Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bellary

ಭಾಷೆಗೆ ಲಿಫಿಯನ್ನು ಕೊಟ್ಟಿರುವದೇ ಕಲಾವಿದರು - ವಾಜಿದ್ ಸಾಜೀದ್

ಸಿಂಧನೂರು: 29:.ಕಲೆಯಿಲ್ಲದೆ ಜೀವನವೇ ಇಲ್ಲ. ಯಾವುದೇ ಭಾಷೆಗೆ ಲಿಫಿಯನ್ನು ಕೊಟ್ಟಿರುವದೇ ಕಲಾವಿದರು. ಕಲಾವಿದರ ಪ್ರತಿಭೆ ಮತ್ತು ಅವರ ವಿಭಿನ್ನ ಆಲೋಚನೆಗಳನ್ನು ಕಲಾ ಪ್ರೇಮಿಗಳಿಗೆ ಪರಿಚಯಿಸುವುದು ಪ್ರದರ್ಶನದ ಉದ್ದೇಶವಾಗಿದೆ ಎಂದು  ಅಂತಾರಾಷ್ಟ್ರೀಯ ಕಲಾವಿದರು ಮತ್ತು ನಿಕಟಪೂರ್ವ ಸದಸ್ಯರಾದ ವಾಜಿದ್ ಸಾಜೀದ್ ಹೇಳಿದರು. ನಗರದ ಸರ್ವೋದಯ ಶಾಲೆಯ ಹತ್ತಿರದ ವಿರಿಂಜಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯದೊಂದಿಗೆ ಯುವ ಕಲಾವಿದ ಮಲ್ಲಿಕಾರ್ಜುನ ಕುಂಬಾರ ಇವರ 'ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಚಿತ್ರಕಲೆ ತನ್ನದೇ ಆದ ವಿಶಿಷ್ಟವಾದ ಕೊಡುಗೆ ನೀಡುತ್ತಾ ಬಂದಿದೆ. ನೈಜ ಕಲೆ ಎಲ್ಲರಿಗೂ ತಳಹದಿಯಾಗಿದೆ. ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಚಿತ್ರಿಸಬೇಕು. ಜನರ ಮನಸ್ಸು ಸೆಳೆಯುವ ಕೆಲಸ ಮಾಡಬೇಕು. ಹೆಚ್ಚೆಚ್ಚು ಜನರು ತನ್ನ ಕಲಾಕೃತಿಗಳನ್ನು ವೀಕ್ಷಿಸಬೇಕು ಎಂಬುದು ಎಲ್ಲ ಕಲಾವಿದರ ಆಸೆಯಾಗಿರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶರಣಬಸವ ತಾವರಗೇರಾ ಮಾತನಾಡಿ, ಕಲಾವಿದರು ಒಗ್ಗಟ್ಟಾಗಿರಬೇಕು. ಎಲ್ಲಾ ಕಲಾವಿದರನ್ನು ಗುರುತಿಸಿ ಹೊರಗೆ ತರುವ ಕೆಲಸ ಮಾಡೋಣ. ತಾಲೂಕು ಜಿಲ್ಲಾ ಮತ್ತು ರಾಜ್ಯ ಮಟ್ಟದ ಚಿತ್ರಕಲಾ ಕಲಾವಿದರ ಸಮಾವೇಶ ಮಾಡೋಣ ಎಂದರು. ಶಿವಾನಂದ ಸಾತಿಹಾಳ ಮಾತನಾಡಿ, ಕಲೆಯನ್ನು ಅನುಭವಿಸಿ ಅಧ್ಯಯನ ಮಾಡಬೇಕು. ಹೊಗುಳುವವರು ತೆಗುಳುವವರು ಇದ್ದೇ ಇರುತ್ತಾರೆ ಅದನ್ನು ತಲೆ ಕೆಡಿಸಿಕೊಳ್ಳುವುದಿಲ್ಲ. ಮಲ್ಲಿಕಾರ್ಜುನ ಕಂಬಾರ ಅವರ ಈ ಆರ್ಟ್ ಗ್ಯಾಲರಿಯಲ್ಲಿ 11ನೇ ಚಿತ್ರಕಲಾ ಪ್ರದರ್ಶನ ಇದಾಗಿದೆ. ಕಲೆ ಬಿಟ್ಟು ಬದುಕಲು ಸಾಧ್ಯವಿಲ್ಲ. ಮಲ್ಲಿಕಾರ್ಜುನ ಅವರಿಗೆ ನಮ್ನ ಸಿಂಧನೂರಿನ ಚಿತ್ರಕಲಾವಿದ ಮಹ್ಮದ್ ಉಸ್ಮಾನ ಅಲಿ ರವರು ಪ್ರೋತ್ಸಾಹ ಮತ್ತು ಸಹಕಾರ ನೀಡಿದಕ್ಕೆ ಅವರ ಪರವಾಗಿ ಧನ್ಯವಾದ ತಿಳಿಸಿದರು ಹಾಗೆ ಬೇರೆ ಬೇರೆ ಕಡೆಯಿಂದ ಬರುವಂತಹ ಕಲಾವಿದರಿಗೆ ಇದೆ ರೀತಿ ಸಹಕಾರ ನೀಡಿ ಮತ್ತು ನಿರಂತರ ಪ್ರಯತ್ನ ಮಾಡಿ ಸಂಸ್ಥೆಯನ್ನು ಕಟ್ಟೋಣ ಎಂದು ತಿಳಿಸಿದರು. ಅರುಣ್ ಭೂಪಾಲ್ ಮಾತನಾಡಿ, ಚಿತ್ರಕಲೆಯಿಂದಲೇ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಆದು ಗೊತ್ತಿದ್ದರೂ ಕಲಾವಿದರು ಅದರಲ್ಲಿಯೇ ತೊಡಗಿಸಿಕೊಂಡು ಹೋಗುತ್ತಿದ್ದಾರೆ ಅಂದರೆ ಚಿತ್ರಕಲೆ ಉಳಿಸಬೇಕು ಎಂಬ ಉದ್ದೇಶದಿಂದ ಸಿಂಧನೂರಿನ ಚಿತ್ರಕಲಾವಿದರು ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು. ಆರ್ .ಎಲ್. ಜಾದವ್, ಹಿರಿಯ ಕಲಾವಿದರು ಮತ್ತು ಸಂಸ್ಥಾಪಕರು ಭವಾನಿ ಲಲಿತಕಲಾ ಮಹಾವಿದ್ಯಾಲಯ ಬಳ್ಳಾರಿ ಇವರು ಮಾತನಾಡಿ ಮಲ್ಲಿಕಾರ್ಜುನ ಕುಂಬಾರ ಅವರ ಕಲಾಕೃತಿಯನ್ನು ಹಲವು ಅರ್ಥಗಳಲ್ಲಿ ತಿಳಿಸುತ್ತವೆ. ಕಲಾವಿದನಾಗಿ ಕಠಿಣ ಪರಿಶ್ರಮದಿಂದಾಗಿ ಕಲೆಯನ್ನು ಅಧ್ಯಯನ ಮಾಡಿ ಅತ್ಯುತ್ತಮ ಚಿತ್ರಗಳಿಗೆ ಆಕಾರ ನೀಡಿ ಕಲಾಕೃತಿಯನ್ನು ರಚಿಸಲು ಪ್ರಯತ್ನ ಮಾಡಿದ್ದಾರೆ. ಜೀವನ ಪರ್ಯಂತ ಕಲೆಗಳನ್ನು ರಚಿಸಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಕೇಂದ್ರ ಬಿಂದು ಯುವ ಕಲಾವಿದ ಮಲ್ಲಿಕಾರ್ಜುನ ಕುಂಬಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚಿತ್ರಕಲೆಗೆ ಬೆಲೆಕೊಟ್ಟು ಅದನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡು ಹೋಗಬೇಕು. ನನ್ನ ಈ ಒಂದು  ಕಾರ್ಯಕ್ರಮವನ್ನು  ಯಶಸ್ವಿಯಾಗಿ ಸಹಕಾರ ನೀಡಿದ ಎಲ್ಲಾರಿಗೂ ಧನ್ಯವಾದಗಳು ಎಂದು ತಿಳಿಸಿದರು. ಪತ್ರಕರ್ತರಾದ ಚಿದಾನಂದ ದೊರೆ, ಹಾಗೂ ಉಮೇಶ ಪತ್ತಾರ್ ಕಾರ್ಯಕ್ರಮವನ್ನು  ನಿರೂಪಿಸಿದರು. ಕಲಾವಿದರದ ಮಹ್ಮದ್ ಉಸ್ಮಾನ ಅಲಿ, ಶ್ರೀ ನಿವಾಸ, ದೇವರಾಜ, ರಮೇಶ ಆರ್ಟ್ಸ್, ರಾಜಸಾಬ್  ರಾಮೇಶಪ್ಪ, ರವಿ, ಮೌಲಾಲಿ , ಅಮೃತ್ ಬದಿ,  ಸೇರಿದಂತೆ ಇನ್ನಿತರರು ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ