ಚ. ಕಿತ್ತೂರು.ಭಾರತ ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ವೀರ ರಾಣಿ ಚನ್ನಮ್ಮಾಜಿಯ 202 ನೇ ವಿಜಯ ಉತ್ಸವ ಕಿತ್ತೂರು ಚನ್ನಮ್ಮ ಉತ್ಸವ 2026 ಕಾರ್ಯಕ್ರಮವು ಚನ್ನಮ್ಮನ ವೃತ್ತದಲ್ಲಿ ಭವ್ಯ ವಾದ್ಯ, ಮೇಳ, ತಾಳ, ವಿವಿಧ ಕಲಾಕೃತಿ, ಭಾವ ವೇಷ,ಗೊಂಬೆ ಕುಣಿತ, ಅನೇಕ ರೂಪಕಗಳ ವಿಜೃಂಭಣೆಯ ಸಂಗೀತದ ಉತ್ಸಾಹದ ಕಹಳೆಯಲ್ಲಿ ಪರಶಿವ ಕಲಾವಿಧರ ನೃತ್ಯದೊಂದಿಗೆ ಆದ್ದೂರಿಯಾಗಿ ಆರಂಭಗೊಂಡಿತು.
ಕಿತ್ತೂರು ರಾಣಿ ಭವ್ಯ ಜ್ಯೋತಿಯು ಕಿತ್ತೂರು ಚನ್ನಮ್ಮ ಸೈನಿಕ ಶಾಲೆಯಿಂದ ಆಗಮಿಸಿದಾಗ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಜಿಲ್ಲಾ ಪೊಲೀಸ್ ಎಸ್ ಪಿ ಕೆ ರಾಮರಾಜನ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಎ ಸಿ ಪ್ರವೀಣ್ ಜೈನ, ಕಿತ್ತೂರು ತಹಶೀಲ್ದಾರ ಕಲಗೌಡ ಪಾಟೀಲ, ಬೈಲಹೊಂಗಲ ತಹಶೀಲ್ದಾರ ಸದಾಶಿವ ಮಕ್ಕೋಜಿ, ಕನ್ನಡ ಮತ್ತು ಸಂಸ್ಕೃತ ಇಲಾಖೆ ವಿದ್ಯಾವತಿ ಭಜಂತ್ರಿ,ಯೋಜನಾ ನಿರ್ದೇಶಕರಾದ ರವೀಂದ್ರ ಬಂಗಾರಪ್ಪ, ತಾ ಪಂ ಸಿ ಒ ಮಹೇಶ ಹೊಲಿ, ಕಿತ್ತೂರು ಪ್ರಾಧಿಕಾರದ ಆಯುಕ್ತ ಡಾ. ಸಂತೋಷ ಹಾನಗಲ್ ಅವರುಗಳು ಬರಮಾಡಿಕೊಂಡರು.
ಜ್ಯೋತಿಗೆ ಸ್ವಾಗತ ಮಾಡಿದ ಅಧಿಕಾರಿಗಳು ಹಾಗೂ ಶಾಸಕರು ಪೂಜೆ ನೆರವೇರಿಸಿದರು. ಮೊದಲು ಚನ್ನಮ್ಮ ಮೂರ್ತಿಗೆ ಶಾಸಕರು, ಜಿಲ್ಲಾ ಅಧಿಕಾರಿಗಳು ಮಾಲಾರ್ಪಣೆ ಮಾಡುವುದರ ಮೂಲಕ ಚಾಲನೆ ನೀಡಿದರು. ಇದೆ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಅವರ ಮೂರ್ತಿಗಳಿಗೆ ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಡಿ ಸಿ ಮೊಹಮ್ಮದ ರೋಷನ್, ಎಸ್ ಕೆ ರಾಮರಾಜನ ಮಾಲಾರ್ಪಣೆ ಮಾಡಿದರು.
ನಂತರ ಕಲಾ ತಂಡ ಹಾಗೂ ನೃತ್ಯ, ವಿವಿಧ ಇಲಾಖೆಗಳ ರೂಪಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಚನ್ನಮ್ಮ ಸರ್ಕಲ್ ನಿಂದ ಆರಂಭವಾದ ಪ್ರಮುಖ ರಾಜ್ಯಮರ್ಗದಿಂದ ನೃತ್ಯ, ಜಾಂಜ, ಭಜನೆ, ಡೊಳ್ಳು, ಡೊಳ್ಳು ಕುಣಿತ, ವಿವಿಧ ಕಲಾ ತಂಡ, ಗೊಂಬೆ ಕುಣಿತ, ಪರಶಿವನ ವೇಷ ಧರಿಸಿ ವಿವಿಧ ಕಾರ್ಯಕ್ರಮಗಳೊಂದಿಗೆ ಪೇಟೆ ಗಲ್ಲಿಯ ಮೂಲಕ ಭರ್ಜರಿಯಾಗಿ ಪ್ರಾರಂಭವಾಗಿ ಜನ ಮನ ಸೋರೆಗೊಂಡವು.ಕಳತಂಡಗಳ ಮೆರವಣಿಗೆ ಮೂಲಕ ಕೋಟೆ ಅವರಣಕ್ಕೆ ಚನ್ನಮ್ಮ ಜ್ಯೋತಿಯನ್ನು ಆದರದಿಂದ ತರಲಾಯಿತು.
ಕಿತ್ತೂರಲ್ಲಿ ಎಲ್ಲಿ ನೋಡಿದರಲ್ಲಿ ಜನವೋ ಜನ:
ಶುಕ್ರವಾರದಂದು ದಿ. 23-10-2026 ರಂದು ಪ್ರಾರಂಭವಾದ ಕಿತ್ತೂರು ಉತ್ಸವದ ಮೆರವಣಿಗೆ ನೋಡಲು ಕಿತ್ತೂರು ಕ್ಷೇತ್ರದ ಎಲ್ಲ ಭಾಗಗಳಿಂದ ಜನ ಬಂದರೆ, ರಾಜ್ಯ ಮಾರ್ಗದ ಎರಡು ಕೆಡೆ ಜನ ಜಂಗೂಳಿ ಮತ್ತು ಕಲಾ ತಂಡಗಳ ಪ್ರದರ್ಶನ ರಸ್ತೆ ತುಂಬೆಲ್ಲ ಜನ ಜಾತ್ರೆ ಆಗಿತ್ತು.ಕಲಾ ತಂಡಗಳ ಮೆರವಣಿಗೆಯನ್ನು ಜನರು ತದೆಕಚಿತ್ತದಿಂದ ವೀಕ್ಷಿಸಿದರು.