Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bagalkot

ಮಹಲಿಂಗಪುರಕ್ಕೆ ಎರಡು ನೂತನ ಬಸ್‌ಗಳ ಸಂಚಾರ ಆರಂಭ: ಸಾರ್ವಜನಿಕರ ಹೋರಾಟಕ್ಕೆ ಸಿಕ್ಕಿತು ಫಲ!

ಬೆಂಗಳೂರು ಮಾರ್ಗಕ್ಕೂ ಸರ್ಕಾರಿ ಬಸ್ ಬಿಡಲು ಆಗ್ರಹ



ಮಹಾಲಿಂಗಪುರ,ಅ,೨೩ : ಪಟ್ಟಣದ ಬಸ್‌ಗಳ ಕೊರತೆ ಹಾಗೂ ಬೆಳಗಿನ ಸಮಯದಲ್ಲಿ ಪ್ರಯಾಣಿಕರು ಎದುರಿಸುತ್ತಿದ್ದ ತೊಂದರೆಗಳ ಕುರಿತು ಸೆಪ್ಟೆಂಬರ್ ೨೨ರಂದು ಪತ್ರಿಕಾಗೋಷ್ಠಿ ನಡೆಸಿ ಸಾರಿಗೆ ಇಲಾಖೆಯ ಗಮನ ಸೆಳೆದಿದ್ದ ಸಾರ್ವಜನಿಕರ ಪ್ರಯತ್ನಕ್ಕೆ ಇದೀಗ ಫಲ ದೊರೆತಿದೆ. ಈ ಕುರಿತು ಸೆಪ್ಟೆಂಬರ್ ೨೩ರಂದು ಲೋಕದರ್ಶನ ದಿನಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ, ಮುಧೋಳ ಸಾರಿಗೆ ಘಟಕದಿಂದ ಮಹಾಲಿಂಗಪುರ ಮಾರ್ಗಕ್ಕೆ ಎರಡು ನೂತನ ಬಸ್‌ಗಳ ಸಂಚಾರ ಆರಂಭಿಸಲಾಗಿದೆ.
ಮಹಾಲಿಂಗಪುರದಿಂದ ಬೆಳಗಾವಿಗೆ ಬೆಳಿಗ್ಗೆ ೬ ಗಂಟೆಗೆ ನೂತನ ಬಸ್ ಸಂಚರಿಸಲಿದೆ. ಮತ್ತೊಂದು ಬಸ್ ಬೆಳಿಗ್ಗೆ ೭.೧೫ಕ್ಕೆ ಮುಧೋಳದಿಂದ ಹೊರಟು ೭.೪೫ಕ್ಕೆ ಮಹಾಲಿಂಗಪುರ ತಲುಪಲಿದ್ದು, ಅಲ್ಲಿಂದ ಅಥಣಿಯತ್ತ ಪ್ರಯಾಣ ಮುಂದುವರಿಸಲಿದೆ. ಈ ಬಸ್‌ಗಳ ಸಂಚಾರದಿಂದ ಬೆಳಗಿನ ವೇಳೆಯಲ್ಲಿ ಉದ್ಯೋಗ, ವ್ಯಾಪಾರ, ಶಿಕ್ಷಣ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಪ್ರಯಾಣಿಸುವ ಜನರಿಗೆ ಅನುಕೂಲವಾಗಲಿದೆ.
ಬೆಂಗಳೂರಿಗೂ ಸರ್ಕಾರಿ ಬಸ್ ಬಿಡಲು ಸಾರ್ವಜನಿಕರ ಆಗ್ರಹ : ಮಹಾಲಿಂಗಪುರದಿಂದ ಬೆಂಗಳೂರಿಗೆ ಪ್ರತಿದಿನ ೧೮ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಬೆಂಗಳೂರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ, ಇದೇ ಮಾರ್ಗದಲ್ಲಿ ಕನಿಷ್ಠ ಒಂದು ಸರ್ಕಾರಿ ಬಸ್‌ನ್ನಾದರೂ ಮಹಾಲಿಂಗಪುರದಿಂದ ನೇರವಾಗಿ ಬೆಂಗಳೂರಿಗೆ ಓಡಿಸಬೇಕು ಎಂದು ಸಾರ್ವಜನಿಕರು ಸಾರಿಗೆ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಖಾಸಗಿ ಬಸ್‌ಗಳ ಸಂಚಾರ ಹೆಚ್ಚಿದ್ದರೂ ಸರ್ಕಾರಿ ಬಸ್ ಸೌಲಭ್ಯ ಇಲ್ಲದಿರುವುದು ಪ್ರಯಾಣಿಕರ ಗಮನ ಸೆಳೆದಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಹಾಗೂ ವಿವಿಧ ಕೆಲಸಗಳ ನಿಮಿತ್ತ ಬೆಂಗಳೂರಿಗೆ ತೆರಳುವ ಜನರಿಗೆ ಸರ್ಕಾರಿ ಬಸ್ ಅನುಕೂಲಕರವಾಗಲಿದೆ. ಖಾಸಗಿ ಬಸ್‌ಗಳ ಪ್ರಯಾಣ ದರಕ್ಕೆ ಹೋಲಿಸಿದರೆ ಸರ್ಕಾರಿ ಸಾರಿಗೆ ಸೇವೆ ಜನಸಾಮಾನ್ಯರಿಗೆ ಆರ್ಥಿಕವಾಗಿ ನೆರವಾಗಬಹುದು ಎಂಬ ನಿರೀಕ್ಷೆಯೂ ಇದೆ. ಆದ್ದರಿಂದ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ ಮಹಾಲಿಂಗಪುರದಿಂದ ಬೆಂಗಳೂರಿಗೆ ಕನಿಷ್ಠ ಒಂದು ಸರ್ಕಾರಿ ಬಸ್‌ನ್ನಾದರೂ ಆರಂಭಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಾರ್ವಜನಿಕರ ಪ್ರಯತ್ನಕ್ಕೆ ಫಲ : ಮಹಾಲಿಂಗಪುರದಿಂದ ಬೆಳಗಾವಿ, ಅಥಣಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳುವ ಪ್ರಯಾಣಿಕರು ಸೂಕ್ತ ಸಮಯಕ್ಕೆ ಬಸ್‌ಗಳು ಲಭ್ಯವಾಗದೆ ತೊಂದರೆ ಅನುಭವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪತ್ರಿಕಾಗೋಷ್ಠಿ ನಡೆಸಿ ಸಾರಿಗೆ ಇಲಾಖೆಗೆ ಮನವಿ ಮಾಡಿದ್ದರು. ಸಾರ್ವಜನಿಕರ ಬೇಡಿಕೆಯನ್ನು ಲೋಕದರ್ಶನ ದಿನಪತ್ರಿಕೆ ಸೆಪ್ಟೆಂಬರ್ ೨೩ರಂದು ವರದಿ ಮೂಲಕ ಬೆಳಕಿಗೆ ತಂದಿತ್ತು. ಇದೀಗ ಎರಡು ನೂತನ ಬಸ್‌ಗಳ ಸಂಚಾರ ಆರಂಭವಾಗಿರುವುದು ಸಾರ್ವಜನಿಕರ ಪ್ರಯತ್ನ ಹಾಗೂ ಪತ್ರಿಕಾಗೋಷ್ಠಿಯ ಫಲಶ್ರುತಿಯಾಗಿ ಗಮನ ಸೆಳೆದಿದೆ.
ಸಾರ್ವಜನಿಕರ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದು, ಅವುಗಳಿಗೆ ಪರಿಹಾರ ದೊರಕಿಸಲು ಪತ್ರಿಕಾರಂಗ ವಹಿಸುವ ಪಾತ್ರಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ. ಅದೇ ರೀತಿ, ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಬೇಕು ಮತ್ತು ಬೆಂಗಳೂರಿಗೆ ಸರ್ಕಾರಿ ಬಸ್ ಸೇವೆ ಆರಂಭಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.
ಈ ಸಂದರ್ಭದಲ್ಲಿ ಶ್ರೀಶೈಲಪ್ಪ ಉಳ್ಳಾಗಡ್ಡಿ, ಗೋಲೇಶ ಅಮ್ಮಣ್ಣಗಿ, ಗುರುಲಿಂಗಪ್ಪ ಜಮಖಂಡಿ, ಈಶ್ವರ ಮುರಗೋಡ, ಎಂ.ಆರ್. ತೇರದಾಳ, ಶೇಖರ ಅಂಗಡಿ, ಗಂಗಾಧರ ಮೇಟಿ, ಹಣಮಂತ ಜಮಾದಾರ, ಸಿದ್ದಪ್ಪ ಶಿರೋಳ, ವೀರೇಶ ಆಸಂಗಿ, ಮಲ್ಲಪ್ಪ ಮಿರ್ಜಿ, ರಾಜೇಂದ್ರ ಮಿರ್ಜಿ, ರಫೀಕ್ ಮಾಲ್ದಾರ, ಲಕ್ಷ್ಮಣ ಬ್ಯಾಳಿ, ರಾಜೇಂದ್ರ ಯಾದವಾಡ , ಎಂ ಎಚ್ ಕರಡಿ ,ರಾಘು ಗರಗಟ್ಟಿ, ಪತ್ರಕರ್ತರಾದ ಜಯರಾಮ್ ಶೆಟ್ಟಿ, ಮೀರಾ ತಟಗಾರ ,ಸಾರಿಗೆ ನಿಯಂತ್ರಕರಾದ ಲಕ್ಷ್ಮಣ ಭಜಂತ್ರಿ, ರಮೇಶ ಕೋಣೆಗೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ, ವಿಕಲಚೇತನರ ಬಾಳಿಗೆ ಬೆಳಕಾದ ಸ್ನೇಹ ಜ್ಯೋತಿ ಸಂಸ್ಥೆ : ಧರ್ಮಾಧ್ಯಕ್ಷ ಡೇರಿಕ್ ಫರ್ನಾಂಡಿಸ್ ಧಾರವಾಡ ಜಿಲ್ಲಾ ಕ್ರೀಡಾ ವಸತಿ ನಿಲಯದ ಅಥ್ಲೇಟಿಕ್ ಕ್ರೀಡಾಕೂದಲ್ಲಿ ಸಾಧನೆಮಹಿಳೆಯರ ಸಾಮಾಜಿಕ, ಆರ್ಥಿಕ ಪ್ರಗತಿಗೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ: ದಯಾಶೀಲಅಂಜನಾದ್ರಿ ದೇವಸ್ಥಾನದ ಆಡಳಿತ ವಿವಾದ: ನ್ಯಾಯಾಲಯದ ಆದೇಶದಂತೆ ಅವಕಾಶ ನೀಡಿಸುರಕ್ಷಿತ ಬಚಪನ್ ಅಭಿಯಾನ: ಬೂದಗುಂಪಾದಲ್ಲಿ ಮಕ್ಕಳ ಹಕ್ಕುಗಳು & ಕಾನೂನುಗಳ ಜಾಗೃತಿ ಕಾರ್ಯಕ್ರಮನವೆಂಬರ್ 3 ರಂದು ಗಂಗಾವತಿಯಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶನಾಳೆ ದಲಿತ ಸೇನೆ ರಾಜ್ಯ ಸಮಿತಿಯ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳಿಗೆ ಸನ್ಮಾನಹುಲಿಗೆಮ್ಮ ದೇವಿ ದೇವಸ್ಥಾನದ ಅಧಿಕಾರಿ ವಿರುದ್ಧ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಕೊಪ್ಪಳ ಭಾಗ್ಯನಗರ ಬಂದ್‌ಗೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಬೆಂಬಲಹಣಕಾಸು ಒಳಗೊಳ್ಳುವಿಕೆ ಸ್ಯಾಚುರೇಶನ್ ಅಭಿಯಾನ: ವಿಶೇಷ ಜಾಗೃತಿ ಪೋಸ್ಟರ್ ಬಿಡುಗಡೆ