ಬಳ್ಳಾರಿ. ಅ. 07:: ಇತ್ತೀಚೆಗೆ ಬೀದರ್ ನಲ್ಲಿ ನಡೆದ ವಿಭಾಗ ಮಟ್ಟದ ಟೇಬಲ್ ಟೆನ್ನಿಸ್ ನ ಡಬಲ್ ಹಾಗೂ ಸಿಂಗಲ್ಸ್ ನಲ್ಲಿ ಜಯಗಳಿಸುವ ಮೂಲಕ ದಸರಾ ಕ್ರೀಡಾಕೂಟಕ್ಕೆ ಬಳ್ಳಾರಿಯ ಪ್ರತಿಭೆ ಟೇಬಲ್ ಟೆನಿಸ್ ಕ್ರೀಡಾಪಟು ಚೈತ್ರಾ ಶ್ರೀ (ಚುಕ್ಕಿ ) ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಗಮನಹ ಸಾಧನೆ ತೋರಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ ಈ ಮೂಲಕ ಅಕ್ಟೋಬರ್ 11ರಿಂದ 14ರವರೆಗೆ ನಡೆಯುವ ದಸರಾ ಕ್ರೀಡಾಕೂಟಕ್ಕೆ ನೇರವಾಗಿ ಆಯ್ಕೆಯಾಗಿದ್ದಾರೆ ಎಂದು ಟೇಬಲ್ ಟೆನ್ನಿಸ್ ತರಬೇತುದಾರ ಶಿವಾನಂದ ಕಥೆ ಹಳ್ಳಿ ತಿಳಿಸಿದ್ದಾರೆ.
ಬಾಲಕಿ ಚೈತ್ರ ಶ್ರೀ ಅವರು ಬೀದರ್ನಲ್ಲಿ ತೋರಿದ ಸಾಧನೆಗೆ ಅವರ ಶಾಲೆಯ ಶಿಕ್ಷಕರು ಸಹಪಾಠಿಗಳು ಬಂದು ಬಳಗದವರು ಹಿತೈಷಿಗಳು ಅಭಿನಂದನೆಗಳನ್ನು ಸಲ್ಲಿಸಿ, ದಸರಾ ಕ್ರೀಡಾಕೂಟದಲ್ಲಿಯೂ ಸಹ ಟೇಬಲ್ ಟೆನ್ನಿಸ್ ನಲ್ಲಿ ಪ್ರಥಮ ಸ್ಥಾನ ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.