Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಮುದ್ದೇಬಿಹಾಳದಲ್ಲಿ ಇದೇ ದಿ. ೧೬ ರಂದು ದುರ್ಗಾಮಾತಾದೌಡ ಕಾರ್ಯಕ್ರಮ


ತಾಳಿಕೋಟೆ,ಅ,೧೨:  ಮುದ್ದೇಬಿಹಾಳದಲ್ಲಿ ಇದೇ ದಿ. ೧೬ ಶುಕ್ರವಾರರಂದು ಶ್ರೀ ದುರ್ಗಾಮಾತಾದೌಡ ಕಾರ್ಯಕ್ರಮವನ್ನು ಏರ್ಪಡಿಸಲು ಹಿಂದೂಬಾಂಧವರೆಲ್ಲರೂ ನಿರ್ಧರಿಸಿದ್ದೇವೆಂದು ಮುದ್ದೇಬಿಹಾಳದ ಸಾಮಾಜಿಕ ಕಾರ್ಯಕರ್ತರಾದ ಚಂದ್ರಶೇಖರ ಕಲಾಲ ಅವರು ಹೇಳಿದರು. 
ಪಟ್ಟಣದಲ್ಲಿ ಏರ್ಪಡಿಸಲಾದ ದುರ್ಗಾಮಾತಾದೌಡ ಕಾರ್ಯಕ್ರಮದ ಮಂಗಲೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುದ್ದೇಬಿಹಾಳದಲ್ಲಿ ಜರುಗಲಿರುವ ದುರ್ಗಾದೌಡ ಕಾರ್ಯಕ್ರಮದಲ್ಲಿ ಸುಮಾರು ೫೦೦ ಕ್ಕೂ ಮೇಲ್ಪಟ್ಟು ಸುಮಂಗಲೆಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ೯ ಶಕ್ತಿದೇವತೆಗಳಿದ್ದು ಶ್ರೀ ಬನಶಂಕರಿದೇವಸ್ಥಾನದಿಂದ ಮದ್ಯಾಹ್ನ ೩ ಘಂಟೆಗೆ ಸಮಸ್ತ ಹಿಂದೂ ಬಾಂಧವರು ಹಾಗೂ ಸುಮಂಗಲೆಯರಿಂದ ಪಥ ಸಂಚಲನ ಪ್ರಾರಂಭಗೊಂಡು ೯ ಶಕ್ತಿದೇವತೆಗಳ ಸ್ಥಳಗಳಿಗೆ ಭೆಟ್ಟಿ ನೀಡಿ ಉಡಿತುಂಬಿ ಆರತಿ ಬೆಳೆಗುವ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚಲನವು ಹಾಯ್ದು ಸಾಯಂಕಾಲ ೬ ಘಂಟೆಗೆ ಶ್ರೀ ರಾಘವೇಂದ್ರ ಮಂಗಲಕಾರ್ಯಾಲಯದಲ್ಲಿ ದುರ್ಗಾಮಾತಾದೌಡ ಸಮಾರೋಪಗೊಂಡು ಸಭೆಯಾಗಿ ಮಾರ್ಪಡಲಿದೆ ಎಂದರು. ಈ ಸಭೆಯಲ್ಲಿ ಪ್ರಮುಖ ಮಠಾಧೀಶರು, ಗಣ್ಯಮಾನ್ಯರು, ಸಮಸ್ತ ಹಿಂದೂ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆಂದರು. ನಂತರ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಲಗೊಳ್ಳಲಿದೆ ಎಂದು ಹೇಳಿದ ಚಂದ್ರಶೇಖರ ಕಲಾಲ ಅವರು ತಾಳಿಕೋಟೆಯ ಹಿಂದೂ ಬಾಂಧವರಿಗೆ ಕೂಡಾ ಕಾರ್ಯಕ್ರಮಕ್ಕೆ ವಿನಂತಿಪೂರ್ವಕ ಆಹ್ವಾನಿಸಿದರು. 
 ಇದೇ ಸಮಯದಲ್ಲಿ ದುರ್ಗಾಮಾತಾದೌಡ ಕಾರ್ಯಕ್ರಮವನ್ನು ಸಂಘಟಿಸಿದ ಗುರುರಾಜ ಮಾನೆ ಹಾಗೂ ಸಮಸ್ತ ಮಿತ್ರಮಂಡಳಿ ಹಾಗೂ ಮಾನಸಿಂಗ್ ಕೊಕಟನೂರ ಅವರ ಗೆಳೆಯರ ಬಳಗದ ವತಿಯಿಂದ ಸಮಸ್ತ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತಲ್ಲದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯಮಾನ್ಯರಿಗೆ ಪುಷ್ಪನೀಡುವ ಮೂಲಕ ಎಲ್ಲರಿಗೂ ಸ್ವಾಗತಿಸಿ ಬಿಳ್ಕೊಡಲಾಯಿತು. 

 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ