ಭೋಪಾಲ್: ಮಹಿಳಾ ಅಧಿಕಾರಿಗೆ “ನಿನ್ನ ಹಲ್ಲು ಮುರಿದು, ಜೀವಂತವಾಗಿ ಹೂತು ಹಾಕ್ತೀನಿ” ಎಂದು ಬೆದರಿಕೆ ಹಾಕಿದ ಆರೋಪ ಮಧ್ಯಪ್ರದೇಶದ ಸಚಿವ ನಗರ್ ಸಿಂಗ್ ಚೌಹಾಣ್ ಅವರ ಸಹೋದರ ಇಂದರ್ ಸಿಂಗ್ ಚೌಹಾಣ್ ವಿರುದ್ಧ ಕೇಳಿಬಂದಿದೆ. ಮಹಿಳಾ ಸಬಲೀಕರಣ ಚರ್ಚೆಗೆ ವಿಧಾನಸಭೆಯ ವಿಶೇಷ ಅಧಿವೇಶನ ನಿಗದಿಯಾಗಿದ್ದ ದಿನವೇ ಈ ಘಟನೆ ಬೆಳಕಿಗೆ ಬಂದಿದ್ದು, ಏಪ್ರಿಲ್ 22ರಂದು ಅಲಿರಾಜ್‌ಪುರ ಜನಪದ್ ಪಂಚಾಯತ್ ಕಚೇರಿಯಲ್ಲಿ ನಡೆದದ್ದು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ಕನ್ಯಾ ವಿವಾಹ್ ಯೋಜನೆಯಡಿ ಅನರ್ಹ ಅರ್ಜಿಗಳನ್ನು ತಿರಸ್ಕರಿಸಿದ್ದಕ್ಕೆ ಆಕ್ರೋಶಗೊಂಡು ಕಚೇರಿಗೆ ನುಗ್ಗಿ ಅಧಿಕಾರಿಗೆ ನಿಂದನೆ, ಬೆದರಿಕೆ ಹಾಕಿ ದೈಹಿಕ ಹಲ್ಲೆ ನಡೆಸಿದ ಆರೋಪ ಎದುರಾಗಿದೆ.