ತಾಳಿಕೋಟೆ,ಅ,೧೨: ಪಟ್ಟಣದಲ್ಲಿ ಸೋಮವಾರರಂದು ನವರಾತ್ರೋತ್ಸವ ಅಂಗವಾಗಿ ಹಿಂದೂ ಧಾರ್ಮಿಕ ಪದ್ದತಿಯಂತೆ ದುರ್ಗಾಮಾತಾ ದೌಡ ಕಾರ್ಯಕ್ರಮವು ಶ್ರದ್ದಾ ಭಕ್ತಿಭಾವದೊಂದಿಗೆ ಜರುಗಿತು.
ಪಟ್ಟಣದಲ್ಲಿಯ ಹಿಂದೂ ಭಾಂಧವರೊಂದಿಗೆ ಈ ಕಾರ್ಯಕ್ರಮವು ರಾಜವಾಡೆಯ ಶ್ರೀ ಶಿವಭವಾನಿ ಮಂದಿರದಿಂದ ಭಗವಾ ದ್ವಜಾರೋಹಣಗೈಯುವದರೊಂದಿಗೆ ಸುಮಂಗಲೆಯರಿಂದ ಶ್ರೀದೇವಿಗೆ ಮಹಾ ಆರತಿ ಬೆಳಗುವದರೊಂದಿಗೆ ಪ್ರಾರಂಭಗೊಂಡ ದುರ್ಗಾಮಾತಾ ದೌಡ ಪಥಸಂಚಲನವು ಕಾಮನಕಟ್ಟೆ ಬಢಾವಣೆಯ ಶ್ರೀ ದುರ್ಗಾಮಾತೆಗೆ ಹಾಗೂ ರಜಪೂತ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾದ ದುರ್ಗಾಮಾತೆಗೆ ಆರತಿ ಬೆಳಗುವ ಮೂಲಕ ಭಾವಸಾರ ಕ್ಷತ್ರೀಯ ಸಮಾಜದ ಶ್ರೀ ಅಂಬಾಭವಾನಿ ಮಂದಿರದಲ್ಲಿಯ ಶ್ರೀ ಭವಾನಿಗೆ ಮಹಾಪೂಜೆಗೈಯುವ ಮೂಲಕ ಮುನ್ನಡೆದಂತಹ ಈ ಪಥಸಂಚಲನವು ಶ್ರೀ ವಿಠ್ಠಲ ಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ದುರ್ಗಾದೇವಿಗೆ ಸುಮಂಗಲೆಯರು ಆರತಿ ಬೆಳಗುವದರೊಂದಿಗೆ ಭಕ್ತಿಭಾವ ಮೆರೆದರು.
ದುರ್ಗಾಮಾತಾ ದೌಡಪಥಸಂಚಲನದಲ್ಲಿ ಪಾಲ್ಗೊಂಡ ಮುದ್ದೇಬಿಹಾಳ ಹಾಗೂ ತಾಳಿಕೋಟೆಯ ಸುಮಂಗಲೆಯರು ಹಾಗೂ ಪುರುಷರು ಮೊಳಗಿಸಿದ ಜಯಘೋಷಣೆಗಳಲ್ಲಿ ಜೈ ಭವಾನಿ, ಜೈಭವಾನಿ, ಭಾರತಮಾತಾಕೀ ಜೈ ಎಂಬ ಘೋಷಣೆಗಳು ಸ್ಪೂರ್ತಿ ತುಂಬಿತ್ತು. ಈ ಪಥಸಂಚಲನವನ್ನು ವೀಕ್ಷಿಸಲು ಜನತೆ ತಂಡೋಪತಂಡವಾಗಿ ಪಥಸಂಚಲನದ ಮಾರ್ಗದಲ್ಲಿ ಎಡಬಲ ನಿಂತು ವೀಕ್ಷಿಸಿದಲ್ಲದೇ ಸಚಲನದಲ್ಲಿ ಪಾಲ್ಗೊಂಡಂತಹ ಭಕ್ತರ ಮೇಲೆ ಹೂವಿನ ಸುರಿಮಳೆಗೈದರು.
ಹಿಂದೂ ಧರ್ಮದಲ್ಲಿ ಪಾರ್ವತಿದೇವಿ ಆದಿಶಕ್ತಿಯ ಮುಖ್ಯರೂಪಗಳಲ್ಲಿ ಒಂದಾದ ಶ್ರೀ ದುರ್ಗಾದೇವಿಯನ್ನು ಸೂಚಿಸುತ್ತದೆ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವಂತಹ ಪರಮ ಶಕ್ತಿಯ ಸಂಕೇತವೇ ದುರ್ಗಾಮಾತೆಯಾಗಿದ್ದು ೯ ಶಕ್ತಿಯುತ ಶಕ್ತಿದೇವತೆಗಳಲ್ಲಿ ದುರ್ಗಾದೇವಿ ಪ್ರಮುಖವಾಗಿದ್ದು ಧರ್ಮ ಮತ್ತು ಶಕ್ತಿಯ ಸಂಕೇತವಾದ ಕೈಯಲ್ಲಿ ತ್ರಿಶೂಲ ಹಿಡಿದು ಹುಲಿಯನ್ನೇರಿ ಬರುವಂತ ದುರ್ಗಾದೇವಿಯ ೮ ಕೈಗಳನ್ನು ಹೊಂದಿದ್ದ ಒಂದೊಂದು ಕೈಗಳಲ್ಲಿ ವಿಬಿನ್ನ ಆಯುಧಗಳನ್ನು ಹೊಂದಿದಂತಹ ಪಟ್ಟಣದಲ್ಲಿ ಪ್ರತಿಷ್ಠಾಪಿಸಲಾದ ಮೂರ್ತಿಗಳ ಮುಂದೆ ೯ ದಿನಗಳವರೆಗೆ ವಿವಿಧ ಮನರಂಜಾ ಕಾರ್ಯಕ್ರಮಗಳು ಸೇರಿದಂತೆ ವಿಶೇಷ ಪೂಜೆ ಅಭಿಷೇಕ, ನೈವೇದ್ಯ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.