ಇಂಡಿ: ಕಾರವಾರ ಜಿಲ್ಲೆಯ ಕುಮಟಾದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ವತಿಯಿಂದ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ೧೭ರ ವಯೋಮಿತಿಯ ಬಾಲಕಿಯರ ವಾಲಿಬಾಲ್ ಪಂದ್ಯದಲ್ಲಿ ಲಚ್ಯಾಣ ಗ್ರಾಮದ ಸರಕಾರಿ ಪ್ರೌಢಶಾಲೆಯ ಬಾಲಕಿಯರು ಭಾಗವಹಿಸಿ ತೃತೀಯ ಸ್ಥಾನ ಗಳಿಸಿದ್ದಾರೆ.
ಶಾಲೆಯ ವಿದ್ಯಾರ್ಥಿನಿಯರಾದ ಸಾನಿಕಾ ಪವಾರ್, ನೇತ್ರಾ ಬಾಬಳಗಾವ್, ಕಾವೇರಿ ರೂಗಿ, ಲಷ್ಮಿ ಚೌಗಲೆ, ರಕ್ಮಾಬಾಯಿ ಕರಾಳೆ ಭಾಗವಹಿಸಿ ಸಾಧನೆಗೌದಿದ್ದಾರೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯ ಬಿ.ಎಲ್. ಪಾಟೀಲ್, ಶಾಲೆಯ ದೈಹಿಕ ಶಿಕ್ಷಕ ಎಂ.ಎಸ್. ಪಾಟೀಲ್, ಶಾಲೆಯ ಎಸ್.ಡಿ. ಎಂ.ಸಿ ಅಧ್ಯಕ್ಷ ಈರಣ್ಣ ಕಾರಕಲ್ ಸೇರಿದಂತೆ ಹಲವು ಗಣ್ಯರು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.