಸಿದ್ಧಣ್ಣ ಮಾದರ ಅವರ ಸ್ಮರಣಾರ್ಥ ನಿರ್ಮಿಸಿರುವ ಪ್ರತಿಮೆ ಮಕ್ಕಳಲ್ಲಿ ದೇಶಪ್ರೇಮ ಹಾಗೂ ದೇಶಸೇವೆಯ ಭಾವನೆ ಮೂಡಿಸುವ ಪ್ರೇರಣಾ ಕೇಂದ್ರವಾಗಲಿದೆ ಎಂದು ಹೇಳಿದ ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕನನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸೈನಿಕರ ಕುಟುಂಬದ ನೋವು ಮತ್ತು ತ್ಯಾಗವನ್ನು ಸಮಾಜ ಗೌರವದಿಂದ ಕಾಣಬೇಕು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಸನಗೌಡ ಮಾಡಗಿ ಅವರು ಮಾತನಾಡಿ ವೀರಯೋದ ಸಿದ್ದಣ್ಣ ಮಾದರ ಅವರ ಕುಟುಂಭದ ಮನೆ ಬಳಗಾನೂರ ಗ್ರಾಮದಲ್ಲಿ ಒಂದೇ ಇದ್ದರೂ ಕೂಡಾ ಇಡೀ ಗ್ರಾಮಸ್ಥರ ಮನ ಗೆಲ್ಲುವಂತಹ ಕಾರ್ಯ ಮಾಡುತ್ತಾ ಬಂದಿದೆ ಜನರೊಂದಿಗೆ ಹೊಂದಿದ್ದ ಪ್ರೀತಿ ಪ್ರೇಮ, ಇಡೀ ಬಳಗಾನೂರ ಗ್ರಾಮಸ್ಥರ ಸಮ್ಮುಖದಲ್ಲಿ ವೀರಯೋಧ ಸಿದ್ದಣ್ಣ ಮಾದರ ಅವರ ಮೂರ್ತಿ ನಿರ್ಮಾಣದ ಜೊತೆಗೆ ಅನಾವರಣಗೊಳಿಸುವಂತಹ ಅಭೂತಪೂರ್ವ ಕಾರ್ಯ ನಡೆದಿದೆ ಸೈನಿಕ, ಮತ್ತು ರೈತ ನಮ್ಮ ದೇಶದ ಬೆನ್ನೇಲು ಇದ್ದಂತೆ ರೈತ ಇಲ್ಲದಿದ್ದರೆ ಮಣ್ಣು ತಿನ್ನಬೇಕಾಗುತ್ತದೆ, ಸೈನಿಕನಿಲ್ಲದಿದ್ದರೆ ಮಣ್ಣು ಸೇರಬೆಕಾಗುತ್ತದೆ ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಂಡು ಮುಂದೇ ಸಾಗಿದಾಗ ಭವ್ಯ ಭಾರತ ನಿರ್ಮಾಣವಾಗಲು ಸಾದ್ಯವೆಂದರು.
ಸಾನಿದ್ಯ ವಹಿಸಿದ ಹಿರೂರ ಅನ್ನದಾನೇಶ್ವರ ಮಠದ ಶ್ರೀ ಗುರು ಜಯಸಿದ್ದೇಶ್ವರ ಮಹಾ ಸ್ವಾಮಿಗಳು ಮಾತನಾಡಿ ವೀರಯೋಧನನ್ನು ಕಳೆದುಕೊಂಡ ಕುಟುಂಬದ ತ್ಯಾಗವನ್ನು ಸ್ಮರಿಸಬೇಕಿದೆ ಕುಟುಂಬದ ಸದಸ್ಯರಿಗೆ ಗೌರವ ಸಲ್ಲಿಸುವ ಮೂಲಕ ಸಮಾಜವು ಅವರೊಂದಿಗೆ ನಿಂತಿರುವ ಸಂದೇಶವು ಮಾದರಿಯಾದಂತಾಗಿದೆ ವೀರ ಯೋಧ ಸಿದ್ದಣ್ಣ ಮಾದರ ನಿವೃತ್ತಿ ಜೀವನವನ್ನು ಬಯಸದೇ ದೇಶಕ್ಕಾಗಿ ಸೇವೆ ಸಲ್ಲಿಸುವ ಅವರಲ್ಲಿದ್ದ ದೇಶ ಭಕ್ತಿ ಎಂತಹದ್ದೆಂಬುದು ತೋರಿಸಿಕೊಟ್ಟಿದೆ ಸಿದ್ಧಣ್ಣ ಮಾದರ ಅವರ ದೇಶಸೇವೆಯ ನೆನಪು ಸದಾ ಉಳಿಯುವಂತೆ ಪ್ರತಿಮೆ ನಿರ್ಮಿಸಿ ಗ್ರಾಮಸ್ಥರೆಲ್ಲರೂ ಸೇರಿ ಅನಾವರಣಗೊಳಿಸುವ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ ಎಂದರು.
ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹಾಗೂ ನಿವೃತ್ತ ಶಿಕ್ಷಕ ಎಸ್.ಆಯ್.ಕಡಕೋಳ ಅವರು ವೀರಯೋಧ ಸಿದ್ದಣ್ಣ ಮಾದರ ಅವರ ಜೀವನ ಚರಿತ್ರೆ ಕುರಿತು ವಿವರಿಸಿದರು. ಬಳಗಾನೂರಿನ ಗ್ರಾಮಸ್ಥರು ಮತ್ತು ಮುಖಂಡರು ಶ್ರೀಗಳ ಸಮ್ಮುಖದಲ್ಲಿ ವೀರಯೋಧ ಸಿದ್ಧಣ್ಣ ಮಾದರ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.
ಇದೇ ಸಮಯದಲ್ಲಿ ವೀರಯೋಧ ಸಿದ್ಧಣ್ಣ ಮಾದರ ಅವರ ತಾಯಿ ಸಂಗವ್ವ ಮಾದರ ಹಾಗೂ ಧರ್ಮಪತ್ನಿ ಕವಿತಾ ಮಾದರ ಅವರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮತ್ತು ೧೦೦ಕ್ಕೂ ಹೆಚ್ಚು ಮಾಜಿ ಸೈನಿಕರಿಗೆ ಹಾಗೂ ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರಿಗೆ ವೀರಯೋಧ ಸಿದ್ದಣ್ಣ ಮಾದರ ಕುಟುಂಭದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವೇ.ಶಾಂತಯ್ಯ ಮಠ, ಶ್ರೀ ಶ್ರೀನಾಥಯ್ಯ ಹಿರೇಮಠ, ನಿಂಗನಗೌಡ ಪಾಟೀಲ, ಮಲ್ಲಣ್ಣ ದೋರನಳ್ಳಿ, ಚನ್ನಣ್ಣ ಅಲದಿ, ಸಂಗನಗೌಡ ಬಿರಾದಾರ, ಪ್ರಭುಗೌಡ ಪಾಟೀಲ, ಎಂ.ಎ.ಮುಲ್ಲಾ, ಸಾಹೇಬಗೌಡ ಬಿರಾದಾರ, ಪರಪ್ಪ ಅಂಬಿಗೇರ, ಮುಕ್ತುಮಸಾ ವಾಲಿಕಾರ, ರಮೇಶ ಫೀರಾಪೂರ, ಬಸನಗೌಡ ದೋರನಳ್ಳಿ, ಬಸವರಾಜ ತಳವಾರ, ಶಿವಣ್ಣ ಹಡಪದ, ಹಿರಗಪ್ಪ ಅರಳಿಕಟ್ಟಿ, ಎಸ್.ಆಯ್.ಕಡಕೋಳ, ಶಿವಣ್ಣ ಬಾಗೇವಾಡಿ, ಮೊದಲಾದವರು ಇದ್ದರು. ರಂಜಾನ್ ವಾಲೀಕಾರ ಸ್ವಾಗತಿಸಿದರು. ಶಿಕ್ಷಕಿ ಮಡಿವಾಳಮ್ಮ ನಾಡಗೌಡ ನಿರೂಪಿಸಿದರು. ಶಿವು ಹೊಸಮನಿ ವಂದಿಸಿದರು.