ಬೆಳಗಾವಿ. ತಾಲೂಕಿನ ಸರಕಾರಿ ಪ್ರೌಢಶಾಲೆ ಕರಡಿ ಗುದ್ದಿಯಲ್ಲಿ ದಿನಾಂಕ : 24/09/2026 ರಂದು 2025-26 ನೇ ಸಾಲಿನ 9 ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಂದರೆ 2026-27 ನೇ ಸಾಲಿನ ಹತ್ತನೇ ತರಗತಿಯ ವಿಧಾರ್ಥಿಗಳಿಗೆ ವೇಣುಗ್ರಾಮ ಫೌಂಡೇಶನ್, ಬೆಳಗಾವಿ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವೇಣುಗ್ರಾಮ ಫೌಂಡೇಶನ್, ಬೆಳಗಾವಿಯ ಡಾ. ಪ್ರವೀಣ್ ಖೋತ್ ಅವರು ಟಾಪ ಟೆನ್ ವಿದ್ಯಾರ್ಥಿಗಳು ಶಾಲೆಗೆ ಭರಿಸಬೇಕಾದ ಫೀ ಹಣದ ಚೆಕ್ಕನ್ನು ಪ್ರಭಾರಿ ಮುಖ್ಯಶಿಕ್ಷಕರಾದ ಶ್ರೀ. ಮಹಾಂತೇಶ ಬ ಬಾಳಿಗಟ್ಟಿ ಅವರಿಗೆ ವಿತರಿಸಿದರು. ಶಾಲೆಯ ವತಿಯಿಂದ ವೇಣುಗ್ರಾಮ ಫೌಂಡೇಶನ್, ಬೆಳಗಾವಿ ಅವರಿಗೆ ಅನಂತ ಧನ್ಯವಾದಗಳು.