ಬಳ್ಳಾರಿ.01: : ನಗರದ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿ, ಪಾಸ್ತಿಗಳು ಬೆರೋಬ್ಬರ ಹೆಸರಿಗೆ ವರ್ಗಾವಣೆ ಆಗುತ್ತಿವೆ. ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿನಲ್ಲಿ ಮಾಡಿಕೊಂಡವರ ಜೊತೆಗೆ ಶ್ಯಾಮಿಲಾದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ
ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ಅವರು, ಬಳ್ಳಾರಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅಕ್ರಮ ದಂಧೆಗಳು ನಡೆಯುತ್ತಿವೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇರೊಬ್ಬರ ಜಮೀನುಗಳನ್ನು ಬೇಕಿದ್ದವರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿ ಬುಡ ಅಧ್ಯಕ್ಷ ಆoಜುನೆಯಲು ಅವರ ನೆತೃತ್ವದಲ್ಲಿ ಕಚೇರಿಗೆ ಮುತ್ತಿಗೆ ಹಾಕಿದ್ದರು. ಅವರ ಆರೋಪದ ಪ್ರಕಾರಣಕ್ಕೆ ಸಂಬಂಧಿಸಿ ಅಧಿಕಾರಿಗಳು ದೂರು ನೀಡಿದ್ದಾರೆ. ಆದರೆ, ಇದಕ್ಕೆ ಶ್ಯಾಮಿಲಾದ ಎಲ್ಲ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮವಹಿಸಲಿಲ್ಲ, ಇದು ನಾನಾ ಅನುಮಾನ ಮೂಡಿಸಿದೆ. ಕೂಡಲೇ ಜಿಲ್ಲಾಧಿಕಾರಿಗಳು ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬಳ್ಳಾರಿಯಲ್ಲಿ ಎಲ್ಲ ಕಚೇರಿಗಳಲ್ಲೂ ಭ್ರಷ್ಟಾಚಾರ ತಾಂಡಾಡುತ್ತಿದೆ, ಲೋಕೋಪಯೋಗಿ ಇಲಾಖೆ, ಆರ್ ಟಿಓ, ಕಂದಾಯ ಇಲಾಖೆ, ಸರ್ವೇ ಇಲಾಖೆ, ಅಬಕಾರಿ, ಪಾಲಿಕೆಯಲ್ಲೂ ಭ್ರಷ್ಟಚಾರ ಮಿತಿ ಮೀರಿದೆ. ಲಂಚದವತಾರಕ್ಕೆ ರಾಜ್ಯದಲ್ಲೇ ಬಳ್ಳಾರಿ ಹೆಸರು ವಾಸಿಯಾಗುತ್ತಿದೆ. ಚುನಾಯಿತ ಜನ ಪ್ರತಿನಿದಿನಗಳು ಪಾಲಿನ ಹಣ ಪಡೆದು ತೆಪ್ಪಗೆ ಕುಳಿತರೆ ಸಾಲದು, ಬಳ್ಳಾರಿಯ ಅಭಿವೃದ್ಧಿಗೆ ಶ್ರಮಿಬೇಕು. ಜಿಲ್ಲೆಗೆ ಇಲ್ಲಿವರೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೆಮಕವಾಗಿಲ್ಲ, ಇದು ಬಹು ದೊಡ್ಡ ದುರಂತ, ಜಿಲ್ಲೆಗೆ ಅಪ್ಪ, ಅಮ್ಮ, ತಂದೆಯೂ ಇಲ್ಲದಂತಾಗಿದೆ. ಈ ರೀತಿ ಆದರೆ ನಮ್ಮ ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಹಿನ್ನೆಡೆಯಗಲಿದೆ. ಕೂಡಲೇ ಜಿಲ್ಲಾ ಉಸ್ರುವಾರಿ ಸಚಿವರ ನೇಮಕಾವಾಗಬೇಕು, ಕಛೇಗಳಲ್ಲಿನ ಭ್ರಷ್ಟಾಚಾರ ನಿಲ್ಲಬೇಕು, ನಿರ್ಲಕ್ಷ ವಹಿಸಿದ ಸಬ್ ರಿಜಿಸ್ಟರ್ ಕಚೇರಿ ಅಧಿಕಾರಿಗಳನ್ನು ಬಂಧಿಸಿ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು, ನಿರ್ಲಕ್ಷ ವಹಿಸಿದರೆ ಜೆಡಿಎಸ್ ವತಿಯಿಂದ ಕೆಲವೇ ದಿನಗಳಲ್ಲಿ ಸಬ್ ರಿಜಿಸ್ಟರ್ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿದ್ದಾರೆ.