ಯರಗಟ್ಟಿ: ಸಮೀಪದ ಯರಗಣವಿ ಗ್ರಾಮದ ರೈತ ಮಹಾದೇವ ಕಲ್ಲಪ್ಪ ಮಗದುಮ ಅವರಿಗೆ ಸೇರಿದ ಸರ್ವೇ ನಂ. ೫೦೪/೧೧, ಕ್ಷೇತ್ರ ೨ ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬೆಂಕಿ ತಗುಲಿ, ಸಂಪೂರ್ಣ ಕಬ್ಬು ಬೆಳೆ ಸುಟ್ಟುಹೋಗಿದೆ.
ಘಟನೆಯಿಂದ ರೈತರಿಗೆ ಭಾರಿ ಪ್ರಮಾಣದ ಬೆಳೆ ನಷ್ಟ ಉಂಟಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಷ್ಟದ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.