Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಜನಸ್ಪಂದನ ಅರ್ಜಿಗಳಿಗೆ ೨೧ ದಿನಗಳಲ್ಲಿ ಪರಿಹಾರ ಒಚಿಟಿಜಚಿಣoಡಿಥಿ: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ಸಾರ್ವಜನಿಕರಿಗೆ ಯಾವುದೆ ರೀತಿ ತೊಂದರೆಯಾಗಬಾರದು ಎಂಬ ಸದಾಶಯವನ್ನು ಇಟ್ಟುಕೊಂಡು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಜನರ ಮನೆ ಬಾಗಿಲಿಗೆ ಅಧಿಕಾರಿಗಳು ತೆರಳಿ  ಅವರ ಸಮಸ್ಯ ಇತ್ಯರ್ಥಗೊಳಿಸುವ ಉದ್ದೇಶವಾಗಿದೆ. ಆದ್ದರಿಂದ ಜನಸ್ಪಂದನ ಆಂದೋಲನದಲ್ಲಿ ಸಾರ್ವಜನಿಕರು ನೀಡಿದ ಅಹವಾಲುಳಿಗೆ ತ್ವರಿತವಾಗಿ ಸ್ಪಂದಿಸಿ ಸಮಸ್ಯಗಳಿಗೆ ಪರಿಹಾರ ಸೂಚಿಸಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದ್ದು ಕಂಡು ಬಂದಲ್ಲಿ ನಿರ್ದಾಕ್ಷೀಣವಾಗಿ ಕ್ರಮ ಜರುಗಿಸಲಾಗುವುದು  ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.  
ಅವರು ಶನಿವಾರರಂದು ತಾಲೂಕಿನ ಮೀರಗಿ ಗ್ರಾಮದಲ್ಲಿ  ತಾಲೂಕಾ ಆಡಳಿತ ಹಮ್ಮಿಕೊಂಡ ಹೊಬಳಿ ಮಟ್ಟದ ಪ್ರಜಾಸೇವೆ ಆಂದೊಲನದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾರ್ವಜನಿಕರಿಂದ ಅಹವಾಲಗಳನ್ನು ಸ್ವಿಕರಿಸಿ ಮಾತನಾಡಿದರು. 
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ನಾವಗಲಿ ಅಧಿಕಾರಿಗಳಾಗಲಿ ಜನರ ಸೇವೆ ಮಾಡಬೇಕಾಗಿದ್ದು ನಾಗರಿಕ ಸಮುದಾಯದ ನಮ್ಮ ಆಧ್ಯ ಕರ್ತವ್ಯವಾಗಿದೆ.  ಸಾರ್ವಜನಿಕರು ಕಛೇರಿಗಳಿಗೆ ಅಲೇದಾಡಬಾರದು ಎಂಬ ಸಕಾರದ ಪರಿಕಲ್ಪನೆಯಾಗಿದ್ದು ಬಂದ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಿ  ೨೧ ದಿನಗಳಲ್ಲಿ ಪರಿಹಾರ ಸೂಚಿಸಬೇಕು. ಯಾವುದೆ ಕಾರಣಕ್ಕೂ ವಿಳಂಬ ನೀತಿ ಅನುಸರಿಸಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ತಮ್ಮದೆಯಾದ ಮುಂದಾಲೋಚನೆ ಇಟ್ಟುಕೊಂಡು ಪ್ರಜಾಸೇವೆ ಮೂಲಕ ಆಡಳಿತವನ್ನು ಜನರ ಹತ್ತಿರಕ್ಕೆ ಕೊಂಡ್ಯೊಯುವ ಕಾರ್ಯ ಮಾಡಿದ್ದಾರೆ. ಇದರಿಂದ ಆ ಭಾಗದ ಜನರ ಸಮಸ್ಯಗಳು ಪರಿಹಾರವಾಗಬೇಕು. ಸಾರ್ವಜನಿಕರು ಕಛೇರಿಗಳಿಗೆ ಅಲೇದಾಡಬಾರದು ಎಂಬ ಪರಿಕಲ್ಪನೆಯಾಗಿದೆ ಎಂದರು.
  ಸಾರ್ವಜನಿಕರು ಇಲ್ಲಿ ಕೇಳುವ ಪ್ರಶ್ನೆಗಳನ್ನು ಸಮಂಜಸವಾಗಿರಬೇಕು. ಅಂತಹ ನೈಜ ಪ್ರಶ್ನೆಗಳಿಗೆ ಸ್ಥಳದಲ್ಲಿ ಸೂಕ್ತ ಉತ್ತರವನ್ನು ಪಡೆದು ಪರಿಹಾರ ಕಂಡುಕೊಳ್ಳಿ. ದಯವಿಟ್ಟು ಇಲ್ಲ ಸಲ್ಲದ ರಾಜಕಾರಣ ಬೆರೆಸುವಂತ ಅನಾವಶ್ಯಕವಾದ  ಪ್ರಶ್ನೆ ಮಾಡಬೇಡಿ. ಇದು ಪ್ರಜಾಪ್ರಭುತ್ವದ ಪ್ರತಿಯೊಬ್ಬರ ಹಕ್ಕಾಗಿದೆ. ರಾಜಕಾರಣ ಬಂದಾಗ ಮಾತ್ರ ಒಂದು ತಿಂಗಳ ರಾಜಕಾರಣ ಮಾಡೋಣ. ಉಳಿದ ದಿನಗಳಲ್ಲಿ ಏನಿದ್ದರು ಅಭಿವೃದ್ದಿಯ ಮಂತ್ರ ಜಪಿಸೋಣ. 
ಸಾರ್ವಜನಿಕರು ನೀಡಿದ ಕಂದಾಯ ಇಲಾಖೆ, ರಸ್ತೆ, ನೀರಾವರಿ, ಪಿಂಚಣಿ ಸೇರಿದಂತೆ ತಮ್ಮ ವ್ಯಯಕ್ತಿಕ ಅಹವಾಲಗಳ ಅರ್ಜಿಗಳಿಗೆ ಅಧಿಕಾರಿಗಳಿಂದ ಶಾಸಕರು ಉತ್ತರ ಪಡೆದು ಪರಿಹಾರವನ್ನು ಸೂಚಿಸಿದರು. 
ಜನಸ್ಪಂದನ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಗ್ರಾಮಗಳ ಸಾರ್ವಜನಿಕರಿಂದ ಬಂದ ಕೇಲವು ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರವನ್ನು ಸೂಚಿಸಿದರು.  ಇನ್ನೂ ಅಧಿಕಾರಿಗಳಿಂದ ಉತ್ತರವನ್ನು ಪಡೆದು ತ್ವರಿತವಾಗಿ ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೇದಿಕೆ ಮೇಲೆ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭಿಮಣ್ಣ ಕವಲಗಿ, ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಡಿವೈಎಸ್‌ಪಿ ಸದಾಶಿವ ಕಟ್ಟಿಮನಿ, ತಾಪಂ ಇಓ ಮಹಾದೇವಪ್ಪ ಏವೂರ, ತಹಸಿಲ್ದಾರ ನಾಗೇಂದ್ರ ಕೋಳಶೆಟ್ಟಿ, ತಾಲೂಕಾ ಗ್ಯಾರೆಂಟಿ ಸಮೀತಿ ಅಧ್ಯಕ್ಷ ಪ್ರಶಾಂತ ಕಾಳೆ, ಶಿವಯೋಗೆಪ್ಪ ಚನ್ನಗೊಂಡ, ಬಿ.ಸಿ.ಸಾವಕಾರ, ರಮೇಶ ಕಲ್ಯಾಣಿ, ಬರಡೋಲ, ಅಲಗೊಂಡ, ಶಾಬಾದಿ ಸೇರಿದಂತೆ ತಾಲೂಕಾ ಮಟ್ಟದ ವಿವಿಧ ಇಲಾಖೇಗಳ ಅಧಿಕಾರಿಗಳು ಇದ್ದರು.
   
   

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ