ಚಿನ್ನ ಬೆಲೆ ಹೆಚ್ಚಾಯ್ತು, ಚಿನ್ನ ಬೆಲೆ ಹೆಚ್ಚಾಯ್ತು… ಎಂದು ಪ್ರತಿದಿನ ಚಿಂತೆ ಮಾಡುವ ಆಭರಣ ಪ್ರಿಯರ ಸಂಖ್ಯೆ ಜಾಸ್ತಿ ಆಗುತ್ತಿದೆ. ಅದರಲ್ಲೂ ಈ ಹಳದಿ ಲೋಹ ಚಿನ್ನ ಹಾಗೂ ಬೆಳ್ಳಿ ಬೆಲೆ ಇತಿಹಾಸದಲ್ಲೇ ಕಂಡು ಕೇಳರಿಯದ ಮಟ್ಟಿಗೆ ಹೆಚ್ಚಾಗಿದೆ. ಹೀಗಾಗಿ ಜನರು ಕೂಡ ಚಿನ್ನದ ಬಗ್ಗೆ ಯೋಚನೆ ಮಾಡುತ್ತಿದ್ದು, ಭವಿಷ್ಯದಲ್ಲಿ ಬಡವರು ಹಾಗೂ ಮಧ್ಯಮ ವರ್ಗದ ಜನರು ಚಿನ್ನ ಖರೀದಿ ಮಾಡಲು ಆಗುತ್ತಾ? ಎಂಬ ಚರ್ಚೆ ಶುರುವಾಗಿದೆ. ಇನ್ನೇನು ಚಿನ್ನದ ಬೆಲೆ 2,00,000 ರೂಪಾಯಿ ಅಂದ್ರೆ 2 ಲಕ್ಷ ರೂಪಾಯಿಗೆ ತಲುಪಬಹುದು ಎಂಬ ಆತಂಕ ಕೂಡ ಈ ಸಮಯದಲ್ಲೇ ಎದುರಾಗಿತ್ತು. ಇಂತಹ ಸಮಯದಲ್ಲೇ, ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ ಕುಸಿದು ಬೀಳುವ ಸಾಧ್ಯತೆ…
ಚಿನ್ನದ ಬಗ್ಗೆ ನಿಮಗೆಲ್ಲಾ ಗೊತ್ತಿರುವಂತೆ, ಬಹು ಬೇಡಿಕೆಯ ಹಾಗೂ ಮೌಲ್ಯ ಇರುವ ವಸ್ತು. ಅದರಲ್ಲೂ ಭೂಮಿ ಮೇಲೆ ಅತ್ಯಂತ ವಿರಳವಾಗಿ ಸಿಗುವ ವಸ್ತುಗಳ ಪೈಕಿ ಚಿನ್ನ ಕೂಡ ಒಂದಾಗಿದೆ. ಹೀಗಾಗಿಯೇ ಚಿನ್ನ ಬೆಲೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತಿದೆ ಎಂಬ ತಪ್ಪು ಕಲ್ಪನೆ ಜನರಲ್ಲಿ ಮೂಡಿತ್ತು. ಆದರೆ ಅಸಲಿ ಕಾರಣ ಬೇರೆಯೇ ಇದ್ದು, ಕೆಲವು ಶ್ರೀಮಂತ ದೇಶಗಳು ಹಾಗೂ ಉದ್ಯಮಿಗಳು ಭಾರಿ ಪ್ರಮಾಣದಲ್ಲಿ ಚಿನ್ನದ ಮೇಲೆ ಹಣ ಹೂಡಿಕೆ ಮಾಡಿದ್ದರು. ಇದೇ ಕಾರಣಕ್ಕೆ ಚಿನ್ನದ ಬೆಲೆ ದಿಢೀರ್ ಏರಿಕೆ ಕಂಡಿತ್ತು, ಆದರೆ ಈಗ ಆ ಚಿನ್ನವನ್ನು ಮಾರಾಟ ಮಾಡುತ್ತಿರುವ ಕಾರಣಕ್ಕೆ ಚಿನ್ನ ಬೆಲೆ ದೊಡ್ಡ ಮಟ್ಟದಲ್ಲಿ ಏರಿಳಿತ ಕಾಣುತ್ತಿದೆ ಎಂಬ ವಾದವೂ ಈಗ ಶುರುವಾಗಿದೆ. ಇಷ್ಟೆಲ್ಲದರ ನಡುವೆ ಯುದ್ಧದ ಸಮಯದಲ್ಲಿ ಚಿನ್ನದ ಬೆಲೆಯು ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣಬಹುದು ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಹಾಗಾದರೆ ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ ಕುಸಿದು ಬೀಳುತ್ತಾ? ಬನ್ನಿ ತಿಳಿಯೋಣ…

ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ?
ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇಡೀ ಜಗತ್ತಿನ ಆರ್ಥಿಕ ಪರಿಸ್ಥಿತಿ ಅಲ್ಲಾಡಿ ಹೋಗುವಂತೆ ಮಾಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಗ್ಯಾಸ್ ಬೆಲೆ ಕೂಡ ಆಕಾಶ ಮುಟ್ಟುತ್ತಾ ಇದೆ. ಇಂತಹ ಸಮಯದಲ್ಲಿ ಚಿನ್ನದ ಬೆಲೆ ಮಾತ್ರ ಇದ್ದ ಜಾಗದಲ್ಲೇ ಇದ್ದು, ಯುದ್ಧ ಶುರುವಾದ ನಂತರ ಚಿನ್ನ ಬೆಲೆ ಹೆಚ್ಚಾಗುವ ಬದಲು ಕುಸಿತ ಕಂಡಿದೆ. ಆದರೆ ಇದೇ ಸಮಯದಲ್ಲಿ, ಚಿನ್ನದ ಬೆಲೆ ದಿಢೀರ್ 80,000 ರೂಪಾಯಿಗೆ ಕುಸಿದು ಬೀಳುವ ಸಾಧ್ಯತೆ ಬಗ್ಗೆ ಚರ್ಚೆ ಜೋರಾಗಿದೆ. ಏಕೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಯುದ್ಧ ನಿಂತು ಹೋಗುವ ಮುನ್ಸೂಚನೆ ಇದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ 25 ವರ್ಷದಲ್ಲಿ ಇದೇ ಮೊದಲ ಬಾರಿಗೆ ರಷ್ಯಾ ತನ್ನ ಬಳಿ ಇರುವ ಚಿನ್ನ ಮಾರಾಟ ಮಾಡಿದ್ದು, ಈ ವಿಚಾರ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
ಚಿನ್ನದ ಬೆಲೆ ಭಾರಿ ಕುಸಿತ?
ರಷ್ಯಾ ದೇಶದ ಬಳಿ ಭಾರಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಇದ್ದು, 2326 ಟನ್ ಚಿನ್ನ ರಷ್ಯಾದ ಖಜಾನೆಯಲ್ಲಿ ಭದ್ರವಾಗಿದೆ. ಆದರೆ ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿರುವ ರಷ್ಯಾ ದಿಢೀರ್ ತನ್ನ ಬಳಿ ಇರುವ ಬಂಗಾರ ಮಾರಾಟ ಮಾಡಲು ಮುಂದಾಗಿದೆ. ಅದರಲ್ಲೂ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಷ್ಯಾ ತನ್ನ ಬಳಿ ಇರುವ ಚಿನ್ನ ಮಾರಾಟ ಮಾಡಿರುವುದು ಭಾರಿ ಗಮನ ಸೆಳೆದಿದೆ. ಇದರ ಪರಿಣಾಮ ಈಗ ಚಿನ್ನದ ಬೆಲೆಯಲ್ಲಿ ಶೀಘ್ರದಲ್ಲೇ ದೊಡ್ಡ ಕುಸಿತ ಕಾಣುವ ನಿರೀಕ್ಷೆಯು ಮೂಡಿದ್ದು, ಬರೋಬ್ಬರಿ 80,000 ರೂಪಾಯಿಗೆ ಚಿನ್ನ ಬೆಲೆ ಕುಸಿತ ಕಾಣುವ ನಿರೀಕ್ಷೆ ಇದೆ ಅಂತಿದ್ದಾರೆ ತಜ್ಞರು. ಆದರೆ ಹೀಗೆ ಚಿನ್ನದ ಬೆಲೆ 80,000 ರೂಪಾಯಿಗೆ ಕುಸಿತ ಕಾಣಲು ಮೊದಲಿಗೆ ಯುದ್ಧಗಳು ನಿಲ್ಲಬೇಕಿದ್ದು, ಇರಾನ್ ಹಾಗೂ ಅಮೆರಿಕ ಯುದ್ಧ ಸೇರಿದಂತೆ ರಷ್ಯಾ ಮತ್ತು ಉಕ್ರೇನ್ ಯುದ್ಧಕ್ಕೆ ಕೂಡ ಬ್ರೇಕ್ ಬೀಳಬೇಕಿದೆ.