ಮೂಡಲಗಿ : ಪಟ್ಟಣದ ಪುರಾತನ ದೇವಾಲಯಗಳಲ್ಲಿ ಒಂದಾದ ವಿದ್ಯಾನಗರದ ಶ್ರೀ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನ ೨೧ ವ?ಗಳ ಬಳಿಕ ಪುನರಾರಂಭವಾದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಳಸಾರೋಹಣ ಕಾರ್ಯಕ್ರಮ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ರವಿವಾರದಂದು ಬೆಳಗ್ಗೆ ೬ ಗಂಟೆಗೆ ಆಂಜನೇಯ ಸ್ವಾಮಿಗೆ ಅಭಿ?ಕ ಹಾಗೂ ವಿಶೇ? ಪೂಜೆ ಮಾಡುವುದರೊಂದಿಗೆ ಆರಂಭವಾದ ಕಾರ್ಯಕ್ರಮ, ೧೦ ಗಂಟೆಗೆ ದೇವಸ್ಥಾನದ ಕಳಶವನ್ನು ಕುಂಭ ಮೇಳ ಹಾಗೂ ವಾದ್ಯಗಳೊಂದಿಗೆ ಶ್ರೀ ಶಿವಬೋಧರಂಗ ಮಠದಿಂದ ಮೆರವಣಿಗೆಯಲ್ಲಿ ಸಾಗುತ್ತ ವಿದ್ಯಾನಗರದ ಹನುಮ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ೧೨ ಗಂಟೆಗೆ ವಿಧಿ-ವಿಧಾನಗಳೊಂದಿಗೆ ಕಳಸಾರೋಹಣ ಹಾಗೂ ಪೂಜಾ ಕಾರ್ಯಕ್ರಮ ಸಾಗಿ ಮಧ್ಯಾನ್ಹ ೧ ಗಂಟೆಗೆ ಅನ್ನಪ್ರಸಾದ ಜರುಗಿತು.
ಕಾರ್ಯಕ್ರಮದಲ್ಲಿ ಹನುಮಾನ್ ದೇವಸ್ಥಾನ ಪುನರಾರಂಭಕ್ಕೆ ಪ್ರಮುಖ ಕಾರಣರಾದ ಚಿದಾನಂದ ಶೆಟ್ಟರ್ ರವರು ಮಾತನಾಡಿ, ಪಟ್ಟಣದಲ್ಲೇ ಪುರಾತನ ದೇವಾಲಯವಾದ ಶ್ರೀ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನ ೨೧ ವ?ಗಳ ಬಳಿಕ ಪುನರಾರಂಭವಾಗಿದ್ದು ಎಲ್ಲರಿಗೂ ಸಂತಸ ತಂದಿದೆ. ನಾವೆಲ್ಲ ಭಕ್ತರು ಹನುಮನ ಸಾಕ್ಷಿಯಾಗಿ ಕಾಯಾ ವಾಚಾ ಮನಸಾ ದೇವಸ್ಥಾನದ ಅಭ್ಯುದಯಕ್ಕೆ ದುಡಿದು ಹನುಮನ ಕೃಪೆಗೆ ಪಾತ್ರರಾಗೋಣ ಎಂದು ಹೇಳಿ ದೇವಸ್ಥಾನದ ಪುನರಾರಂಭಕ್ಕೆ ಶ್ರಮಿಸಿದ ಸಮಸ್ತರಿಗೂ ಧನ್ಯವಾದಗಳನ್ನು ತಿಳಿಸಿದರು.
ಸಾಯಂಕಾಲ ೭ ಗಂಟೆಗೆ ಪಟ್ಟಣದ ನವರಾತ್ರಿ ಸಮೀತಿಯಿಂದ ಹಮ್ಮಿಕೊಳ್ಳಗಿದ್ದ ದುರ್ಗಾ ದೌಡ ನಿಮಿತ್ಯ ಹನುಮ ದೇವಸ್ಥಾನಕ್ಕೆ ಆಗಮಿಸಿದ ದುರ್ಗಾಮಾತೆಯ ಭವ್ಯ ಮೂರ್ತಿಗೆ ಸುಮಂಗಲೆಯರಿಂದ ಆರತಿ ಮಾಡಿ ಬೀಳ್ಕೊಡಲಾಯಿತು. ನಂತರ ಘಟಸ್ಥಾಪನಾ ಕಾರ್ಯಕ್ರಮ ಜರುಗಿ, ವಿಶ್ವ ಹಿಂದೂ ಪರಿ?ತ್ ಬಜರಂಗದಳ ಮೂಡಲಗಿ ನಗರ ವತಿಯಿಂದ ಶ್ರೀರಾಮ ಹಾಗೂ ಹನುಮನ ಸ್ತುತಿಗಳನ್ನು ಹಾಡುವುದರೊಂದಿಗೆ ಸತ್ಸಂಗ ಮಾಡಲಾಯಿತು.
ಈ ಸಂದರ್ಭದಲ್ಲಿ ತುಕಾರಾಮ ಗಸ್ತಿ, ಆನಂದ ಪತ್ತಾರ್, ಸದಾಶಿವ ನಿಂಗನೂರ, ಬಸವರಾಜ ಮುತ್ನಾಳ, ಮಲ್ಲಪ್ಪ ಸಾವಡಕರ, ಶಿವಬಸು ಗಾಡವಿ, ಲಿಂಗೇಶ ಪವಾಡಶೆಟ್ಟಿ, ಈರಯ್ಯ ಹಿರೇಮಠ, ಪ್ರಶಾಂತ ಕೋಟಗಿ, ದಾನೇಶ ಕಲ್ಯಾಣಶೆಟ್ಟಿ, ಸಾಗರ ಸತ್ತಿಗೇರಿ, ಶ್ರೀಧರ ಬಡಿಗೇರ, ಶಂಕರ ಮನ್ಯಾಳ, ವಿಶಾಲ ಮುತ್ತೂರ, ಸಂತೋ? ಇಂಗಳೆ, ಶಿವು ಡೋಣಿ, ಸೋಮು ಹಿರೇಮಠ, ಕಲ್ಮೇಶ ಅವಟಿ ಸೇರಿದಂತೆ ಸ್ಥಳೀಯ ಮುಖಂಡರು, ವಿದ್ಯಾನಗರದ ಹಿರಿಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.